ಕಲಬುರಗಿಯಿಂದ ಶ್ರೀಕ್ಷೇತ್ರ ಇಂಚಗೇರಿ ಮಠಕ್ಕೆ ದಿಂಡಿ ಪಲ್ಲಕ್ಕಿ ಪಾದಯಾತ್ರೆ 5 ರಂದು ಪ್ರಾರಂಭ

ಕಲಬುರಗಿ,ಜ.3-ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಶೀಕ್ಷೇತ್ರ ಇಂಚಗೇರಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಸಮರ್ಥ ಸದ್ಗುರು ಭಾವೂಸಾಹೇಬ ಮಹಾರಾಜರ, ಶ್ರೀ ಸಮರ್ಥ ಸದ್ಗುರು ಐನಾಥ ಪ್ರಭು ಮಹಾರಾಜರ, ಶ್ರೀ ಸಮರ್ಥ ಸದ್ಗುರು ಗಿರಿಮಲ್ಲೇಶ್ವರ ಮಹಾರಾಜರ, ಶ್ರೀ ಸಮರ್ಥ ಸದ್ಗುರು ಗುರುಪುತ್ರೇಶ್ವರ ಮಹಾರಾಜರ, ಹಾಗೂ ಶ್ರೀ ಸಮರ್ಥ ಸದ್ಗುರು ಜಗನ್ನಾಥ ಮಹಾರಾಜರ ಪುಣ್ಯತಿಥಿ ಸಪ್ತಾಹವು ಮಾಘ ಶುದ್ಧ ಪ್ರತಿಪದ ಸೋಮವಾರ ದಿನಾಂಕ 19 ಜನವರಿ 2026 ರಂದು ಶ್ರೀಕ್ಷೇತ್ರ ಇಂಚಗೇರಿ ಮಠದ ಟ್ರಸ್ಟ್ ಕಮೀಟಿ ಚೇರಮನ್ನರು ಹಾಗೂ ಸದ್ಗುರುಗಳಾದ ಪೂಜ್ಯ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ದಾಸಬೋಧ ವೀಣಾ ಹಾಗೂ ಗದ್ದುಗೆಗಳ ಪೂಜೆಯೊಂದಿಗೆ ಪ್ರಾರಂಭವಾಗಿ ಮಾಘ ಶುದ್ಧ ಚತುರ್ಥಿ ಗುರುವಾರ ದಿನಾಂಕ 22 ಜನವರಿ 2026 ರಂದು ಪುಷ್ಪ ವೃಷ್ಟಿಯೊಂದಿಗೆ ಮಂಗಲಗೊಳ್ಳುವುದು. ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭುಗಳ ರವರ ಆದೇಶದಂತೆ ಈ ಸಪ್ತಾಹಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಲಬುರಗಿಯ ಮಾಧವಾನಂದ ನಗರದಲ್ಲಿರುವ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭಗಳ ಆಶ್ರಮದಿಂದ ಹೊರಡುವ ದಿಂಡಿ ಪಲ್ಲಕ್ಕಿ ಪಾದಯಾತ್ರೆಗೆ ಸೋಮವಾರ ದಿನಾಂಕ 05 ಜನವರಿ 2026 ರಂದು ಪೂಜ್ಯ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರಆದೇಶದಂತೆ ಪಲ್ಲಕ್ಕಿ.ದಾಸಬೋದ ಹಾಗೂ ವೀಣಾ ಪೂಜೆಯೊಂದಿಗೆ ಪ್ರಾರಂಭವಾಗುವದು. ಕಲಬುರಗಿಯಿಂದ ಹೊರಟ ದಿಂಡಿ ಪಲ್ಲಕ್ಕಿ ಪಾದಯಾತ್ರೆಯು ದಿನಾಂಕ 18 ಜನವರಿ 2026 ರಂದು ಶ್ರೀ ಕ್ಷೇತ್ರ ಇಂಚಗೇರಿ ಮಠ ತಲುಪುವದು. ಪಾದಯಾತ್ರೆ ಹಾಗೂ ಸಪ್ತಾಹ ಕಾರ್ಯಕ್ರಮಗಳಲ್ಲಿ ಇಂಚಗೇರಿ ಸಂಪ್ರದಾಯದ ಸದ್ಗುರುಗಳ ದಿವ್ಯ ಸಂದೇಶವಾದ ಸರ್ವಧರ್ಮ ಸಮನ್ವಯ. ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮುಸೌಹಾರ್ದತೆ, ಸರ್ವೋದಯ, ವಿಶ್ವಶಾಂತಿ ಮುಂತಾದ ಮಹಾನ್ ವಿಚಾರಗಳನ್ನು ಊರೂರಿಗೆ ತಿಳಿಸುವುದೆ ಈ ಪಾದಯಾತ್ರೆಯ ಮುಖ್ಯ ಉದ್ದೇಶವಾಗಿದೆ. ಈ ಪಾದಯಾತ್ರೆಯಲ್ಲಿ ಇಂಚಗೇರಿ ಸಾಂಪ್ರದಾಯದ ನಿಯಮದಂತೆ ನಿತ್ಯನೇಮ ಉಪಾಸನೆ, ಭಜನೆ, ಪುರಾಣ ಪ್ರವಚನ, ಹೀಗೆ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ ಜರುಗುವವು. ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರು ಈ ಪಾದಯಾತ್ರೆಗೆ ಅಲ್ಲಲ್ಲಿಗೆ ಆಗಮಿಸಿ ಪ್ರವಚನ ನೀಡುವರು. ಸರ್ವ ಸದ್ಭಕ್ತರು
ಈ ಪಾದಯಾತ್ರೆ ಹಾಗೂ ಸಪ್ತಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಸದ್ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಭಾರತೇಶ ಹಾಸಿಲಕರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.