ಪಾಳುಬಿದ್ದ ಸರ್ಕಾರಿ ಕಟ್ಟಡ: ಅಕ್ರಮ ಚಟುವಟಿಕೆಗಳ ತಾಣ

ಜಮಖಂಡಿ:ಜ.14:ಜಿಲ್ಲಾ ಕೇಂದ್ರವಾಗಿರುವ ಜಮಖಂಡಿ ನಗರದ ಬಡಾವಣೆ ಒಂದರಲ್ಲಿ ನಿರ್ಮಿಸಿರುವ ಸರ್ಕಾರಿ ಕಟ್ಟಡ ಪಾಳು ಬಿದ್ದಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಸರ್ಕಾರವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಲವು ಯೋಜನೆಯಡಿ ಕಟ್ಟಡಗಳನ್ನು ನಿರ್ಮಿಸಿದ್ದು, ಹಣವೆಲ್ಲವೂ ವ್ಯರ್ಥವಾಗಿದೆ.

ಉಪವಿಭಾಗಾಧೀಕಾರಿಗಳಿಗಾಗಿ ನಿರ್ಮಿತವಾಗುತ್ತಿರುವ ವಸತಿ ಕಟ್ಟಡವು ದಶಕಗಳಿಂದ ಪೂರ್ಣಗೊಳ್ಳದೇ ಹಾಗೇ ನಿಂತಿದೆ ಎಷ್ಟೋ ಉಪವಿಭಾಗಾಧಿಕಾರಿಗಳು ಬಂದು ಹೊದರು ಆದರೆ ಇತ್ತ ಕಡೆ ಗಮನವೇ ಹರಿಸಿಲ್ಲ.

ಕಳೆದ 20 ವರ್ಷದ ಈ ವಸತಿ ಕಟ್ಟಡವು ನಿರ್ಮಾಣಗೊಳ್ಳದೇ ಹಾಗೇ ನಿಂತಿದ್ದರಿಂದ ಇದು ಅನೈತಿಕ ಚಟುವಟಿಕೆ ತಾಣವಾಗಿದೆ

ಕಟ್ಟಡದ ಸುತ್ತಲೂ ಗಿಡಗಂಟಿಗಳು ಎತ್ತರಕ್ಕೆ ಬೆಳೆದು ವಿಷಜಂತುಗಳ ತಾಣವಾಗಿ ಮಾರ್ಪಟ್ಟಿವೆ.

ಕಟ್ಟಡವು ಭಾಗಶಃ ಶಿಥಿಲಗೊಂಡಿದೆ. ಪಾಳು ಬಿದ್ದಿರುವುದನ್ನು ಸ್ಥಳೀಯರ ಆಕ್ರೋಶ ಹೊರಹಾಕುತ್ತಿದ್ದಾರೆ.

2005 ರಲ್ಲಿ ಅಂದಿನ ಉಪವಿಭಾಗಾಧಿಕಾರಿ ಎನ್.ಎಚ್ ಸೂಳೇಬಾವಿಯವರು ಅಧಿಕೃತ ಸರಕಾರಿ ನಿವೇಶನಕ್ಕಾಗಿ ಖಾಸಗಿಯಂದ ಖರೀದಿಸಿ ಸುಮಾರು 25 ಲಕ್ಷ ರೂ ಅನುದಾದಲ್ಲಿ ನಿರ್ಮಿತಿ ಕೇಂದ್ರಕ್ಕೆ ನಿರ್ಮಾಣದ ಕಾರ್ಯವನ್ನು ನೀಡಿದ್ದರು ಒಂದು ವರ್ಷದಲ್ಲಿ ಅವರು ಮೇಲ್ಛಾವಣೆಯನ್ನು ಹಾಕಿ ಅನುದಾನದ ಕೊರತೆಯಂದು ನಿರ್ಮಾಣಕಾರ್ಯವನ್ನು ನಿಲ್ಲಿಸಿದ್ದಾರೆ.
2005 ರಿಂದ 2025ರ ವರೆಗೆ ಸುಮಾರು 20 ಕ್ಕೂ ಅಧಿಕ ಉಪವಿಭಾಗಾಧಿಕಾರಿಗಳು ಕರ್ತವ್ಯ ನಿರ್ವಹಿಸಿದ್ದಾರೆ ಇವರಿಗೆ ಈ ಅರ್ಧ ನಿರ್ಮಾಣ ಕಟ್ಟಡದ ಬಗ್ಗೆ ಗೊತ್ತೊದೆಯೋ ಅಥವಾ ಜಾಣ ಕುರುಡು ಪ್ರದರ್ಶಿದ್ದಾರೆಯೇ ತಿಳಿದಿಲ್ಲ.
ಇನ್ನೊಂದು ಸೋಜಿಗವೇನೆಂದರೆ ಈ ನಿವೇಶನದ ಬಗ್ಗೆ ಯಾರಿಗೂ ತಿಳಿದಿಯೇ ಇಲ್ಲ ದಾಖಲೆಗಳ ಬಗ್ಗೆ ವಿಚಾರಿಸಿದರೆ ದಾಖಲೆಗಳೇ ಸಿಗುತ್ತಿಲ್ಲ. ಅದೂ ಅಲ್ಲದೆ ನಮ್ಮಲ್ಲಿ ಅರ್ಧಕ್ಕೆ ನಿಂತ ಕಟ್ಟಡವೇ ಇಲ್ಲವೆಂದು ಉತ್ತರ ಕೇಳಿಬರುತ್ತಿದೆ. ಅಂದರೆ ಈ ಸರಕಾರಿ ನಿವೇಶನ ಕಟ್ಟಡಕ್ಕೆ ಯಾರು ವಾರಸುದಾರರು ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ. ಇಂತಹ ಸರ್ಕಾರಿ ಕಟ್ಟಡಗಳ ಬಗ್ಗೆ ಜನಪ್ರತಿನಿಧಿಗಳು ಸಂಬಧಪಟ್ಟ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಈಗಾಗಲೇ ವಸತಿ ಕಟ್ಟಡ ಅಪೂರ್ಣಗೊಂಡ ವರ್ಷಗಳಿಂದ ಶಿಥಿಲಗೊಂಡಿದ್ದು, ಅದರ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು. ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿ ತಿಳಿಸಿದ್ದಾರೆ.

