
ಕೋಲಾರ,ಜೂ,೬- ಕೋಲಾರ ಜಿಲ್ಲಾ ಕುರುಬರ ಸಂಘದ ಕಾರ್ಯಕಾರಿ ಸಮಿತಿಯನ್ನು ೯೦ ದಿನದೊಳಗೆ ಕರೆದು ಸಮಿತಿಯನ್ನು ರಚಿಸಲು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಮಾಜಿ ಅಧ್ಯಕ್ಷನಾದ ನನಗೆ ನೋಟಿಸ್ ಜಾರಿ ಮಾಡಿದ್ದಾರೆ. ಅದರ ಪ್ರಕಾರ ನೊತನ ಸಮಿತಿ ರಚನೆಗೆ ಸಭೆಯನ್ನು ೧೫-೨೦ ದಿನದೊಳಗೆ ಕರೆದು ನೂತನ ಸಮಿತಿಯನ್ನು ರಚಿಸಲಾಗುವುದು ಎಂದು ಜಯರಾಮ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಕಳೆದ ೨೦೨೪ರ ನವೆಂಬರ್ ೩೦ ರಂದು ಅಂದಿನ ಅಧ್ಯಕ್ಷರಾದ ತಂಬಳ್ಳಿ ಮುನಿಯಪ್ಪನವರು ೫ ವರ್ಷದ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ನೀಡಿದ ರಾಜಿನಾಮೆಯಿಂದ ತೆರವು ಅಗಿದ್ದ ಸ್ಥಾನಕ್ಕೆ ೨೦೨೪ರ ಡಿಸೆಂಬರ್ ೧೫ ರಂದು ಕರೆದಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಾರ್ವನುಮತದಿಂದ ಅವಿರೋಧವಾಗಿ ಮಾಜಿ ಸಚಿವ ವರ್ತೂರು ಪ್ರಕಾಶ ಸಮ್ಮುಖದಲ್ಲಿ ನನ್ನನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿ ಸದಸ್ಯತ್ವದ ಜವಾಬ್ದಾರಿಯನ್ನು ವಹಿಸಿದ್ದರು. ಇದನ್ನು ನಡುವಳಿಕೆ ಪುಸ್ತಕದಲ್ಲಿ ದಾಖಲು ಮಾಡಿದ್ದರು. ಇದನ್ನು ಮೊಬೈಲ್‌ನಲ್ಲಿ ದಾಖಲಿಸಿ ಕೊಂಡಿದ್ದರಿಂದ ನಿಮ್ಮ ಮುಂದೆ ಸತ್ಯಂಶದ ದಾಖಲೆ ಪ್ರದರ್ಶಿಸಲು ಸಾಧ್ಯವಾಯಿತು ಎಂದರು.
ತಂಬಳ್ಳಿ ಮುನಿಯಪ್ಪನವರು ಉಪನಿಂಧಕರ ಕಚೇರಿಯಲ್ಲಿನ ನಡುವಳಿ ಪುಸ್ತಕ ಹಾಗೂ ಇತರೆ ದಾಖಲೆಗಳನ್ನು ಒಪ್ಪಿಸುವಾಗ ನಡುವಳಿ ಪುಸ್ತಕದಲ್ಲಿ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸಮಿತಿಯ ೨೧ ಮಂದಿ ಸದಸ್ಯರು ಸಹಿ ಮಾಡಿದ್ದ ಹಾಳೆಯನ್ನು ಹರಿದು ಹಾಕಿ ನೀಡಿದ್ದಾರೆ. ಸಹಕಾರ ಸಂಘಗಳ ಬೈಲ ಪ್ರಕಾರ ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆಯುವ ಅಧಿಕಾರ ಅಧ್ಯಕ್ಷರಿಗೆ ಮಾತ್ರ ಇದೆ ಎಂದರು.
ಅದರೆ ಮಾಜಿ ಅಧ್ಯಕ್ಷರಾದ ತಂಬಳ್ಳಿ ಮುನಿಯಪ್ಪನವರು ನನ್ನನ್ನು ಹಂಗಾಮಿ ಅಧ್ಯಕ್ಷನೆಂದು ಬಿಂಬಿಸಿ ತಾವೇ ಮಾಜಿ ಅಧಿಕೃತ ಅಧ್ಯಕ್ಷನೆಂದು ಘೋಷಿಸಿ ಕೊಂಡು ಕಾರ್ಯಕಾರಿ ಸಮಿತಿಯ ೧೦ ಮಂದಿ ಸದಸ್ಯರನ್ನು ಕೈ ಬಿಟ್ಟು ಸಂಘದ ಸಭೆಯನ್ನು ಕರೆದು ಸಂಘವನ್ನು ರಚಿಸಲು ಮುಂದಾಗಿದ್ದ ಸಂದರ್ಭದಲ್ಲಿ ಅಧಿಕೃತವಾಗಿ ಅಧ್ಯಕ್ಷನಾಗಿ ಸಭೆಯನ್ನು ಕರೆಯುವ ಅಧಿಕಾರ ತಮಗೆ ಮಾತ್ರ ಇತ್ತು ಹಾಗಾಗಿ ತಂಬಳ್ಳಿ ಮುನಿಯಪ್ಪನವರ ಅರ್ಜಿಗೆ ಅಕ್ಷೇಪಣೆ ಸಲ್ಲಿಸಿದೆ ಎಂದು ಪ್ರತಿಪಾದಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಿಸಿರುವಂತೆ ಪೂರ್ಣ ಅನುದಾನ ಇನ್ನು ಸಿಕ್ಕಿಲ್ಲ ಒಟ್ಟಾರೆಯಾಗಿ ಮುಂದಿನ ಕನಕ ಜಯಂತಿಗೆ ಕನಕ ಭವನವನ್ನು ಉದ್ಘಾಟಿಸುವುದಾಗಿ ಜಯರಾಮ್ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಜಿ.ಎಫ್.ರಾಮೇಗೌಡ, ಶ್ರೀನಿವಾಸಪುರ ನಾರಾಯಪ್ಪ , ನಾಗರಾಜ್, ಮಲ್ಲಿಕಾರ್ಜುನ್, ಜಂಬಪುರ ವೆಂಕಟೇಶ್, ಸರಸ್ಪತಮ್ಮ, ಸೇರಿದಂತೆ ಮುಖಂಡರಾದ ಅಂಚೆ ಅಶ್ವಥ್, ಕೆ.ಎಸ್.ಆರ್.ಟಿ.ಸಿ. ನಾರಾಯಣಸ್ವಾಮಿ, ಕೈಲಾಸ್, ನಾಗಭೋಷಣ್, ಮುಖೇಶ್, ಇತರರಿದ್ದರು.

































