ಉತ್ತಮ ಸಾಧನೆಗೆ ಶಿಸ್ತು ಅತಿ ಮುಖ್ಯ:ಬೆಳಗುಂದಿ

ಸೈದಾಪುರ:ಅ.8:ಉತ್ತಮ ಸಾಧನೆಗೆ ಶಿಸ್ತು ಅತಿ ಮುಖ್ಯವಾಗಿದೆ. ಇದನ್ನು ಪೋಷಕರು ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಪ್ರಯತ್ನ ಮಾಡಬೇಕು ಎಂದು ವಿದ್ಯಾ ವರ್ಧಕ ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.
ಪಟ್ಟಣದ ಮಲ್ಹಾರ ಕಾರಡ್ಡಿ ಬಸವಂತರಾಯ ಮತ್ತು ಸಿದ್ದಪ್ಪ ಸ್ಮಾರಕ ವಿದ್ಯಾ ವರ್ಧಕ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಹಣಕ್ಕಿಂತ ವ್ಯಕ್ತಿತ್ವ ಮಹತ್ವದ್ದಾಗಿದೆ. ಮಾನವೀಯ ಮೌಲ್ಯಗಳನ್ನು ನಮ್ಮದಾಗಿಸಿಕೊಳ್ಳಬೇಕು. ಈ ಗುಣಗಳನ್ನು ನಾವು ಶಿಕ್ಷಕರು, ಉಪಾನ್ಯಾಸಕರಿಂದ ಪಡೆಯಲು ಸಾಧ್ಯ. ಗುರುವಿನ ಸ್ಥಾನ ಅಂತ್ಯಂತ ಶ್ರೇಷ್ಠವಾದದು ಅವರನ್ನು ಗೌರವದಿಂದ ಕಾಣುವರು ಉತ್ತಮ ಸಾಧಕರಾಗುತ್ತಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶಹಾಪುರ ಬಾಲಾಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಭೀಮಣ್ಣ ಅಂಚೆಸೂಗುರು ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ. ಇದರಲ್ಲಿ ಯಶಸ್ಸು ಸಾಧಿಸಲು ಸತತ ಪರಿಶ್ರಮ ಪಡಬೇಕು. ಇದಕ್ಕಾಗಿ ಸಕರಾತ್ಮಕ ಯೋಚನೆ ಮಾಡಿಕೊಂಡು ಉಪನ್ಯಾಸಕರ ಹಿರಿಯ ಮಾರ್ಗದರ್ಶನದೊಂದಿಗೆ ಉತ್ತಮ ಚರಿತ್ರೆವಂತರಾಗಬೇಕು. ಭ್ರಮೆಯಲ್ಲಿ ಬೀಳುವ ವಯಸ್ಸು ಇದಾಗಿದ್ದೂ ಇದನ್ನು ಕಟ್ಟಿ ಆಕಬೇಕು. ಅಂದಾಗ ಮಾತ್ರ ಉತ್ತಮ ಸಾಧನೆ ನಮ್ಮದಾಗುತ್ತದೆ ಎಂದು ಕಿವಿ ಮಾತುಗಳನ್ನು ಹೇಳಿದರು.
ಇದಕ್ಕೂ ಮುಂಚೆ 2024-25ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಉತ್ತಿರ್ಣರಾದ ದ್ವೀತಿಯ ವರ್ಷದ ಶಿವುಲೀಲಾ ಕಿಷ್ಟಪ್ಪ ಹಾಗೂ ಅಶೋಕ ಬಾಬು ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಸುರುಪುರ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಪಿಸಾಬ್, ಬಾಲಕಿಯರ ಕಾಲೇಜಿನ ಪ್ರಾಂಶುಪಾಲ ಮೋನಯ್ಯ ಗೋನಾಲ, ಕೋಶಧ್ಯಕ್ಷ ಮುಕುಂದಕುಮಾರ ಅಲಿಝಾರ, ಆಡಳಿತ ಮಂಡಳಿಯ ಸದಸ್ಯರಾದ ಸೂರ್ಯಪ್ರಕಾಶ ಆನಂಪಲ್ಲಿ, ಮುಖ್ಯಗುರು ಲಿಂಗಾರಡ್ಡಿ ನಾಯಕ, ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ಕರಬಸಯ್ಯ ದಂಡಿಗಿಮಠ, ಉಪನ್ಯಾಸಕರಾದ ದೇವಿಂದ್ರಪೀರಾ, ಚಂದ್ರಶೇಖರ ಡೊಣ್ಣೆಗೌಡ, ಬಸವರಾಜ ಭರಮಶೆಟ್ಟಿ, ಶಾಂತಲ್.ಎನ್, ರಾಜಶೇಖರ ಪಾಟೀಲ, ಅನುರಾಧ, ಇಂದಿರಾ ತೂರೆ, ಸದಾಶಿವ ಸೇರಿದಂತೆ ಇತರರಿದ್ದರು. ಶೃತಿ ಸ್ವಾಗತಿಸಿದರು. ಮಲ್ಲಪ್ಪ ನಿರೂಪಿಸಿದರು. ಅಶ್ವಿನಿ ವಂದಿಸಿದರು.