ಕೋಲಾರ,ಡಿ.೩- ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ನಗರ ಸಭೆಗೆ ದಿಡೀರ್ ಭೇಟಿ ನೀಡಿ ಸ್ಥಳ ಹಾಗೂ ಕಡತಗಳನ್ನು ಪರಿಶೀಲಿಸಿ ಸಿಬ್ಬಂದಿಗಳ ಕರ್ತವ್ಯ ನಿರ್ಲಕ್ಷತೆ ವಿರುದ್ದ ಕಿಡಿಕಾರಿ ಅಸಮಾಧಾನ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ನಗರಸಭೆಯಲ್ಲಿದ್ದ ಸಾರ್ವಜನಿಕರ ಕುಂದು ಕೊರತೆಗಳನ್ನು ಅಲಿಸಿ ಆಹವಾಲುಗಳನ್ನು ಸ್ವೀಕರಿಸಿ ಇ -ಖಾತೆ, ಖಾತೆ ತಿದ್ದುಪಡೆ,ಜನನ ಮರಣ, ವಿವಿಧ ಪರವಾನಗಿ,ಸ್ವಚ್ಚತೆ, ಕಸ ವಿಲೇವಾರಿ, ತೆರಿಗೆ ವಸೂಲಾತಿ, ನಗರಸಭೆ ಆಸ್ತಿ , ಬಾಡಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳ ಕರ ವಸೂಲಾತಿ,ವಿದ್ಯಾರ್ಥಿಗಳ ವೇತನ, ಕಾಮಗಾರಿಗಳು, ಟೆಂಡರ್‌ಗಳು ಇತ್ಯಾದಿಗಳ ಕುರಿತು ಸಂಬಂಧ ಪಟ್ಟ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಲೋಪ ದೋಷಗಳಿಗೆ ಸಂಬಂಧಿಸಿದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದು ಕೊಂಡರು.
ನಗರಸಭೆಯ ಅವರಣವನ್ನು ಸುತ್ತಾಡಿದ ಜಿಲ್ಲಾಧಿಕಾರಿಗಳು ಉಪಯೋಗಿಸದೆ ಇರುವಂತ ವಾಹನಗಳು, ಟ್ಯಾಂಕರ್‌ಗಳು. ಕಂಟೈನರ್‌ಗಳು ಸೇರಿದಂತೆ ಇತರೆ ಪರಿಕರಗಳು ಎಲ್ಲೆಂದರೆ ಇರುವುದನ್ನು ಕಂಡು ಇವುಗಳೆಲ್ಲಾ ಒಂದೇ ಕಡೆ ಇರಿಸಿ ಪುಸ್ತಕದಲ್ಲಿ ದಾಖಲಿಸ ಬೇಕು. ದುರಸ್ತಿ ಅಗುವುದನ್ನು ಮಾಡಿಸಿ ಮರು ಬಳಕೆ ಮಾಡ ಬೇಕು. ಚಾಲನೆಯ ವಾಹನಗಳನ್ನು ಶೆಡ್‌ನಲ್ಲಿ ಕ್ರಮ ಬದ್ದವಾಗಿ ನಿಲ್ಲಿಸ ಬೇಕು. ಸಾರ್ವಜನಿಕರ ವಾಹನಗಳನ್ನು ನಿಗಧಿತ ಸ್ಥಳದಲ್ಲೇ ಮಾಡುವಂತೆ ಸೂಚಿಸ ಬೇಕು. ಫಲಕಗಳನ್ನು ಅಳವಡಿಸ ಬೇಕು ಎಂದರು.
ಕಚೇರಿಯ ಹಿಂಭಾಗದಲ್ಲಿನ ಆರೋಗ್ಯ ವಿಭಾಗದ ಕೊಠಡಿ, ದಾಸ್ತನು ಕೊಠಡಿಗಳನ್ನು ಪರಿಶೀಲಿಸಿ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು. ಕೊಠಡಿಗಳ ಮೇಲೆ ಫಲಕಗಳನ್ನು ಆಳವಡಿಸದಿದ್ದರೆ ಸಾರ್ವಜನಿಕರಿಗೆ ಗೊತ್ತಾಗುವುದಾದರೂ ಹೇಗೆಂದು ಪ್ರಶ್ನಿಸಿದರು.
