ವಿಜಯಪುರ,ಅ.18:ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹವು ಶನಿವಾರ 31 ನೇ ದಿನಕ್ಕೆ ಕಾಲಿಟ್ಟಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧಕ್ಯ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಸರಕಾರಿ ಮೆಡಿಕಲ್ ಕಾಲೇಜು ನಮ್ಮ ಹಕ್ಕು. ಬಡವರ ಹಿತಾಸಕ್ತಿಯನ್ನು ಸರಕಾರ ಕಾಪಡಬೇಕು. ಬಡವರಿಗಾಗಿ, ಆರ್ಥಿಕವಾಗಿ ಹಿಂದುಳಿದವರಿಗಾಗಿ ಸರಕಾರಿ ಕಾಲೇಜು ಅವಶ್ಯಕತೆ ಇದೆ. ನಮ್ಮ ಮಕ್ಕಳು ಕಲಿಯದಿದ್ದರೂ ಮುಂದಿನ ನಮ್ಮ ಪೀಳಿಗೆಗಾಗಿ ಸರಕಾರ ವೈದ್ಯಕೀಯ ಕಾಲೇಜನ್ನು ವಿಜಯಪುರದಲ್ಲಿ ಆರಂಭಿಸಬೇಕು. ಸರಕಾರ ಜನರ ಹೋರಾಟಕ್ಕೆ ಮಣಿದು ವೈದ್ಯಕೀಯ ಕಾಲೇಜು ಆರಂಭಿಸದ ಹೋದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಬೆಳೆಸಲು ನಾವು ಸಿದ್ದರಿದ್ದೇವೆ. ಜನಗಳ ಹಿತಾಸಕ್ತಿ ಕಾಪಾಡದ ಜನಪ್ರತಿನಿದಿಗಳು ಏಕೆ ಬೇಕು ಎಂದು ಗುಡುಗಿದರು.
ಕಳೆದ 30 ದಿನಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಹೋರಾಟ ನಡೆಸುತ್ತಲೆ ಬಂದಿದ್ದಾg.É ಆದರೆ ಸರಕಾರ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಯಾರ ಹಿತಾಸಕ್ತಿ ಕಾಪಾಡುವಲ್ಲಿ ಇವರು ನಿರತರಾಗಿದ್ದಾರೆ ಎಂದು ಹೇಳಿದರು.
ಹೋರಾಟ ಸಮಿತಿಯ ಸದಸ್ಯರಾದ ಅರವಿಂದ ಕುಲಕರ್ಣಿ, ಭಗವಾನ್ ರೆಡ್ಡಿ, ಲಲಿತಾ ಬಿಜ್ಜರಗಿ, ಅಕ್ರಂ ಮಾಷಳಕರ, ಪ್ರಭುಗೌಡ ಪಾಟೀಲ, ಸುರೇಶ ಬಿಜಾಪುರ, ಲಕ್ಷ್ಮಣ ಹಂದ್ರಾಳ, ಭರತಕುಮಾರ ಹೆಚ್,ಟಿ., ಮಲ್ಲಿಕಾರ್ಜುನ ಹೆಚ್ ಟಿ, ಬಾಬುರಾವ್ ಬೀರಕಬ್ಬಿ ಹಾಗೂ ಸಂಗನಬಸವೇಶ್ವರ ಸ್ವಾಮೀಜಿ, ಬಸವರಾಜ ಸುತ್ತಗುಂಡಿ, ಮಹದೇವಪ್ಪ ತೇಲಿ, ಗಿರೀಶ ಕಲಘಟಗಿ, ಶೇಷರಾವ್ ಮಾನೆ, ಲಕ್ಷ್ಮಣ ಕಂಬಾಗಿ, ಚೆನ್ನು ಕಟ್ಟಿಮನಿ, ಸಲೀಂ ವಜ್ರಾಣಿ, ಜಗದೇವ ಸೂರ್ಯವಂಶಿ, ಬೋಗೇಶ್ ಸೋಲಾಪುರ, ನಾಗರಾಜ ಕಲಕುಟಗರ, ಗೀತಾ ಹೆಚ್, ನೀಲಮ್ಮ ಬಿರಾದಾರ, ಕಾವೇರಿ ರಜಪೂತ, ಮಹದೇವಿ ಧರ್ಮಶೆಟ್ಟಿ ಮುಂತಾದವರು ಭಾಗವಹಿಸಿದ್ದರು.



























