ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಧರಣಿ: ಸಂಸದ ಜಿಗಜಿಣಗಿ ಬೆಂಬಲ

ವಿಜಯಪುರ,ಸೆ.25:ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕೈಗೊಂಡ ಧರಣಿ ಸತ್ಯಾಗ್ರಹ ಗುರುವಾರ 8ನೇ ದಿನಕ್ಕೆ ಕಾಲಿಟ್ಟಿದೆ.
ಬುಧವಾರ ಸಂಸದ ರಮೇಶ ಜಿಗಜಿಣಗಿ ಅವರು ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು. ಇಂದು ಜಿಲ್ಲೇಯ ಎಲ್ಲಾ ಜನತೆ ಒಂದಾಗಿ ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆ ಅಡಿಯಲ್ಲಿ ವೈದ್ಯಕೀಯ ಸ್ಥಾಪನೆ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ಧೋರಣೆಯನ್ನು ವಿರೋಧಿಸಿ ಹೋರಾಟ ಕೈಗೊಂಡಿದ್ದಿರಿ, ಅದು ಬೇಡವೆಂಬುವದು ಎಲ್ಲರ ಮನಸ್ಸಿನಲ್ಲಿದೆ ಎಂದು ನಾನು ಈಗಾಗಲೇ ಪ್ರಧಾನ ಮಂತ್ರಿಗಳ ಗಮನಕ್ಕೆ ತರುವಂತಹ ಕೆಲಸ ಮಾಡಿದ್ದೇನೆ. ಹಾಗೆಯೇ ಕೇಂದ್ರ ಆರೊಗ್ಯ ಸಚಿವರಿಗೂ ಯಾವುದೇ ಕಾರಣಕ್ಕೂ ನಮ್ಮ ಜನತೆ ಪಿಪಿಪಿ ಯನ್ನು ಒಪ್ಪುವದಿಲ್ಲ ಯಾವ ಕಾರಣಕ್ಕೂ ವಿಜಯಪುರದಲ್ಲಿ ಪಿಪಿಪಿ ಯೋಜನೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಬಾರದು ಎಂದು ಮನವಿ ಮಾಡಲಾಗಿದೆ. ಸರಕಾರಿ ವೈದ್ಯಕೀಯ ಕಾÀಲೇಜು ಸ್ಥಾಪಿಸಲು ಒತ್ತಾಯಿಸಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮಾಡುತ್ತಿರುವಿರಿ. ಇದಕ್ಕೆ ನಾನು ಸಂಪೂರ್ಣವಾಗಿ ಬೆಂಬಲವನ್ನು ನೀಡುತ್ತೇನೆ. ಇದರಲ್ಲಿ ಯಾರ ಒಬ್ಬರ ವೈಯಕ್ತಿಕ ಹಿತಾಸಕ್ತಿ ಇಲ್ಲದೆ ಎಲ್ಲರೂ ಸೇರಿ ವೈದ್ಯಕೀಯ ಕಾಲೇಜು ತರಬೇಕಾಗಿದೆ , ಬಡವರಿಗೆ ,ಸಾಮಾನ್ಯ ಜನರಿಗೆ ಎಲ್ಲರಿಗೂ ಇದು ಉಪಯೋಗವಾಗವಂತಹದ್ದಾಗಿದೆ. ಶ್ರೀಮಂತರು ಖಾಸಗಿಯಲ್ಲಿ ದುಡ್ಡು ಕೊಟ್ಟು ಆರೋಗ್ಯ ಸರಿಪಡಿಸಿಕೊಳ್ಳುತ್ತಾರೆ. ಆದರೆ ಜಿಲ್ಲೆಯಲ್ಲಿರುವ ಕಡುಬಡವರು, ದುಡಿಯುವ ಜನರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟ ಪಡುತ್ತಿರಬೇಕಾದರೆ ಅವರಿಗೆ ಆರೋಗ್ಯ ಸಮಸ್ಯೆ ಬಂದಾಗ ಸ್ಪಂದಿಸುವರು ಯಾರು? ಅಂತವರಿಗೆ ಸರಕಾರಿ ಆಸ್ಪತ್ರೆಗಳು, ಸರಕಾರಿ ವೈದ್ಯಕೀಯ ಕಾಲೇಜು ಅವರಿಗೆ ಸೇವೆ ನೀಡುವಂತಾದರೆ ಬಡವರ ಜೀವಗಳು ಉಳಿಯುತ್ತವೆ. ಜಿಲ್ಲೆಯಲ್ಲಿ ಸಂಪೂರ್ಣವಾಗಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಪಕ್ಷದ ನಾಯಕದೊಂದಿಗೆ ಚರ್ಚಿಸಿ ಪ್ರಾಮಾಣಿಕವಾಗಿ ನಾನು ಪ್ರಯತ್ನಮಾಡುವದಾಗಿ ಹೋರಾಟಗಾರರಿಗೆ ಹಾಗೂ ಜಿಲ್ಲೆಯ ಜನತೆಗೆ ಆಶ್ವಾಸನೆ ನೀಡಿದರು.
