ವಿಕಲಚೇತನರಿಗೆ ಛಲವಿದ್ದರೆ ಏನ್ನಾನ್ನದರೂ ಸಾಧಿಸಲು ಸಾಧ್ಯ: ಸುರೇಶ ಭಂಡಾರಿ

ಯಾದಗಿರಿ:ನ.೨೯: ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ವಿಶ್ವನಾಥರೆಡ್ಡಿ ಮುದ್ನಾಳ ಸಭಾ ಭವನದಲ್ಲಿ, ಅರ್.ಪಿ.ಡಿ ಟಾಸ್ಕ ಪೊರ್ಸ ಯಾದಗಿರಿ ಜಿಲ್ಲಾ ಸಮಿತಿ ಮತ್ತು ಎಪಿಡಿ ಹಾಗೂ ಗ್ರಾಮೀಣ ಅಂಗವಿಕಲರ ಪುನರವಸತಿ ಕಾರ್ಯಕ್ರಮ ಇವರುಗಳ ಸಂಯುಕ್ತಶ್ರಯದಲ್ಲಿ, ವಿಕಲಚೇತನರ ಸಾಧನೆ ಮತ್ತು ಹಕ್ಕೋತ್ತಾಯ ಸಮಾವೇಶ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ೨೦೨೫ ಸಾಲಿನ ಈ ಕಾರ್ಯಕ್ರಮಕದ ಆಧ್ಯಕ್ಷತೆಯನ್ನು ಕು.ಉಮಾ ನಾಯಕ್ ಆಧ್ಯಕ್ಷರು ಆರ್.ಪಿ.ಡಿ ಟಾಸ್ಕ್ ಪೊರ್ಸ್ ಯಾದಗಿರಿ ವಹಿಸಿ ಕೊಂಡಿದ್ದರು, ಮುಖ್ಯ ಅತಿಥಿಗಳಾಗಿ ರಾಜ್ಯಧ್ಯಕ್ಷರು ಅರ್.ಪಿ.ಡಿ ಟಾಸ್ಕ್ ಪೊರ್ಸ್ ಬೆಂಗಳೂರು ಸುರೇಶ ಭಂಡಾರಿ ಮಾತನಾಡಿ ನಾವು ಎಲ್ಲರೂ ಒಗ್ಗಟ್ಟಾಗಬೇಕು ಮತ್ತು ಹಕ್ಕುಗಳು ಪಡೆಯುವಲ್ಲಿ ಅಂಗವಿಕಲರು ಮುಂದಾಗಬೇಕೆAದು ಎಂದು ತಿಳಿಸಿದರು.ಹಾಗೂ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕರಿಗಳು ಶರಣಪ್ಪ ಪಾಟೀಲ್ ಮಾತನಾಡಿ ಸರ್ಕಾರಿ ಸೌಲಭ್ಯಗಳು ಪಡೆಯಬೇಕು ಹಾಗೂ ಹಕ್ಕೋತ್ತಾಯ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಅವರ ಗಮನಕ್ಕೆ ತರುತ್ತನೆ ಎಂದು ಸಭೆಯಲ್ಲಿ ಭರವಸೆ ನೀಡಿದರು.
ಯಾದಗಿರಿ ಜಿಲ್ಲಾ ನಗರಾಭಿವೃದ್ದಿ ಆಧ್ಯಕ್ಷರಾದ ಬಾಬುರಾವ್ ಕಾಡ್ಲೂರು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿ ವಿಕಲಚೇತನರು ಸಾಧನೆ ಮಾಡುವಲ್ಲಿ ಯಾರಿಗಿಂತಲೂ ಕಡಿಮೆಯಿಲ್ಲ ಎಂದು ವಿಕಲಚೇತನರಿಗೆ ಸ್ಪೂರ್ತಿ ತುಂಬಿದರು.
ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತವನ್ನು ಮಾಳಪ್ಪ ಪೂಜಾರಿ ಒಖW ಮಾಡಿ ೨೦೧೬ ರ ಅಂಗವಿಕಲರ ಕಾಯ್ದೆ ಕುರಿತು ವಿವಿರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ೪ ಜನ ಸಾಧಕರಿಗೆ ಸನ್ಮಾನವನ್ನು ಮಾಡಿದರು.
ಅಧ್ಯಕ್ಷರು ಕಲಬುರ್ಗಿ ಜಿಲ್ಲೆಆರ್.ಪಿ.ಡಿ ರಾಜ್ಯ ಸಮಿತಿ ಸೈದಪ್ಪ ಹೊಸಮನಿ,ವಿರುಪಾಕ್ಷಪ್ಪ ಲಿಂಗಸೂಗುರು ಆರ್.ಪಿ.ಡಿ ಸದಸ್ಯರು, ನಾಗರಾಜ ಅಸ್ಕಿಹಾಳ ರಾಜ್ಯ ಸಂಚಾಲಕರು ಹಾಗೂ ಕು. ಉಮದೇವಿ ಅರ್.ಪಿ.ಡಿ ಟಾಸ್ಕ್ ಪೊರ್ಸ್ ಜಿಲ್ಲಾಧ್ಯಕ್ಷರು ಪ್ರಮುಖ ಹಕ್ಕೋತ್ತಾಯಗಳ ಮನವಿಯನ್ನು ಸಲ್ಲಿಸಿದರು.
ಈ ಒಂದು ಸಂದರ್ಭದಲ್ಲಿ ೬ ತಾಲೂಕ ಆರ್.ಪಿ.ಡಿ ತಾಲೂಕಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಎಪಿಡಿ ಸಿಬ್ಬಂದಿಗಳು ವಿವಿಧ ಗ್ರಾಮಗಳಿಂದ ಬಂದAತ ಒಖW/ ಗಿಖW ಹಾಗೂ ವಿಕಲಚೇತನರು ಭಾಗಿಯಾಗಿದ್ದರು.ರಮೇಶ ಕಟ್ಟಿಮನಿ ಕಾರ್ಯಕ್ರಮದ ನಿರೂಪಣೆ ನೀಡಿದರು.