
ಯಾದಗಿರಿ,ನ.೧೨-ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್-೨೦೨೫ ಕಾರ್ಯಕ್ರಮ ಉದ್ಘಾಟನೆ ನಗರದ ಸೌದಗರ್ ಫಂಕ್ಷನ್ ಹಾಲ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ದಿನೇಶ್ ಕುಮಾರ್, ಸದಸ್ಯ ಡಾ.ಸಿ.ಆರ್.ಕಂಬಾರ, ಗ್ರಂಥಪಾಲಕ ಭೀಮರಾಯ, ಅನಂತ ಸೇವಾ ಟ್ರಸ್ಟ್ ನಿರ್ದೇಶಕರಾದ ಮುಂಡರಗಿ ಮತ್ತು ಶರಣಪ್ಪ ಎಸ್ ಆಗಮಿಸಿದ್ದರು.
ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಡಾ.ಸಿ.ಆರ್.ಕಂಬಾರ ಅವರು ಮಾತನಾಡಿ, “ಪ್ರಿಯ ಮಕ್ಕಳೇ, ನೀವು ಮಾತನಾಡಲು, ಬದಲಾವಣೆ ತರಲು ಬಂದವರು. ನಿಮ್ಮ ಕನಸು ದೊಡ್ಡದಾಗಿರಲಿ. ನಿಮ್ಮ ಧ್ವನಿ ಧೈರ್ಯದಿಂದ ಕೇಳಿಸಪ್ರಶ್ನೆ ಕೇಳಿ, ಉತ್ತರ ಹುಡುಕಿ, ಹೊಸ ದಾರಿ ತೋರಿಸಿ. ಪರಸ್ಪರ ಗೌರವಿಸಿ, ಸಹಕರಿಸಿ, ಸ್ನೇಹ ಬೆಳೆಸಿ.ಜಾಣ್ಮೆಯ ಜೊತೆಗೆ ಒಳ್ಳೆಯತನ ಇರಲಿ. ಮರ ನೆಡಿ, ನೀರು ಉಳಿಸಿ, ಪ್ಲಾಸ್ಟಿಕ್ ಕಡಿಮೆ ಮಾಡಿ.
ಪರಿಸರದ ರಕ್ಷಣೆ ನಿಮ್ಮ ಕೈಯಲ್ಲಿದೆ. ಇಂದು ನೀವು ಮಕ್ಕಳು ನಾಳೆ ನೀವು ನಾಯಕರು. ನಿಮ್ಮ ಬದಲಾವಣೆಯಲ್ಲಿ, ನಿಮ್ಮ ಭವಿಷ್ಯವಿದೆ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಹಲಗೇರಾ ಬಸಯ್ಯ ತಾತ ಪ್ರೌಢ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ನವಿರಸೂಲ್ ತಂದೆ ಹುಸೇನ್ ಸಾಬ್, ಸುರಪುರ ತಾಲ್ಲೂಕಿನ ಜಿಜಿಹೆಚ್‌ಎಸ್ ದರ್ಬಾರ್ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಮರೆಮ್ಮ ತಂದೆ ಶಿವಪ್ಪ ಆಯ್ಕೆಯಾದರು.ನಿಂಗಪ್ಪರವರು ಸ್ವಾಗತ ಕೋರಿದರು, ಕವಿತಾರವರು ವಂದನಾರ್ಪಣೆ ಮಾಡಿದರು.























