ಬೀದರ: ಬೀದರ ಉತ್ತರ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಬೆಳೆಗಳಾದ ಕಡಲೆ, ಜೋಳ, ಗೋಧಿ ಹಾಗೂ ಇನ್ನಿತರೆ ಬಿತ್ತನೆ ಬೀಜಗಳ ವಿತರಣೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಗಿತ್ತೆ ಮಾಧವ ವಿಠಲರಾವ್ ಅವರು ಚಾಲನೆ ನೀಡಿದರು.
ಸೂಕ್ತ ತಳಿಗಳ ಆಯ್ಕೆ, ಬರ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ನೀರಿನ ಹಾಗೂ ಪೆÇೀಷಕಾಂಶಗಳ ಸಮರ್ಪಕ ಬಳಕೆ, ಕಡಿಮೆ ನೀರು ಬೇಕಾಗುವ ಸೂಕ್ತ ಬೆಳೆ ಮತ್ತು ತಳಿಗಳ ಆಯ್ಕೆಯ ಕುರಿತು ಹಾಗೂ ಸರ್ಕಾರದ ವಿವಿಧ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಅವರು ತಿಳಿಸಿದರು.
ಸಮಗ್ರ ಬೇಸಾಯ, ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ದೇವಿಕಾ ಆರ್. ಅವರು ಮಾತನಾಡಿ, ರೈತರು ಸಮಗ್ರ ಬೇಸಾಯ ಹಾಗೂ ಕೃಷಿ ಭಾಗ್ಯ ಯೋಜನೆಯ ಸೌಲಭ್ಯಗಳನ್ನು ಪಡೆಯಬೇಕೆಂದು ತಿಳಿಸಿದರು.
ಬೀಜೋಪಚಾರ ಸಲಹೆ, ರೈತರು ಕಡ್ಡಾಯವಾಗಿ ಬೀಜೋಪಚಾರ ಹಾಗೂ ಮೊಳಕೆ ಪರೀಕ್ಷೆಯನ್ನು ಮಾಡಿ ನಂತರ ಬಿತ್ತನೆ ಮಾಡುವಂತೆ ಸಲಹೆ ನೀಡಿದರು.
ಮಿನಿ ಕಿಟ್ ವಿತರಣೆ, ಬೀದರ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ಆರತಿ ಪಾಟೀಲ್ ಅವರ ಉಪಸ್ಥಿತಿಯಲ್ಲಿ, ಹೋಬಳಿಯ ವಿವಿಧ ಗ್ರಾಮಗಳ ರೈತರಿಗೆ ಉಚಿತ ಕಡಲೆ ಮಿನಿ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲಾ ರೈತರಿಗೂ ಹಾಗೂ ಸಿಬ್ಬಂದಿ ವರ್ಗದವರಿಗೂ ಸ್ವಾಗತ ಕೋರಲಾಯಿತು. ಕಾರ್ಯಕ್ರಮದಲ್ಲಿ ಬೀದರ (ಉ) ಹೋಬಳಿಯ ಕೃಷಿ ಅಧಿಕಾರಿ ಶ್ರೀಮತಿ ವರ್ಷಾ ಗಾಯತೊಂಡೆ ಬಸವರಾಜ, ಮಹಾನಂದಾ, ಕೃಷಿ ಸಖಿಯರು ಹಾಗೂ ಇತರರು ಉಪಸ್ಥಿತರಿದ್ದರು.




















