Home ಜಿಲ್ಲೆ ಕಲಬುರಗಿ ರಕ್ಷಾಬಂಧನ ಹಬ್ಬದ ಸಂಭ್ರಮದ ನಡುವೆಯೂ ವ್ಯಾಪಾರಿಗಳಲ್ಲಿ ನಿರಾಸೆ

ರಕ್ಷಾಬಂಧನ ಹಬ್ಬದ ಸಂಭ್ರಮದ ನಡುವೆಯೂ ವ್ಯಾಪಾರಿಗಳಲ್ಲಿ ನಿರಾಸೆ

ಚಿತ್ತಾಪುರ; ರಕ್ಷಾಬಂಧನ ಹಬ್ಬ ಸಮೀಪಿಸುತ್ತಿದೆ ಆದರೆ ರಾಖಿ ವ್ಯಾಪಾರದಲ್ಲಿ ನಿರೀಕ್ಷಿತ ಮಟ್ಟದ ಚೇತರಿಕೆ ಕಂಡುಬರದಿರುವುದು ಪಟ್ಟಣದ ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ.
ವ್ಯಾಪಾರಿ ವಿವಿಧ ಬಗೆಯ ರಾಖಿ, ಬಳೆಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ಅಂಗಡಿ ಮುಂಭಾಗದಲ್ಲಿ ಮಾರಾಟಕ್ಕೆ ಇಟ್ಟಿದ್ದು, ಆದರೆ ಖರೀದಿದಾರರ ಸಂಖ್ಯೆ ಕಡಿಮೆಯಾಗಿರುವುದರಿಂದ ವ್ಯಾಪಾರ ಮಂದಗತಿಯಲ್ಲಿದೆ.
ಬರದ ಪರಿಸ್ಥಿತಿ, ಜನರ ಖರೀದಿ ಸಾಮಥ್ರ್ಯದಲ್ಲಿನ ಇಳಿಕೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಬ್ಬದ ಖರೀದಿಗೂ ಪರಿಣಾಮ ಬೀರಿದೆ ಎಂದು ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹಬ್ಬದ ದಿನಗಳು ಸಮೀಪಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ವ್ಯಾಪಾರ ಚೇತರಿಸಿಕೊಳ್ಳುವ ನಿರೀಕ್ಷೆಯನ್ನು ಅವರು ಹೊಂದಿದ್ದಾರೆ.

ಹಬ್ಬದ ಸಂಭ್ರಮದ ಜೊತೆಗೆ ವ್ಯಾಪಾರವೂ ಚೇತರಿಸಿಕೊಳ್ಳಲಿ ಎಂಬುದು ರಾಖಿ ವ್ಯಾಪಾರಿಗಳ ಆಶಯ.

ಮಹಾಂತೇಶ ಭಾಗೋಡಿ, ಕಪಿಲ್ ಜೀತುರೆ. ರಾಕಿ ಮಾರಾಟಗಾರ.