
ಯಾದಗಿರಿ:ನ.೮: ಮೋಬೈಲ್ ಯುಗದಲ್ಲಿ ಜನಪದ ಕಲೆಗಳು ನಶಿಸಿ ಹೋಗಬಾರದೆಂಬ ಉದ್ದೇಶ ದಿಂದ, ಒಂದುದಿನವಾದರು ನಾವು ನಿವೇಲ್ಲಾರು ಸಂತೋಷದಿAದ ಕೂಡಿ ಕನ್ನಡಿಗರಾಗಿ ಹುಟ್ಟಿ ಕನ್ನಡದ ಜಾತ್ರೆ ಮಾಡೋಣ ಅನ್ನುವ ಉದೇಶದಿಂದ ಜಿಲ್ಲಾ ಮಟ್ಟದ ಸಂಗೀತ ಕಲರವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಶ್ರೀ ಮತಿ ಉತ್ತರದೇವಿ ಎಸ್. ಮಠಪತಿ ಅವರು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ, ಹಾಡಿರೇ ರಾಗಗಳ ತೂಗಿರೆ ದೀಪಗಳ ೨೦೨೫ ಜಿಲ್ಲಾ ಮಟ್ಟದ ಸಂಗೀತ ಕಲರವ ಸಾಂಸ್ಕೃತಿಕ ಕಾರ್ಯಕ್ರಮಗಳು ನವಂಬರ್ ೦೭.ಶುಕ್ರವಾರದಂದು ಗುರುಮಠಕಲ್ ತಾಲೂಕ ಗಡಿನಾಡು ಭಾಗದಲ್ಲಿರುವ ಸರಕಾರಿ ಪ್ರೌಢಶಾಲಾ ಪುಟಪಾಕ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಸ್ತಾವಿಕನುಡಿಗಳು ಮತ್ತು ಅತಿಥಿಗಣ್ಯರಿಗೆ ಸ್ವಾಗತವನ್ನು ಕೊರುತ್ತ ಮಾತನಾಡಿದ ಶ್ರೀ ಮತಿ ಉತ್ತರದೇವಿ ಎಸ್. ಮಠಪತಿಯವರು ಹಳೆಬೇರು ಹೊಸ ಚಿಗುರು ಅನ್ನುವ ಹಾಗೆ ಜನರ ಬಾಯಿಯಿಂದ ಬಾಯಿಗೆ ಬಂದಿರುವAತಹ ಈ ಜನಪದ ಹಾಡುಗಳು ನಮ್ಮ ಹಿರಿಯರು ಹಾಡುತ್ತಿರುವ ಹಾಡುಗಳು ಇಂದು ನಶಿಸಿ ಹೋಗುತ್ತಿವೆ ಆದುದರಿಂದ ಮುಂದಿನ ಪೀಳಿಗೆಗೆ ಉಳಿಯುವ ಬೇಕೆಂಬ ಉದ್ದೇಶದಿಂದ ಗಡಿನಾಡು ಭಾಗದಲ್ಲಿ ಕನ್ನಡದ ಕಲರವ ಹಬ್ಬಿಸ ಬೇಕು ಅನ್ನುವ ಉದ್ದೇಶದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವೆ ಗಟ್ಟಿತನದ ಸಾಹಿತ್ಯ ಜನಪದದಲ್ಲಿ ಮಾತ್ರನಾವು ಕಾಣಬಹುದು ಇದನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದು ಎಲ್ಲಾರ ಮನಮುಟ್ಟುವ ಹಾಗೆ ಜನಪದದ ಪದಗಳ ಅರ್ಥವನ್ನು ವಿವರಿಸಿ ತಿಳಿಸಿ ಹೇಳಿದರು. ಸರಕಾರಿ ಪ್ರೌಢಶಾಲೆ ಪುಟಪಾಕ ಮುಖ್ಯಗುರುಗಳು ಶ್ರೀ ಮತಿ ಹೇಮಲತಾ ಶೆಟ್ಟಿ ಮಾತನಾಡಿ ಜನಪದದಲ್ಲಿ ಯಾವುದೆ ರೀತಿಯ ಊಹ ಪೊಹಗಳಿಲ್ಲ ಅಂದರೆ ಜನಪದಕಾರರು ಜನರ ಮದ್ಯದಲ್ಲಿ ಹಾಗೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿರುವ ಘಟನೆಗಳ ಬಗ್ಗೆ ಸತ್ಯವಾಗಿ ಇದ್ದದ್ದು ಇದ್ದಹಾಗೆಯೆ ಜನಸಾಮಾನ್ಯರಿಗು ಕೂಡ ಅರ್ಥವಾಗುವ, ಸಂತೋಷ, ನೆಮ್ಮದಿ ತಟ್ಟುವಹಾಗೆ ಜನಪದ ಹಾಡುಗಳ ಮೂಲಕ, ಒಗ್ಗಟ್ಟು, ಟಿಪ್ಪಣಿಗಳ ಮೂಲಕ, ಕತೆ, ಕವನಗಳ ಮೂಲಕ ತಮ್ಮ ಅನುಭವದ ಮೂಲಕ ಹೊರಬಂದಿರುವ ಸಾಹಿತ್ಯವನ್ನು ಹೊರಹಾಕಿ ತಮ್ಮ ದಿನನಿತ್ಯದ ಕೆಲಸಗಳ ಜೋತೆಯಲ್ಲಿ ಜನಪದ ಹಾಡುಗಳನ್ನು ಹಾಡುತ್ತ ಬಂದಿರುವುದು ನಾವು ನಿವೆಲ್ಲಾರು ಉಳಿ ಬೆಳೆಸ ಬೆಕೆಂಬುವ ಉದ್ದೇಶದಿಂದ. ಇದನ್ನು ಮುಂದಿನ ಪಿಳಿಗೆಗೆ ತಲುಪಿಸುವ ಜವಾಬ್ದಾರಿಯು ನಮ್ಮೇಲ್ಲರ ಮೇಲಿದೆ ಇಂತಹ ಉತ್ತಮವಾದ ಒಳ್ಳೆಯ ಗಟ್ಟಿತನದ ಸಾಹಿತ್ಯವನ್ನು ಉಳಿಸಿ, ಬೆಳೆಸಿ ಕೊಂಡು ಹೋಗಬೇಕಾದದ್ದು ನಮ್ಮ ಕರ್ತವ್ಯ ಅವೊಂದು ಉದ್ದೇಶದಿಂದ ನಮ್ಮ ಶಾಲಾ ಆವರಣದಲ್ಲಿ ಜಿಲ್ಲಾ ಮಟ್ಟದ ಸಂಗೀತ ಕಲರವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತೋಷ ಎಂದು ಹೇಳಿದರು.ಗ್ರಾಮ ಪಂಚಾಯತ್ ಪುಟಪಾಕ ಅಧ್ಯಕ್ಷರು ಶ್ರೀ ಮತಿ ರಾಮಲಿಂಗಮ್ಮ ವೆಂಕಟೇಶ್ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಪುಟಪಾಕ ಮೌಲಾಲಿ ನಿಜಾಮುದ್ದೀನ್ .ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಕಲಾ ತಂಡಗಳಿAದ ಗೀಗಿಪದ, ಚೌಡಕಿ ಪದ, ಕೊಳಲು, ರಂಗಗೀತೆ, ವಚನ ಸಂಗೀತ, ಸಂಪ್ರದಾಯ ಗೀತೆಗಳು, ಜನಪದ ಗೀತೆಗಳು, ತತ್ವಪದಗಳು, ಸ್ವರಚಿತ ಕವನ ವಾಚನ, ಲಂಬಾಣಿ ನೃತ್ಯ ಇಂತಹ ಸಂಗೀತ ಕಲರವ ಗಡಿನಾಡು ಗ್ರಾಮೀಣ ಭಾಗದ ಸಂಗೀತ ಜನಪದ ಜಾತ್ರೆಯು ಜರುಗಿತು. ಕಾರ್ಯಕ್ರಮದಲ್ಲಿ ತಿಮ್ಮಣ್ಣ ಭೀಮರಾಯ ತಂಡದವರು, ದೇವೇಂದ್ರ ಹುಲ್ಕಲ್ ತಂಡದವರು, ಸುಭಾಷ್ ದೋರನಳ್ಳಿ, ಶಂಕರ ಶಾಸ್ತ್ರೀ ತಂಡದವರು, ಮಾಲಾಶ್ರೀ ತಂಡದವರು, ಕುಮಾರಿ ಹುಲ್ಗಮ್ಮ ತಂಡದವರು, ಶರಣುನಾಟೇಕರ್ ತಂಡದವರು, ಕುಮಾರಿ ಸಂಗೀತ ತಂಡದವರಿAದ ಲಂಬಾಣಿ ನೃತ್ಯ, ಸ್ವರಚಿತ ಕವನ ರಾಜಲಿಂಗಪ್ಪ ಸಜ್ಜನ ಚಂಡರಿಕಿ ವೇಧಿಕೆ ಮೆಲೆ ಸಂಗೀತ ಜನಪದ ಕಾರ್ಯಕ್ರಮಗಳು ಜರುಗಿದವು . ಕಾರ್ಯಕ್ರಮವು ನಾಡಗೀತೆ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಪ್ರರಂಭಗೊAಡು ನಿರೂಪಣೆಯನ್ನು ಭೀಮರಾಯ ಕೊಟರಕಿ ಯವರು ನೀಡಿದರು, ವಿವಿಧ ಕಲಾತಂಡಗಳಿAದ ವೇದಿಕಯ ಮೇಲೆ ಕಾರ್ಯಕ್ರಮ ಗಳು ನೀಡಿದ ಕಲಾತಂಡಗಳಿಗೆ ಪ್ರಮಾಣ ಪತ್ರ ನೀಡಿದರು, ಶಾಲಾ ಸಹಾಶಿಕ್ಷಕರು, ಸಿಬ್ಬಂದಿ ಯವರು ಶಾಲಾಮಕ್ಕಳು ಇದ್ದರು.
























