ಬ್ರೀಮ್ಸ್ ವಸತಿ ಗೃಹ ಸುತ್ತಲಿನ ಒತ್ತುವರಿ ತೆರವುಗೊಳಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ, ನ.05: ಬ್ರೀಮ್ಸ್ ವಸತಿ ಗೃಹಗಳ ವ್ಯಾಪ್ತಿಯಲ್ಲಿ ಬರುವ ಜಾಗದಲ್ಲಿ ಕೆಲ ಅಪರಿಚಿತರು ರವಿವಾರ ರಾತ್ರಿ 3 ಅಡಿ ಎತ್ತರದ ಗೋಡೆ ಕಟ್ಟಿ, 1010 ಅಡಿ ಅಳತೆಯ ಟಿನ್ ಶೆಡ್ ಅಳವಡಿಸಿ ಒತ್ತುವರಿ ಮಾಡಿದ್ದನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತೆರವುಗೊಳಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತ ಮೊಹಮದ್ ಶಕೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.
ಈ ಒತ್ತುವರಿ ಕುರಿತು ಬ್ರೀಮ್ಸ್ ನಿರ್ದೇಶಕರಾದ ಡಾ.ಶಿವಕುಮಾರ ಶೇಟಕರ ಅವರು ಜಿಲ್ಲಾಧಿಕಾರಿಗಳಿಗೆ ಹಾಗೂ ಪೆÇೀಲಿಸ್ ಇಲಾಖೆಗೆ ಲಿಖಿತ ಪತ್ರವೊಂದನ್ನು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಕ್ಷಣವೇ ಈ ಕ್ರಮ ಕೈಗೊಂಡರು. ಒತ್ತುವರಿ ಮಾಡಿದವರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ತೆರವು ಕಾರ್ಯಾಚರಣೆ ವೇಳೆ ಯಾರು ಸಹ ಸ್ಥಳಕ್ಕೆ ಬಂದಿಲ್ಲವೆಂದು ಉಪವಿಭಾಗಾಧಿಕಾರಿ ಅವರು ತಿಳಿಸಿದ್ದಾರೆ.