ಬೀದಿ ನಾಯಿಗಳಿಗೆ ಎಬಿಸಿಗೆ ಜಿಲ್ಲಾಧಿಕಾರಿ ಸೂಚನೆ

ಕೋಲಾರ, ಸೆ,೪-ಬೀದಿ ನಾಯಿಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಮತ್ತು ಅದರಿಂದ ವಿವಿಧ ರೋಗಗಳು ಬರುತ್ತಿರು ವುದರಿಂದ ಸಂತಾನೋತ್ಪತ್ತಿ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಬೀದಿನಾಯಿ ಗಳಿಗೆ ಎಬಿಸಿ ಲಸಿಕೆ ಹಾಕಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಜಿಲ್ಲಾಧಿಕಾರಿಗಳ ಸಭಾಂಗಣ ದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಘಕಟಕ ಕೋಲಾರ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಸರ್ವೇಕ್ಷಣಾ ಸಮನ್ವಯ ಸಮಿತಿ ಸಭೆಯನ್ನು ಕುರಿತು ಮಾತನಾಡಿದರು.


ಸಮಿತಿಯ ಉದ್ದೇಶಗಳು:-ವೈದ್ಯಕೀಯ, ಪಶುವೈದ್ಯಕೀಯ ಮತ್ತು ಸಂಬಂಧಿತ ಇಲಾಖೆಗಳು/ ಸಂಸ್ಥೆಗಳಂತಹ ವಿವಿಧ ವಲಯಗಳ ನಡುವೆ ಜಾಲಬಂಧವನ್ನು ಅಭಿವೃದ್ಧಿ ಪಡಿಸಲು ನಿಯಮಾವಳಿಗಳನ್ನು ರೂಪಿಸಲು ರಾಜ್ಯ ಮಟ್ಟದ ಸಮಿತಿಯೊಂದಿಗೆ ಸಂಪರ್ಕದಲ್ಲಿ ಕೆಲಸ ಮಾಡುವುದು.ಜಿಲ್ಲೆಯಲ್ಲಿ ಪ್ರಚಲಿತದಲ್ಲಿರುವ ಆದ್ಯತೆಯ ಪ್ರಾಣಿಜನ್ಯ ಕಾಯಿಲೆಯ ಹೊರೆಯನ್ನು ಪರಿಶೀಲಿಸುವುದು ಮತ್ತು ಪ್ರಾಣಿಜನ್ಯ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ತೆಗೆದುಕೊಳ್ಳಬೇಕಾದ ನಿರ್ದಿಷ ಕ್ರಮಗಳ ಕುರಿತು ಆಯಾ ಜಿಲ್ಲಾ ಅಧಿಕಾರಿಗಳಿಗೆ ಸಲಹೆ ನೀಡುವುದು. ಹೊರಹೊಮ್ಮುವ ಮತ್ತು ಮರುಕಳಿಸುವ ಪ್ರಾಣಿಜನ್ಯ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಆಯಾ ಅಧಿಕಾರಿಗಳು ಕೈಗೊಂಡ ಪ್ರಯತ್ನಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದು.ಜಿಲ್ಲೆಯಲ್ಲಿ ಪ್ರಾಣಿಜನ್ಯ ರೋಗಗಳ ನಿಯಂತ್ರಣಕ್ಕಾಗಿ ಜಿಲ್ಲಾ ಮಟ್ಟದ ಕ್ಷಿಪ್ರ ಪ್ರತಿಕ್ರಿಯೆ ತಂಡದೊಂದಿಗೆ ಸಮನ್ವಯ. ವೈದ್ಯಕೀಯ ಮತ್ತು ಪಶುವೈದ್ಯಕೀಯ ವೃತ್ತಿಪರರ ಸಾಮರ್ಥ್ಯ ವೃದ್ಧಿ ಮತ್ತು ಜಂಟಿ ತರಬೇತಿಗಾಗಿ ಆಯಾ ಅಧಿಕಾರಿಗಳಿಗೆ ಸಲಹೆ ನೀಡುವುದು. ಸಮಿತಿಯು ಸಾಮಾನ್ಯವಾಗಿ ವಷಕ್ಕೆ ಕನಿಷ್ಠ ಎರಡು ಬಾರಿ ತನ್ನ ಸಭೆಯನ್ನು ನಡೆಸುತ್ತದೆ ಎಂದು ತಿಳಿಸಿದರು.


ಬಿಸಿರಕ್ತದ ಜೀವಿಗಳಲ್ಲಿ ರೇಬೀಸ್ ವೈರಸ್ ತೀವ್ರವಾದ ಎನ್ಸೆಫಾಲಿಟಿಸ್ (ಮೆದುಳಿನ ಉರಿಯೂತ) ಉಂಟು ಮಾಡುತ್ತದೆ.


