ವಿಜಯಪುರ :ಅ.10: ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಬೀಬ ನಗರ ಜೋರಾಪುರ ಪೇಠ ವಿದ್ಯಾ ನಗರ ರೋಡ್‍ನಲ್ಲಿನ ಅಲ್ ಹಸ್ನಾತ ಉರ್ದು ಪ್ರೈಮರಿ ಹೈಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ವ್ಹೆಟ್ ಲಿಪ್ಟಿಂಗ್ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಕೆಯ ಸಹಾಯಕ ನಿರ್ದೇಶಕರ ರಾಜಶೇಖರ ದೈವಾಡಿ, ದೈಹಿಕ ಶಿಕ್ಷಕರಾದ ಡಾ. ಮಕಾಂದಾರ, ಸಂಸ್ಥೆಯ ಅಧ್ಯಕ್ಷರು, ಸದಸ್ಯರು ಆಡಳಿತ ಮಂಡಳಿ ಸದಸ್ಯರು, ವ್ಹೇಟ ಲಿಪ್ಟಿಂಗ್ ತರಬೇತಿದಾರರಾದ ಮೊಹ್ಮದ ಅಮೀರ, ಕ್ರೀಡಾ ಅಸೋಶಿಯೇಶ ಕಾರ್ಯದರ್ಶಿ ಚಂದ್ರಕಾಂತ ತಾರನಾಳ, ಸೇರಿದಂತೆ ಲಚ್ಯಾಣ, ಇಂಡಿ, ಸಿಂದಗಿ ಕ್ರೀಡಾ ಪಟುಗಳ ಉಪಸ್ಥಿತರಿದ್ದರು.






