ವಿಜಯಪುರ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಲು ನನಗೂ ಬಹಳಷ್ಟು ಆಸೆ ಇದೆ. ಸಾಧ್ಯಸಾಧ್ಯತೆ ಬಗ್ಗೆ ಪರಿಶೀಲಿಸಿ ಪ್ರಯತ್ನ ಮಾಡುತ್ತೇನೆ. ನನಗೆ ಜಿಲ್ಲೆಯ 15 ಲಕ್ಷ ಜನರ ಹಿತಾಸಕ್ತಿ ಈಡೇರಿಸಲು ನಾನು ಈ ಕುರಿತು ಮಾತನಾಡುವೆ ಎಂದು ಹೋರಾಟಗಾರರ ಪ್ರಶ್ನೆಗೆ ಸಂಸದ ಜಿಗಜಿಣಗಿ ಉತ್ತರಿಸಿದರು.
ಇದೇ ಸಂದರ್ಭದಲ್ಲಿ ಅರುಣ ಶಹಾಪುರ, ಚಂದ್ರಶೇಖರ ಕವಟಗಿ, ಗುರಲಿಂಗಪ್ಪ ಅಂಗಡಿ, ಸುರೇಶ ಬಿರಾದಾರ, ಉಮೇಶ ಕಾರಜೋಳ, ಭೋಗೇಶ ಸೋಲಾಪುರ, ಉಮೇಶ ಕೋಳೂಕರ, ನವಸ್ಫೂರ್ತಿ ಸಂಘದ ಅಧ್ಯಕ್ಷ ಶಬ್ಬೀರ ಕಾಗಜಕೋಟ, ಮಲ್ಲಿಕಾರ್ಜುನ ಎಚ್ ಟಿ, ಮಲ್ಲಿಕಾರ್ಜುನ ಹಿರೇಮಠ, ಕಾಶಿಬಾಯಿ ಜನಗೊಂಡ, ಪ್ರವೀಣ ಚಿಕ್ಕಲಕಿ, ಗಿರೀಶ ಕಲಘಟಗಿ, ಲಕ್ಷ್ಮಣ ಕಂಬಾಗಿ, ಉಮೇಶ ವಾಲಿಕಾರ, ಲಂಕೇಶ ತಳವಾರ ಮುಂತಾದವರು ಮಾತನಾಡಿದರು.
ಅರವಿಂದ ಕುಲಕರ್ಣಿ, ಅನಿಲ ಹೊಸಮನಿ, ಫಯಾಜ್ ಕಲಾದಗಿ, ಶ್ರೀನಾಥ ಪೂಜಾರಿ, ಸಿದ್ದರಾಮ ಹಳ್ಳೂg,À ಪ್ರಭುಗೌಡ ಪಾಟೀಲ, ಮಲ್ಲಿಕಾರ್ಜುನ ಕೆಂಗನಾಳ, ಮಲ್ಲಿಕಾರ್ಜುನ ಬಟಗಿ, ದಸ್ತಗೀರ ಉಕ್ಕಲಿ, ಸಿದ್ದನಗೌಡ ಪಾಟೀಲ, ಶಿವಬಾಳಮ್ಮ ಕೊಂಡಗೂಳಿ, ಮಹಾದೇವಿ ಧರ್ಮಶೆಟ್ಟಿ, ಶರಣಬಸಪ್ಪ ಗಂಗಶೆಟ್ಟಿ, ನವಸ್ಪೂರ್ತಿ ಸಂಘದ ಪದಾಧಿಕಾರಿಗಳಾದ ಗುಲಾಬ್, ರೇಣುಕಾ ಶಾಂತಗೌಡ ಯಮನವ್ವ ನೂರಾರು ಜನರು ಭಾಗವಹಿಸಿದ್ದರು.