ಕಚೇರಿಯ ಒಳಗಡೆಯ ಕೊಠಡಿಗಳಿಗೆ ಭೇಟಿ ನೀಡಿ ಸಾರ್ವಜನಿಕರು ಕಚೇರಿಗೆ ಒಳಗೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಭೇಟಿಯಾಗಲು ಪರದಾಡುವಂತೆ ಇದೆ. ಕಚೇರಿಯ ಪ್ರಾರಂಭದ ಮುಂಭಾಗದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಲು, ತಮ್ಮ ಕೆಲಸ ಕಾರ್ಯಗಳನ್ನು ಮಾಡಿ ಕೊಡಲು ಅನುವುಂಟಾಗುವಂತೆ ಕ್ರಮ ಬದ್ದವಾಗಿರ ಬೇಕು. ಯಾವೊದೊಂದು ಯೋಜನ ಬದ್ದವಾಗಿ ರೂಪಿಸಿಲ್ಲ. ತೆರಿಗೆಗಳ ಪಾವತಿಸಲು ಸಾರ್ವಜನಿಕರು ಕಚೇರಿಯ ಒಳಗೆ ಪರದಾಡ ಬೇಕು, ನೀರಿನ ಸಿಬ್ಬಂದಿಗಳನ್ನು ಮಾಡಲು ಹುಡುಕಾಟ ನಡೆಸಬೇಕು ಎಲ್ಲವೂ ಅವ್ಯವಸ್ಥೆಯಾಗಿದೆ.
ಸಾರ್ವಜನಿಕರಿಗೆ ಸಂಬಂಧ ಪಟ್ಟ ದಾಖಲಾತಿ ಪುಸ್ತಕಗಳು, ಸುರಕ್ಷಿತವಾಗಿ ಸಂರಕ್ಷಿಸ ಬೇಕೆ. ಟೇಬಲ್‌ಗಳಲ್ಲಿ ದಾಖಲಾತಿ ಪುಸ್ತಕಗಳು ಎಲ್ಲೆಂದರಲ್ಲಿ ಹರಡಿರುವುದು ಕಂಡು ಕೆಂಡ ಮಂಡಲವಾದರೂ. ಸಾರ್ವಜನಿಕರು ಖಾತೆ ಮಾಡಿಸಲು ತಿಂಗಳಾನು ಗಟ್ಟಲೇ ಅಲೆದಾಡ ಬೇಕಾ ? ಎಂದು ಪ್ರಶ್ನಿಸಿದ ಅವರು ತೆರಿಗೆ ವಸೂಲಾತಿಗಳು ನಿರೀಕ್ಷಿತ ಪ್ರಮಾಣದಲ್ಲಿ ಮಾಡುತ್ತಿಲ್ಲ. ಸಂಬಂಧ ಪಟ್ಟ ತೆರಿಗೆ ವಸೂಲಾತಿ ಮಾಡುವ ಸಿಬ್ಬಂದಿಗಳಿಗೆ ನಿಗಧಿತ ತೆರಿಗೆ ವಸೂಲಾತಿಯ ಗುರಿಯನ್ನು ನೀಡ ಬೇಕು. ತೆರಿಗೆ ಬಾಕಿಗಳನ್ನು ಕಟ್ಟು ನಿಟ್ಟಾಗಿ ಕಾಲಕಾಲಕ್ಕೆ ವಸೂಲಾತಿ ಮಾಡ ಬೇಕು. ಬಾಕಿ ಇರುವವರಿಗೆ ನೋಟಿಸ್ ಜಾರಿ ಮಾಡ ಬೇಕು. ಬಾಡಿಗೆ ವಸೂಲಾತಿಗಳ ಬಗ್ಗೆ ನಿಗಾ ವಹಿಸದೆ ನಿರ್ಲಕ್ಷಿಸಲಾಗಿದೆ ಇದಕ್ಕೆ ಸಂಬಂಧ ಪಟ್ಟಂತೆ ಬಾಕಿ ಇರಿಸಿ ಕೊಂಡಿರುವವರಿಗೆ ನೋಟಿಸ್ ಜಾರಿ ಮಾಡಿ ಎಂದು ಸೂಚಿಸಿದರು.
