
ಯಾದಗಿರಿ: ಡಿ.24:ಗಾನಯೋಗಿ ಸಾಂಸ್ಕøತಿಕ ಸಂಗೀತ ಕಲಾ ಸಂಘ ಯಾದಗಿರಿ ವತಿಯಿಂದ ನಾಡಿನ ಭಕ್ತಿಗೀತೆಗಳ ಪ್ರಚುರಕ್ಕಾಗಿ ಭಕ್ತಿಸುಧೆ ಸಂಗೀತ ಕಾರ್ಯಕ್ರಮ ನಗರದ ಮಾತಾ ಮಾಣಿಕೇಶ್ವರಿ ಕಾಲೋನಿಯ ಶ್ರೀ ಈಶ್ವರ ದೇವಸ್ಥಾನದಲ್ಲಿ ಜರುಗಿತು.
ನಿವೃತ್ತ ಬಿಎಸ್‍ಎನ್‍ಎಲ್ ಅಧಿಕಾರಿ ಕಾಳಿಂಗಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಲೆ ಸಂಸ್ಕøತಿ ಅದರಲ್ಲೂ ವಿಶೇಷವಾಗಿ ಭಕ್ತಿಗೀತೆಗಳ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಸಂಸ್ಕøತಿಕ ಪರಂಪರೆ ಮುಂದುವರೆಸಿಕೊಂಡು ಹೋಗಲು ಇದು ಅವಶ್ಯಕ ಎಂದು ಹೇಳಿದರು.
ದೇವಸ್ಥಾನದ ಅರ್ಚಕ ಶ್ರೀ ಶಂಕ್ರಯ್ಯ ಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ಡಾ ಕೃಷ್ಣಮೂರ್ತಿ ಕುಲಕರ್ಣಿ, ವೆಂಕಟೇಶ ಹಿಂದುಪುರ, ಸಾಬಯ್ಯ ದೇಸಾಯಿ, ಟಿ. ಶಶಿಧರ ಬೋಧಿ ಮಂಡಲ ಕಲಾ ಸಂಸ್ಥೆ ಅಧ್ಯಕ್ಷ ರಂಗನಾಥ ಬಾಗ್ಲಿ, ರಾಜೇಶ ಕಲಾಲ್, ಶ್ರೀಮತಿ ಸುರೇಖಾ, ಶ್ರೀಮತಿ ಮಂಜುಳ, ಶ್ರೀಮತಿ ಸವಿತಾ ಇದ್ದರು.
ನಂತರ ಜರುಗಿದ ಕಾರ್ಯಕ್ರಮದಲ್ಲಿ ಕಲಾವಿದರಾದ ಶಾಂತಕುಮಾರ ಬಿಜಾಸಪುರ (ವಚನ ಸಂಗೀತ, ಮಹೇಶ ಶಿರವಾಳ (ಸುಗಮ ಸಂಗೀತ), ಭೀಮಾಶಂಕರ ಘಂಟೆರ್ (ಜಾನಪದ ಗೀತೆ), ತಿರುಪತಿ ವೈದ್ಯ (ದಾಸರ ಪದ), ಶ್ರೀಮತಿ ಶರಣಮ್ಮ ದೊಡ್ಡಮನಿ (ಭಕ್ತಿ ಗೀತೆಗಳು) ಪ್ರಸ್ತುತ ಪಡಿಸಿದರು.
























