ದೇವಾಲಯಕ್ಕೆ ಭಕ್ತರೇ ಆಸರೆ : ದೇಶಮುಖ

ಭಾಲ್ಕಿ : ಅ.೯:ಮೊರಂಭಿ ಶರಣಬಸವೇಶ್ವರ ದೇವಾಲಯಕ್ಕೆ ಭಕ್ತರೇ ಆಸರೆಯಾಗಿದ್ದಾರೆ ಎಂದು ಕಲಬುರ್ಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ್ ದೇಶಮುಖ ಹೇಳಿದರು.
ತಾಲೂಕಿನ ಮೋರಂಬಿ ಗ್ರಾಮದ ಶರಣ ಬಸವೇಶ್ವರ ದೇವಳದಲ್ಲಿ ಮಂಗಳವಾರ ನಡೆದ ೫೩ನೆ ವರ್ಷದ ಸಿಗೆ ಹುಣ್ಣಿಮೆ ಸಂಬ್ರಮ, ಸುಮಂಗಲಿಯರೆಗೆ ಉಡಿತುಂಬುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮೊರಾಂಬಿಯ ಶರಣ ಬಸವೇಶ್ವರ ದೇವಾಲಯದಲ್ಲಿ ಶರಣ ಮಹದೇವಪ್ಪ ಗುಂದಗಿ ಯವರ ಸತ್ಯ ಸಂಕಲ್ಪದAತೆ ೫೨ ವರ್ಷಗಳಿಂದ ಸುಮಂಗಲಿಯರ ಉಡಿ ತುಂಬುವ ಕಾರ್ಯ ಕ್ರಮ ನಡೆಸಿಕೊಂಡು ಬರುತ್ತಿರುವುದು ಪ್ರಶಂಸನೀಯ ಕಾರ್ಯವಾಗಿದೆ. ಈ ದೇವಸ್ಥಾನಕ್ಕೆ ಯಾವುದೇ ಆಸ್ತಿ ಇಲ್ಲ, ಭಕ್ತರ ಸಹಕಾರದಿಂದ ಮುಂದೆಯೂ ಈ ಕಾರ್ಯ ಹೀಗೆ ಮುನ್ನಡೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು. ತಾ.ಪಂ.ಮಾಜಿ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ್ ಮಾತನಾಡಿ, ದೇವಾಲಯದಲ್ಲಿ ನಿರಂತರ ದಾಸೋಹ ನಡೆಸಬೇಕೆಂದು ಲಿಂ.ಮಹದೇವಪ್ಪ ನವರ ಸಂಕಲ್ಪವಾಗಿದೆ, ಗೀತಾ ಖಂದ್ರೆಯವರು ಮುತುವರ್ಜಿ ವಹಿಸಿ ನಿರಂತರ ದಾಸೋಹ ಭವನಕ್ಕೆ ಸಾಕಾರ ನೀಡಬೇಕು ಎಂದು ಹೇಳಿದರು. ಡಾಕ್ಟರ್ ಅಶ್ವಿನಿ ಶರಣು ಅಷ್ಟೂರೆ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಶರಣ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಮೊರಂಬಿಯ ಅಧ್ಯಕ್ಷ ಸಿದ್ರಾಮಪ್ಪ ಗುಂದಗಿ ಗೀತಾ ಖಂಡ್ರೆ ಯವರಿಗೆ ನಿರಂತರ ದಾಸೋಹ ಭವನ ನಿರ್ಮಿಸಲು ಮನವಿ ಪತ್ರ ಸಲ್ಲಿಸಿದರು.
ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾಕ್ಟರ್ ಗೀತಾ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು. ಇದೇವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದ ಪ್ರಮುಖರಾದ ರೂಪಾ ಸಿದ್ರಾಮಯ್ಯ ಸ್ವಾಮಿ ಮತ್ತು ನಿರ್ಮಲ ಚಾನ್ಶೆಟ್ಟಿ ಮೈನಾಲೆ ಯಾವರಿಗೆ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾವತಿ ಸೊಮನಾಥಪ್ಪ ಅಸ್ತುರೆ, ಶಿಲ್ಪಾ ಶಿವಾನಂದ ಪವಾಡಶೆಟ್ಟಿ, ಕಸ್ತೂರಬಾಯಿ ಕರಡೇ, ಶೋಭಾವತಿ ಜಯರಾಜ್ ಧಾಬಶೆಟ್ಟಿ, ಮಲ್ಲಿಕಾರ್ಜುನ್ ಸ್ವಾಮಿ, ಕಾವೇರಿ ಮಹೇಶ್ ಸಜ್ಜನ್ ಶೆಟ್ಟಿ, ಸವಿತಾ ಅಶೋಕ ಲದ್ದೆ, ರೇಖಾ ಸಂಜೀವ ಪಾಟೀಲ್, ಶಿವರುದ್ರಪ್ಪ ಜಗನಾಥಪ್ಪ ವಾರದ, ಗಾಯತ್ರಿ ಶಶಿಬ್ಬುಷಣ ವಾರದ, ಸೋಮಶೇಖರ್ ಗುಂದಗೆ, ಗುರುದೇವಿ ಗುಂದಗೆ, ವರ್ಷ ಉಚ್ಚೇಕರ, ಪ್ರಭಾವತಿ ಆಳ್ಳೆ, ಸಂಗಮ್ಮ ವಾರದ, ಪೂಜಾ ಧೂಮನಸುರೆ, ಅಂಕುಶರಾವ್ ಪಾಟೀಲ್, ಷಣ್ಮುಖಪ್ಪ ಉಚೆಕರ, ರಾಜೇಶ್ರೀ ಪಾಟೀಲ್ ಸೇಡಂ ಉಪಸ್ಥಿತ ರಿದ್ದರೂ. ಅಶ್ವಿನಿ ಆಸ್ತುರೆ ಸ್ವಾಗತಿಸಿದರು. ವಿಜಯಕುಮಾರ್ ವಾರದ ನಿರೂಪಿಸಿದರು. ಜ್ಯೋತಿ ಗುಂದಗೆ ವಂದಿಸಿದರು.