ಗರಸಭಾ ವ್ಯಾಪ್ತಿಗೆ ಸೇರಿದ ಪಂಚಾಯಿತಿಗಳ ಆಸ್ತಿಗಳನ್ನು ನಗರಸಭೆಗೆ ಪರಿವರ್ತಿಸ ಬೇಕು. ಇದಕ್ಕೆ ಸಂಬಂಧಿಸಿದಂತೆ ಕಂದಾಯಗಳನ್ನು ವಸೂಲಾತಿ ಮಾಡ ಬೇಕು. ನಗರಸಭೆ ಸೇರಿದ ೪-೫ ಪಂಚಾಯಿತಿಗಳಲ್ಲಿ ತೆರಿಗೆಯನ್ನು ನಗರಸಭೆಯೇ ವಸೂಲಿ ಮಾಡ ಬೇಕಾಗಿದೆ. ನಗರಸಭೆಗೆ ಬರಬೇಕಾದ ಸುಮಾರು ಕೋಟ್ಯಾಂತರ ತೆರಿಗೆಯನ್ನು ವಸೂಲಿ ಮಾಡದೆ ನಷ್ಟವುಂಟಾಗುತ್ತಿರುವ ಕುರಿತು ಕಳವಳ ವ್ಯಕ್ತ ಪಡೆಸಿದ ಜಿಲ್ಲಾಧಿಕಾರಿಗಳು ಕೊಡಲೇ ವಸೂಲಾತಿಗೆ ಕ್ರಮ ಜರುಗಿಸ ಬೇಕೆಂದು ಕಂದಾಯ ಅಧಿಕಾರಿಗೆ ಸೂಚಿಸಿದರು.
ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆಯ ನೆಪ ಹೇಳಿ ಕೊಂಡು ಕರ್ತವ್ಯ ನಿರ್ಲಕ್ಷತೆಗೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಅನುವು ಮಾಡಿ ಕೊಟ್ಟಿದ್ದಿರಿ,
ಸಾರ್ವಜನಿಕರನ್ನು ವಿನಾಕಾರಣ ತಿಂಗಳಾನುಗಟ್ಟಲೆ ಅಲೆದಾಡಿಸುವುದು ಸರಿಯಲ್ಲ. ಸಾರ್ವಜನಿಕರ ಬಳಿ ಜವಾಬ್ದಾರಿಯಾಗಿ ನಡೆದು ಕೊಳ್ಳ ಬೇಕು. ಗೌರವದಿಂದ ನಡೆದು ಕೊಳ್ಳ ಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡ ಬಾರದು,ಕಚೇರಿಯಲ್ಲಿನ ಸಿಬ್ಬಂದಿಗಳ ತಾತ್ಕಲಿಕವಾಗಿ ನೇಮಿಸಿ ಕೊಳ್ಳಲು ಪತ್ರ ಬರೆದು ಅನುಮತಿ ಪಡೆದು ಕೊಂಡು ಕೆಲಸವನ್ನು ನಿರ್ವಹಿಸ ಬೇಕೆಂದು ಪೌರಾಯುಕ್ತರಾದ ನವೀನ್ ಚಂದ್ರ ಅವರಿಗೆ ಸಲಹೆ ನೀಡಿದರು.
ನ್ಯಾಯಾಲಯದ ಆದೇಶಗಳನ್ನು ಖಡಕ್ ಪರಿಪಾಲನೆ ಮಾಡಬೇಕು. ಕಾನೂನುಗಳನ್ನು ಯಾವೂದೇ ಕಾರಣಕ್ಕೆ ಉಲ್ಲಂಘನೆಯಾಗದಂತೆ ಜಾಗೃತೆಯಿಂದ ಕಾರ್ಯನಿರ್ವಹಿಸ ಬೇಕು. ನ್ಯಾಯಾಲಯದಲ್ಲಿ ಬೇಕಾಬಿಟ್ಟಿ ಪ್ರಕರಣಗಳನ್ನು ದಾಖಲಿಸಿ ಕೈ ತೊಳೆದು ಕೊಳ್ಳದೆ ಪ್ರಕರಣಗಳ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂದು ನೇಮಿಸಿ ಕೊಂಡಿರುವ ವಕೀಲರೊಡನೆ ಚರ್ಚಿಸ ಬೇಕು ಎಂದರು.




























