
ಕಲಬುರಗಿ:ಡಿ.3: ಜಿಲ್ಲಾಧಿಕಾರಿಗಳಾದ ಫೌಜಿಯಾ ತರನ್ನುಮ ಮೇಡಂ ಕಲಬುರ್ಗಿ ಜಿಲ್ಲೆಯ ಹಾಕಿ, ಜೂಡೋ ಮತ್ತು ಹ್ಯಾಂಡ್ ಬಾಲ್ ಕ್ರೀಡೆಗಳಲ್ಲಿ ರಾಜ್ಯ ಮಟ್ಟದ ವಿಜೇತರಿಗೆ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅಭಿನಂದನೆ ಮತ್ತು ಶುಭವನ್ನು ಕೋರಿದ್ದರು. ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಶ್ರೀ ಸಂಗಮೇಶ್ವರ, ಶ್ರೀ ಸಂಜಯ ಬಾಣದ ಹಾಕಿ ತರಬೇತುದಾರರು, ಶ್ರೀ ಪ್ರವೀಣ ಫುಣೆ ಬಾಸ್ಕೆಟಬಾಲ್ ತರಬೇತುದಾರರು, ಶ್ರೀ ಅಶೋಕ ಜೂಡೋ ತರಬೇತುದಾರರು ಹಾಗೂ ಶ್ರೀ ದತ್ತು ಜೇವರ್ಗಿ ಹ್ಯಾಂಡಬಾಲ್ ತರಬೇತುದಾರರು ಉಪಸ್ಥಿತರಿದ್ದರು.
ಹಾಕಿ:- ದಿನಾಂಕ:21-11-2025 ರಿಂದ 23-11-2025 ರವರೆಗೆ ಹಾಸನ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಶಿಕ್ಷಣ ಇಲಾಖೆಯ ಬಾಲಕರ ಹಾಕಿ ಪಂದ್ಯಾವಳಿಯಲ್ಲಿ ಕಲಬುರಗಿ ಜಿಲ್ಲೆಯ ಕ್ರೀಡಾ ವಸತಿ ನಿಲಯದ 7 ಕ್ರೀಡಾಪಟುಗಳು ಭಾಗವಹಿಸಿದ್ದು ರಾಜ್ಯ ಮಟ್ಟದಲ್ಲಿ ವಿಜೇತರಾಗಿರುತ್ತಾರೆ.
- ಹರ್ಷವರ್ಧನ 2. ಕಿಶೋರ 3. ಸಮರ್ಥ 4. ಅನಿಕೇತ 5. ರಾಕೇಶ 6. ಶಿವಾಜಿ 7. ಕಿಶೋರ
ಮುಂದುವರೆದು ಡಿಸೆಂಬರ್ 2025 ರ ಕೊನೆಯ ವಾರದ ಮಧ್ಯಪ್ರದೇಶ ಗುನಾ ದಲ್ಲಿ ಜರುಗಲಿರುವ ರಾಷ್ಟ್ರ ಮಟ್ಟದ ಶಾಲಾ ಶಿಕ್ಷಣ ಇಲಾಖೆಯ ಬಾಲಕರ ಹಾಕಿ ಪಂದ್ಯಾವಳಿಯಲ್ಲಿ 3 ಕ್ರೀಡಾಪಟುಗಳು ಕರ್ನಾಟಕ ತಂಡವನ್ನು ಪ್ರತಿ ನಿಧಿಸಲು ಆಯ್ಕೆಯಾಗಿರುತ್ತಾರೆ - ಹರ್ಷವರ್ಧನ 2. ಕಿಶೋರ 3. ಸಮರ್ಥ
2025 ನೇ ಸಾಲಿನ ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಶಿಕ್ಷಣ ಇಲಾಖೆಯ ಜೂಡೋ ಸ್ಪರ್ಧೆಯಲ್ಲಿ ಈ ಕೆಳಕಂಡ ಕಲಬುರಗಿ ಕ್ರೀಡಾಪಟುಗಳು ಪದಕಗಳನ್ನು ಗಳಿಸಿರುತ್ತಾರೆ.
14 ರಿಂದ 17 ವರ್ಷದೊಳಗಿನ:-ಹ್ಯಾಪಿರಾಜ್ – ಪ್ರಥಮ 2. ರಾಕೇಶ- ದ್ವೀತಿಯ 3. ಪ್ರಜ್ವಲ್ -ದ್ವೀತಿಯ 4.ಶ್ರಾವಣಿ -ತೃತೀಯ 5. ಆದಿತ್ಯ – ತೃತೀಯ 6. ಶ್ರೀಪಾದ – ತೃತೀಯ
19 ವರ್ಷ ದೊಳಗಿನ :- 1. ಶಿವಪ್ರಸಾದ – ಪ್ರಥಮ 2. ಆಶಿಸ್ – ದ್ವೀತಿಯ
ಹ್ಯಾಪಿರಾಜ್ ಮತ್ತು ಶಿವಪ್ರಸಾದ ರಾಷ್ಟ್ರ ಮಟ್ಟದ ಶಾಲಾ ಶಿಕ್ಷಣ ಇಲಾಖೆಯ ಜೂಡೋ ಸ್ಪರ್ಧೆಯಲ್ಲಿಭಾಗವಹಿಸಲು ಆಯ್ಕೆಯಾಗಿರುತ್ತಾರೆ.
ಹ್ಯಾಂಡಬಾಲ್ ಕ್ರೀಡೆಯಲ್ಲಿ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಕಲಬುರಗಿ ತಂಡವು ದ್ವೀತಿಯ ಸ್ಥಾನ ಹಾಗೂ ದಕ್ಷಿಣ ಭಾರತದ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿರುತ್ತದೆ. ಈ ಎಲ್ಲಾ ಕ್ರೀಡಾಪಟುಗಳಿಗೆ ಮಾನ್ಯ ಜಿಲ್ಲಾಧಿಕಾರಿ ಕಲಬುರಗಿ ರವರು ಅಭಿನಂದಿಸಿ ಶುಭ ಕೋರಿದ್ದರು.

