ಅಧಿಕಾರಿಗಳು ಸಾರ್ವಜನಿಕರ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಎಷ್ಟೋ ಸರ್ಕಾರಿ ಕಟ್ಟಡಗಳು ಅರ್ಧದಲ್ಲೇ ನಿಂತು ಅನೈತಿಕ ತಾಣಗಳಾಗಿವೆ. ಮೇಲಾಧಿಕಾರಿಗಳು, ಜನಪ್ರತಿನಿಧಿಗಳು ಇಂತಹ ಕಟ್ಟಡಗಳ ಬಗ್ಗೆ ಗಮನ ಹರಿಸಿ ಕಾಮಗಾರಿಗಳನ್ನು ಪೂರ್ಣಮಾಡಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಈ ನಮ್ಮ ಬಡಾವಣೆಯಲ್ಲಿ ಈ ಕಟ್ಟಡದಿಂದ ನಮಗೆಲ್ಲ ಬಹಳೇ ತೊಂದೆರೆಯಾಗಿದೆ ರಾತ್ರಿಯಾಯಿತೆಂದರೆ ಕುಡುಕರ ಹಾವಳಿ ಹೆಚ್ಚು ಅದರಿಂದ ಮಹಿಳೆಯರಿಗೆ ಮುಜುಗರವಾಗುತ್ತದೆ ಎಂದು ಅಲ್ಲಿಯ ನಿವಾಸಿಗಳು ಆಕ್ಷೇಪವೆತ್ತಿದ್ದಾರೆ.


ಉಪವಿಭಾಗಾಧಿಕಾರಿಗಳ ಪಿಡಬ್ಲ್ಯೂಡಿ ವಸತಿ ಗೃಹ ತುಂಬಾ ಹಳೆಯ ಕಟ್ಟಡವಿದ್ದು ಅದು ಶೀಥಿಲಗೊಂಡಿದೆ. ಈ ಹಿಂದೆ 2002-03 ನೇ ಸಾಲಿನಲ್ಲಿ ಕಂದಾಯ ಇಲಾಖೆ ವತಿಯಿಂದ ನಿರ್ಮಿತಿ ಕೇಂದ್ರದ ಮೂಲಕ ಉಪವಿಭಾಗಾಧಿಕಾರಿಗಳ ವಸತಿ ಗೃಹ ನಿರ್ಮಿಸಲಾಗಿತ್ತು. ಆದರೆ ಅನುದಾನದ ಕೊರತೆಯಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನು ಅರ್ಧವಿದ್ದ ಕಟ್ಟಡವನ್ನು ಪುನರುಜ್ಜೀವನಗೊಳಿಸಲು ಸುಮಾರು 26.39 ಲಕ್ಷ ರೂಗಳ ಅನುದಾನವು ಬೇಕಾಗಬಹುದು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಡಿಕೊಂಡಿದ್ದೇವೆ ಎಂದು ಉಪವಿಭಾಗಾಧೀಕಾರಿ ಶ್ವೇತಾ ಬೀಡಿಕರ ತಿಳಿಸಿದರು.