
ಬೀದರ್: ಜೂ.7: ನವೀನ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ಅವರ 52ನೇ ಜನ್ಮದಿನದ ಪ್ರಯುಕ್ತ ತಾಲ್ಲೂಕಿನ ಅಮಲಾಪುರ ಗ್ರಾಮದ ಮಹಾ ಪ್ರಜಾಪತಿ ಬುದ್ಧಿ ಮಾಂದ್ಯ ಮಕ್ಕಳ ಶಾಲೆಯ ಮಕ್ಕಳಿಗೆ ಶುಕ್ರವಾರ ಉಚಿತ ಬಟ್ಟೆ, ಸಿಹಿ ಹಾಗೂ ಹಣ್ಣು ವಿತರಿಸಲಾಯಿತು.
ಕೇಕ್ ಕತ್ತರಿಸಿ ಮಕ್ಕಳೊಂದಿಗೆ ಜನ್ಮದಿನ ಆಚರಿಸಿಕೊಂಡ ಚಿಕ್ಕಬಸೆ ಅವರು, ಬಳಿಕ ಮಕ್ಕಳಿಗೆ ಸಿಹಿ ತಿನ್ನಿಸಿ, ಬಟ್ಟೆ ವಿತರಿಸಿದರು.
ಬುದ್ಧಿ ಮಾಂದ್ಯ ಮಕ್ಕಳು ದೇವರ ಸ್ವರೂಪ. ಅವರ ಸೇವೆಯಿಂದ ಪುಣ್ಯ ಲಭಿಸುತ್ತದೆ ಎಂದು ಚಿಕ್ಕಬಸೆ ಹೇಳಿದರು.
ಈಚಿನ ದಿನಗಳಲ್ಲಿ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಮತ್ತಿತರ ಸಮಾರಂಭಗಳು ಪ್ರತಿಷ್ಠೆಯ ವಿಷಯವಾಗುತ್ತಿವೆ. ಅನೇಕರು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸ್ಥಿತಿವಂತರು ಸಾಮಾಜಿಕ ಚಟುವಟಿಕೆ, ನಿರ್ಗತಿಕರು, ಅಸಹಾಯಕರು ಹಾಗೂ ಬಡವರಿಗೆ ನೆರವಾಗುವ ಮೂಲಕ ವೈಯಕ್ತಿಕ ಕಾರ್ಯಕ್ರಮಗಳನ್ನು ಆಚರಿಸುವ ಪರಿಪಾಠ ಬೆಳೆಯಬೇಕು. ಇದರಿಂದ ಕಾರ್ಯಕ್ರಮಗಳ ಹಿರಿಮೆ ಹೆಚ್ಚುತ್ತದೆ ಎಂದು ತಿಳಿಸಿದರು.
ಪ್ರಾಚಾರ್ಯ ಉಮಾಕಾಂತ ಲಾವಲೆ, ಶಾಲೆಯ ಸದಸ್ಯ ಬಸವರಾಜ ಕಾಶಿನಾಥ, ಸುಜಾತಾ ರೆಡ್ಡಿ, ಬಂಡು, ಜಲೀಲ್, ಬಾಲಾಜಿ, ರಾಜಮ್ಮ, ಗೋವಿಂದ, ಗಣೇಶ ಕಪಲಾಪುರ ಮತ್ತಿತರರು ಇದ್ದರು.