
ಕೋಲಾರ,ಡಿ,೨೯-ಬೆನ್ನುಹುರಿ ಅಪಘಾತಕ್ಕೊಳಗಾದ ಅಂಗವಿಕಲರು ಧೃತಿಗೆಡದೆ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮಾನಸಿಕವಾಗಿ ಸದೃಢರಾದರೆ ಉನ್ನತ ಸಾಧನೆ ಮಾಡಬಹುದು ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು.
ತಾಲೂಕಿನ ವೇಮಗಲ್ ರಾಮಶೆಟ್ಟಿ ಬಯಲು ರಂಗಮಂದಿರದಲ್ಲಿ ಬೆನ್ನು ಹುರಿ ವಿಶೇಷ ಚೇತನರ ಕ್ಷೇಮಾಭಿವೃದ್ಧಿ ಸಂಘದಿಂದ ವಿಶ್ವ ಬೆನ್ನು ಹುರಿ ಅಪಘಾತ ದಿನಾಚರಣೆ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಕಲಚೇತನರು ತಮ್ಮಲ್ಲಿರುವ ಕೀಳರಿಮೆ ದೂರ ಮಾಡಿ ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗಬೇಕು, ಭಾರತ ಸೇರಿದಂತೆ ವಿದೇಶಗಳಲ್ಲಿರುವ ವಿಕಲಚೇತನರು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮೆರೆದಿದ್ದಾರೆ ಎಂದು ಹೇಳಿದರು.
ರೈತ ಮುಖಂಡ ಕಲ್ವಮಂಜಲಿ ರಾಮುಶಿವಣ್ಣ, ಪಪಂ ಅಧ್ಯಕ್ಷೆ ಅನುಷಾ ಮುನಿರಾಜು, ಪಿಎಸ್‌ಎಸ್ ರಾಜ್ಯಾಧ್ಯಕ್ಷ ಕಲ್ವಮಂಜಲಿ ಸಿ.ಶಿವಣ್ಣ, ಬೆನ್ನು ಹುರಿ ವಿಶೇಷ ಚೇತನರ ಕ್ಷೆಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಹಾರ್ಜೇನಹಳ್ಳಿ ಎಚ್.ವಿ.ಚನ್ನಕೃಷ್ಣಪ್ಪ, ರಾಜೇಶ್, ಡಾ.ಶಂಕರ್, ಮೇಘರಾಜ್, ಧನಶೇಖರ್, ಜೋಸೆಫ್, ಬಾಬು, ಪ್ರಶಾಂತ್ ಕುಮಾರ್, ಶಿವಕುಮಾರ್, ಸುಪ್ರೀಂ, ಜಮೀಲ್, ಈಶ್ವರ್ ರೆಡ್ಡಿ, ವಿನೋದ್, ಗಿರಿಜಾ, ಸುಧಾ, ಮುನಿರಾಜಣ್ಣ, ರವಿಕುಮಾರ್, ಮಂಜುನಾಥ್, ರಾಮಚಂದ್ರ, ಚಂದ್ರ ಇದ್ದರು.


























