ಸಂಗಮದಲ್ಲಿ ಭಕ್ತರ ಪುಣ್ಯಸ್ನಾನ


ನವಗುಂದ,ಜ.೧೬: ಸಂಕ್ರಮಣದ ನಿಮಿತ್ತ ಗುರುವಾರ ಪಟ್ಟಣದ ತುಪ್ಪರಿಹಳ್ಳ ಹಾಗೂ ಬೆಣ್ಣಿಹಳ್ಳ ಸಂಗಮದಲ್ಲಿ ಪಟ್ಟಣವೂ ಸೇರಿ ತಾಲ್ಲೂಕಿನ ಜನತೆ ಪುಣ್ಯಸ್ನಾನ ಮಾಡುವ ಮೂಲಕ ಸಂಗಮದಲ್ಲಿ ಮಿಂದೆದ್ದು ಅಲ್ಲಿಯೇ ಇರುವ ಸಂಗಮೇಶ್ವರ ದೇವಸ್ಥಾನದಲ್ಲಿ ದರ್ಶನ ಪಡೆದು ಪೂಜಾ ವಿಧಾನಗಳನ್ನು ನೆರವೇರಿಸಿದರು.


ಹಳ್ಳದ ಎರಡೂ ಬದಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನಂತರ ಎಲ್ಲರೂ ಪರಸ್ಪರ ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡು ಶುಭಾಷಯ ಸಂಕ್ರಮಣದ ಶುಭಾಷಯ ಕೊರಿದರು.