ರೇಬೀಸ್ ನೈಸರ್ಗಿಕ ಅರ್ಥದಲ್ಲಿ ಮನುಷರ ಕಾಯಿಲೆಯಲ್ಲ.ಸಾರ್ವಜನಿಕ ಆರೋಗ್ಯದ ಮೇಲೆ ರೇಬೀಸ್‌ನ ಪರಿಣಾಮವು ಬಾಧಿತ ಪ್ರಾಣಿಗಳ ಜನಸಂಖ್ಯೆಯ ಅಂದಾಜು ಮತ್ತು ಪ್ರಾಣಿಗಳಿಂದ ಮನುಷರಿಗೆ ರೇಬೀಸ್ ಹರಡುವುದನ್ನು ತಡೆಗಟ್ಟುವಲ್ಲಿ ಒಳಗೊಂಡಿರುವ ಕ್ರಮಗಳನ್ನು ಒಳಗೊಂಡಿದೆ ಎಂದರು.ಜಿಲ್ಲೆಯಲ್ಲಿ ೨೦೨೫ ಆಗಸ್ಟ್ ವರೆಗೂ ೭೮೮೭ ನಾಯಿ ಕಚ್ಚಿರುವ ಪ್ರಕರಣಗಳು ದಾಖಲಾಗಿದ್ದು ಯಾವುದೇ ಸಾವು ಸಂಭವಿಸಿಲ್ಲ ಎಂದು ತಿಳಿಸಿದರು.


ನಿಯಂತ್ರಣಕ್ಕೆ ಎನರ್ಸಿಪಿ ಕ್ರಮಗಳು:- ನಗರ ಸ್ಥಳೀಯ ಸಂಸ್ಥೆಯು ಪ್ರಾಣಿಗಳ ಜನನ ನಿಯಂತ್ರಣ ಕ್ರಮ ಕೈಗೊಳ್ಳಬೇಕು, ಪಶುವೈದ್ಯಕೀಯ ಇಲಾಖೆ – ಸಮೀಕ್ಷೆ (ಆದ್ಯತೆಯ ಮೇಲೆ ಲಸಿಕೆ),ಘನತ್ಯಾಜ್ಯ ನಿರ್ವಹಣೆ – ಕಸಾಯಿಖಾನೆ ಬಳಿ, ಸಿ.ಹೆಚ್.ಸಿ ಮತ್ತು ಪಿ.ಹೆಚ್.ಸಿ ಗಳಲ್ಲಿ ಎ.ಆರ್.ವಿ ಲಸಿಕೆ ಮತ್ತು ರಿಗ್ ಕುರಿತು ಸಾರ್ವಜನಿಕರಿಗೆ ಮಾಹಿತಿ, ಪ್ರತಿಯೊಂದು ಸೌಲಭ್ಯ ದಲ್ಲಿ ಗೊತ್ತುಪಡಿಸಿದ ಗಾಯ ತೊಳೆಯುವಿಕೆ, ಗಾಯ ತೊಳೆಯುವುದು ಮತ್ತು ನಿರ್ವಹಣೆಗಾಗಿ ಸಿಬ್ಬಂದಿ ದಾದಿಯರಿಗೆ ತರಬೇತಿ ನೀಡಬೇಕು ಮತ್ತು ಯಾವುದೇ ನಾಯಿ ಕಡಿತದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಇಲ್ಲದೆ ಹೋಗಬಾರದು ಎಂದು ತಿಳಿಸಿದರು.


ಹಾವು ಕಡಿತ, ಕೋತಿ ಕಡಿತ,ಬೆಕ್ಕು ಕಡಿತ, ಇಲಿಯ ಮೂತ್ರದಿಂದ ಆಗುವಂತಹ ತೊಂದರೆಗಳನ್ನು ಸಭೆಯಲ್ಲಿ ಚರ್ಚಿಸಿ ನಿರ್ಮೂಲನ ಮಾಡುವ ಕ್ರಮಗಳ ಬಗ್ಗೆ ತಿಳಿಸಿದರು.
ಗ್ರಾಮೀಣ ಆರೋಗ್ಯ ನೈರ್ಮಲ್ಯ ಸಮಿತಿಯಿಂದ ನಾಯಿ ಕಡತದ ಬಗ್ಗೆ ಅರಿವು ಮೂಡಿಸುವುದು.ಗ್ರಾಮಗಳಲ್ಲಿ ಮಾಂಸದ ಅಂಗಡಿಯ ತ್ಯಾಜ್ಯಗಳನ್ನು ಸರಿಯಾದ ರೀತಿ ವಿಲೇವಾರಿ ಮಾಡುವುದು.ಗ್ರಾಮಗಳಲ್ಲಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಯನ್ನು ಮಾಡಲು ಪಂಚಾಯತ್ ರಾಜ್ ಇಲಾಖೆಗೆ ತಿಳಿಸಿದರು.


ನಾಯಿ ಕಡಿತದ ಬಗ್ಗೆ ಮಕ್ಕಳಿಗೆ ಆರೋಗ್ಯ ಶಿಕ್ಷಣ ನೀಡುವುದು.ಕೈತೊಳಿಯುವ ವಿಧಾನವನ್ನು ಮಕ್ಕಳಿಗೆ ತಿಳಿಹೇಳಿ ಅನುಸರಿಸುವಂತೆ ನೊಡಿಕೊಳ್ಳುವುದು. ವೈಯಕ್ತಿಕ ಶುಚ್ಚಿತ್ವದ ಬಗ್ಗೆ ಶಾಲಾ ಕಾಲೇಜು ಗಳಲ್ಲಿ ಅರಿವು ಮೂಡಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.