ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಬೀಜ ಹಾಗೂ ಗೊಬ್ಬರ ವಿತರಣೆ

ಕೊಲ್ಹಾರ: ಮೇ.31:ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ 2025-26 ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆ ಸಮಾರಂಭ ಶುಕ್ರವಾರ ನಡೆಯಿತು.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆ ಸಮಾರಂಭಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ ಚಾಲನೆ ನೀಡಿ ರೈತರು ಸರ್ಕಾರ ನೀಡುವ ಈ ಬೀಜಗಳನ್ನು ಹಾಗೂ ಪೆÇೀಷಕಾಂಶ ಗೊಬ್ಬರಗಳನ್ನು ಈ ರೈತ ಸಂಪರ್ಕ ಕೇಂದ್ರಕ್ಕೆ ಬಂದು ಪಡೆದುಕೊಂಡು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ನಾವು ನೀವು ಪಡೆದು ಕೊಳ್ಳೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಲಕ್ಷ್ಮೀಬಾಯಿ ಹೆರಕಲ್, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಎಂ ಕೆ ಪುರೋಹಿತ, ಎಂ ಕೆ ಲಮಾಣಿ, ಎಂ ಪಿ ಸರೂರ,ಬೀರಮಣ್ಣ ಕಾರಜೋಳ, ಡಿ ಕೆ ಧನಗೊಂಡ ಹಾಗೂ ಹಲವು ಗ್ರಾಮದ ರೈತರು ಭಾಗವಹಿಸಿದ್ದರು