
ಕರಜಗಿ:ಜ.17:ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸರ್ಕಾರದ ವತಿಯಿಂದ ನೀಡಲಾಗುವ ಶೂ ಮತ್ತು ಸಾಕ್ಸ್ ಗಳನ್ನು ವಿತರಿಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಬಿ ರಾಜು ಸಾಯಬಣ್ಣ ಬೆನಕನಹಳ್ಳಿ ಹಾಗೂ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಿವಪುತ್ರ ನಾವಾಡಿ ಅವರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶೂ, ಸಾಕ್ಸ್ ಅನ್ನು ವಿತರಿಸಿದರು
ಈ ಸಂದರ್ಭ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಿವಪುತ್ರ ನಾವಾಡಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಾಗೇವಾಡಿ ಮುಖ್ಯೋಪಾದ್ಯಾಯ ಭೀಮಣ್ಣ ಬದನಿಕಾಯಿ ಶಿಕ್ಷಕರಾದ ಯಲ್ಲಪ್ಪ ಪ್ಯಾಟಿ ಮಲ್ಲಿಕಾರ್ಜುನ ಮಾಳಿ ಶಿವಾನಂದ ನಾವಾಡಿ ನಿಂಗಣ್ಣ ವಾಗ್ದರಿ ಅಡಿವೆಪ್ಪ ಕರಜಗಿ ಗಂಗಾಧರ ಪೆÇೀದ್ದಾರ ರೇವಣಸಿದ್ದ ದುದ್ದಗಿ ವಿದ್ಯಾರ್ಥಿಗಳು ಇದ್ದರು.




























