
ತಾಳಿಕೋಟೆ:ಮೇ.೨೪: ರೈತಾಪಿ ಜನತೆಯ ಹಿತಬಯಸುವ ಮಳೆ ಬೆಳೆ ಹುಲುಸಾಗಿ ಬಂದು ಸಾರ್ವಜನಿಕರು ನೆಮ್ಮದಿಯಿಂದ ಬಾಳಲಿ ಇಡೀ ದೇಶವೇ ಶಾಂತಿಯಿAದ ಸಾಗಲಿ ಎಂಬ ಉದ್ದೇಶಹೊತ್ತು ಪಟ್ಟಣದಲ್ಲಿ ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದ್ದ ಉಡಿ ತುಂಬುವ ಕಾರ್ಯಕ್ರಮವು ಶುಕ್ರವಾರರಂದು ಭಕ್ತಿಭಾವದೊಂದಿಗೆ ಜರುಗಿತು.
ಶ್ರೀ ದ್ಯಾಮವ್ವದೇವಿ ಶ್ರೀ ಗ್ರಾಮದೇವಿ ಸೇವಾ ಸಮಿತಿಯ ನೇತೃತ್ವದಲ್ಲಿ ಜರುಗಿದ ಉಡಿ ತುಂಬುವ ಕಾರ್ಯಕ್ರಮದ ನಿಮಿತ್ಯ ಪಟ್ಟಣದ ಸಮಸ್ತ ಭಕ್ತಾದಿಗಳು ೫ ಶ್ರೀ ದೇವಿಯ ವಾರ ಹಿಡಿದು ಉಪವಾಸವಿದ್ದು ಕೊನೆಯವಾರವಾದ ಶುಕ್ರವಾರರಂದು ಶ್ರೀ ಗ್ರಾಮದೇವಿಯ ಮಂದಿರಕ್ಕೆ ಎಡೆ, ಕಾಯಿ, ಕರ್ಪೂರ, ಗಳನ್ನು ನೀಡಿ ಶ್ರೀ ದೇವಿ ಮಂದಿರದ ಮುಂಭಾಗದಲ್ಲಿ ನೀರು ಹಾಕುವದರೊಂದಿಗೆ ಬೇಕು ಬೇಡಿಕೆಗಳನ್ನು ಆಲಿಸಿದರಲ್ಲದೇ ಶ್ರೀ ದೇವಿಯ ಮಹಾ ಪ್ರಸಾದ ಸೇವಿಸಿ ಪುನಿತರಾದರು.
ಉಡಿ ತುಂಬುವ ಕಾರ್ಯಕ್ರಮ ಕುರಿತು ಶ್ರೀ ಗ್ರಾಮದೇವಿಯ ಮಂದಿರದಿAದ ಹೊರಟು ಶ್ರೀ ಅಂಬಾಭವಾನಿ ಮಂದರಕ್ಕೆ ಹೋಗಿ ಶ್ರೀ ಭವಾನಿಗೆ ಉಡಿ ತುಂಬುವ ಕಾರ್ಯಕ್ರಮ ನೇರವೇರಿಸಲಾಯಿತ್ತಲ್ಲದೇ ಪುನಃ ಈ ಮಂದಿರದಿAದ ಆಗಮಿಸಿದ ಈ ಮೆರವಣಿಗೆಯು ಶ್ರೀ ಮರಗಮ್ಮ ಮಂದಿರಕ್ಕೆ ಆಗಮಿಸಿ ಅಲ್ಲಿಯೂ ಉಡಿ ಕಾರ್ಯಕ್ರಮ ನೆರವೇರಿತು. ನಂತರ ಹೊರಟು ಶ್ರೀ ಪಾಲಕಮ್ಮ ಮಂದಿರಕ್ಕೆ, ಫಿಲೆಕೆಮ್ಮ ಅಲ್ಲದೇ ಸುಲಿಹಲ್ಲ ದ್ಯಾಮವ್ವ ಮಂದಿರಕ್ಕೆ, ಶ್ರೀ ಶಿವಭವಾನಿ ಮಂದಿರಕ್ಕೆ ಆಗಮಿಸಿ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು.
ಸಾಯಂಕಾಲ ಶ್ರೀ ಗ್ರಾಮದೇವಿಯ ಸ್ವಮಂದಿರದಲ್ಲಿದ್ದ ತಾಳಿಕೋಟೆಯ ಗ್ರಾಮದೇವಿಗೆ ಹಾಗೂ ಮೈಲೇಶ್ವ ಗ್ರಾಮದೇವಿಗೆ, ಹಾಗೂ ಮಸ್ಕಾನಾಳ ಗ್ರಾಮದೇವಿಗೆ ಉಡಿ ತುಂಬುವ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿಸಲಾಯಿತು.
ಅರ್ಚಕರಾದ ಶ್ರೀಶೈಲ ಬಡಿಗೇರ, ಗಂಗಾಧರ ಬಡಿಗೇರ, ಸಿದ್ದಣ್ಣ ಬಡಿಗೇರ, ಪ್ರಭು ಬಡಿಗೇರ, ನಾಗರಾಜ ಬಡಿಗೇರ, ವಿಶ್ವಾನಾಥ ಆಚಾರ್ಯ, ಮಂಜು ಬಡಿಗೇರ, ಕುಮಾರ ಬಡಿಗೇರ, ಪ್ರಜ್ವಲ ಬಡಿಗೇರ, ಭೀಮು ಬಡಿಗೇರ, ಚಿದಾನಂದ ಬಡಿಗೇರ, ಒಳಗೊಂಡು ಪಟ್ಟಣದ ಮುಖಂಡರು, ರೈತಾಪಿ ವರ್ಗದವರು ಮತ್ತು ಭಕ್ತಾಧಿಗಳು ಶ್ರೀ ದೇವತೆಗಳ ಮಹಾ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಉಡಿ ತುಂಬುವ ಕಾರ್ಯಕ್ರಮದ ನೇತೃತ್ವವನ್ನು ಪಟ್ಟಣದ ಭಕ್ತಾಧಿಗಳು, ಮುಖಂಡರುಗಳು, ವಹಿಸಿದ್ದರು.