
ಚಿಂಚೋಳಿ: ತಾಲೂಕಿನ ಭಕ್ತಂಪಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ತಾಲೂಕು ಘಟಕದ ವತಿಯಿಂದ, ಭಕ್ತಂಪಳ್ಳಿ ಕಾರ್ಯಕ್ಷೇತ್ರದ ಹಣ ಸಂಗ್ರಹಣಾ ಕೇಂದ್ರದಲ್ಲಿ ಸಿಎಸ್ಸಿ (ಅSಅ) ಸೇವೆಗಳ ಪ್ರಮುಖ ಸೇವೆಯಾದ ಡಿಜಿಪೇ (ಆigiPಚಿಥಿ) ಸೇವೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ತಾಲೂಕು ಯೋಜನಾಧಿಕಾರಿ ಕೇಶವ್ ಡಿ.ಎಸ್. ಹಾಗೂ ಗರಗಪಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಗುಂಡಪ್ಪ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಯೋಜನಾಧಿಕಾರಿ ಕೇಶವ್ ಡಿ.ಎಸ್. ಅವರು, ಕೇಂದ್ರ ಸರ್ಕಾರದ ವಿವಿಧ ಸೇವೆಗಳನ್ನು ಗ್ರಾಮೀಣ ಭಾಗದ ಜನರಿಗೆ ಸುಲಭವಾಗಿ ತಲುಪಿಸುವ ಉದ್ದೇಶದಿಂದ ಡಿಜಿಪೇ ಸೇವೆಯನ್ನು ಆರಂಭಿಸಲಾಗಿದೆ. ಈ ಸೇವೆಯು ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಹಣ ಪಡೆಯಲು ದೂರದ ಊರುಗಳಿಗೆ ತೆರಳುವ ಅನಿವಾರ್ಯತೆ ಕಡಿಮೆಯಾಗುವುದರ ಜೊತೆಗೆ ಸಮಯವೂ ಉಳಿತಾಯವಾಗಲಿದೆ. ಗ್ರಾಮದಲ್ಲಿಯೇ ಹಣ ಪಡೆಯುವ ಸೌಲಭ್ಯ ದೊರೆಯುವುದರಿಂದ ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಬಳಿಕ ?500 ಹಣವನ್ನು ವಿತ್ಡ್ರಾ ಮಾಡುವ ಮೂಲಕ ಭಕ್ತಂಪಳ್ಳಿ ಕಾರ್ಯಕ್ಷೇತ್ರದಲ್ಲಿ ಡಿಜಿಪೇ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕ ಸತೀಶ್ ಕೆ.ಎಚ್. ಅವರು ನಿರೂಪಿಸಿ, ಸ್ವಾಗತಿಸಿದರು. ತಾಲೂಕು ನೋಡಲ್ ಅಧಿಕಾರಿ ವರ್ಷರಾಣಿ ಅವರು ವಂದಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಸೇವಾ ಪ್ರತಿನಿಧಿಗಳಾದ ಸುವರ್ಣ ಮತ್ತು ಸುಲೋಚನಾ, ಸಿಎಸ್ಸಿ ಸೇವಾದಾರರಾದ ಕುಮಾರಿ ರೂಪ, ಒಕ್ಕೂಟದ ಅಧ್ಯಕ್ಷೆ ನಾಗಮ್ಮ, ರೈತ ಮುಖಂಡ ಮಹಿಪಾಲ್ ರೆಡ್ಡಿ, ಸ್ವಸಹಾಯ ಸಂಘಗಳ ಸದಸ್ಯರು, ಗ್ರಾಮದ ಗಣ್ಯರು, ವಲಯದ ಕೃಷಿ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ವಿಎಲ್ಇ (ಗಿಐಇ) ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.





















