Home ಜಿಲ್ಲೆ ಜಿಲ್ಲಾ ಮಟ್ಟದ ಕ್ರೀಡಾಕೂಟ

ಜಿಲ್ಲಾ ಮಟ್ಟದ ಕ್ರೀಡಾಕೂಟ


ಗದಗ,ಫೆ.೧೨:
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹಾಗೂ ನೌಕರರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ವಿಭಾಗ ಮಟ್ಟದ ಅಧಿಕಾರಿಗಳು ನೌಕರರಿಗೆ ಕ್ರೀಡಾಕೂಟ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಗಳು ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಲಕ್ಕುಂಡಿಯಲ್ಲಿ ನಡೆದವು.


ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಶ್ರೀಮತಿ ನಂದಾ ಹಣಬರಟ್ಟಿ, ಪೋಲಿಸ್ ಉಪಾಧೀಕ್ಷಕರು ವಿದ್ಯಾನಂದ ನಾಯಕ, ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ ಎಮ್.ವಿ ಚಳಗೇರಿ, ಕರ್ನಾðಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಬಸವರಾಜ ಬಳ್ಳಾರಿ ರವರು ಜಿಲ್ಲಾ ಮಟ್ಟದ ಕ್ರೀಡಾಕೂಟಗಳ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.


ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀಮತಿ ಮಂಜುಳಾ ಸೋಮಕ್ಕನವರ, ಸಹಾಯಕ ನಿರ್ದೇಶಕರಾದ ಗೋಪಾಲ ಲಮಾಣಿ, ಬಿ. ಎಮ್ ಬಡಿಗೇರ, ಉಧಯಕುಮಾರ ಎಲಿವಾಳ, ಶ್ರೀಮತಿ ಗೀತಾ ಆಲೂರು, ಪ್ರಾಂಶುಪಾಲರಾದ ಶ್ರೀಮತಿ ವೈಶಾಲಿ ಸೊಲ್ಲಾಪೂರ, ಲೆಕ್ಕ ಅಧೀಕ್ಷಕರು ಗೋಪಾಲ ಲಮಾಣಿ , ಶ್ರೀಮತಿ ಮಂಜುಳಾ ಎನ್, ಶ್ರೀಮತಿ ವಿದ್ಯಾವತಿ ಕುರಹಟ್ಟಿ , ಸಮಾಜ ಕಲ್ಯಾಣ ಇಲಾಖೆಯ ಎಲ್ಲ ಸಿಬ್ಬಂದಿಗಳು. ಕ್ರೀಡಾ ಕೂಟಗಳಲ್ಲಿ ಭಾಗವಹಿಸುವಂತಹ ಎಲ್ಲ ಸಿಬ್ಬಂದಿಗಳು, ಕ್ರೆöÊಸ್ ವಸತಿ ಶಾಲೆಗಳ ಎಲ್ಲ ಪ್ರಾಂಶುಪಾಲರು. ದೈಹಿಕ ಶಿಕ್ಷಕರು, ಚಿತ್ರಕಲಾ ಶಿಕ್ಷಕರು, ಸಂಗೀತ ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿದರು.