
ಆಳಂದ:ಮಾ.7: ತಾಲೂಕಿನ ಮಾಡಿಯಾಳ ಗ್ರಾಮದಿಂದ ಶ್ರೀ ಸೋಮಶೇಖರ್ ಮುತ್ತ್ಯಾ ವಡಿಯರ ನೇತೃತ್ವದಲ್ಲಿ ಬೀದರ ಜಿಲ್ಲೆಯ ಅಷ್ಟೂರು ಅಲ್ಲಮಪ್ರಭುವಿನ ಜಾತ್ರೆಗೆ ಹಲವಾರು ಭಕ್ತರು, ಮಹಿಳೆಯರು, ಮಕ್ಕಳು ಶುಕ್ರವಾರ ಪಾದ ಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ತೆರೆಳಿದರು.
ಹಿಂದೂ ಮುಸ್ಲಿಂರ ಭಾವೈಕ್ಯತೆಯ ಧಾರ್ಮಿಕ ಕೇಂದ್ರವಾದ ಅಷ್ಟೂರು ಗ್ರಾಮದೇವತೆಯನ್ನು ಅಲ್ಲಮಪ್ರಭುವಿಗೆ ಹಿಂದೂಗಳು ಪ್ರಭುಲಿಂಗ ಎಂದರೆ, ಮುಸ್ಲಿಂರು ಅಲ್ಲಮಪ್ರಭು ಎಂದು ಕರೆಯುವ ಸಂಪ್ರದಾಯ ಪುರಾತನ ಕಾಲದಿಂದ ಈ ಗ್ರಾಮಗಳಲ್ಲಿ ನಡೆದು ಬಂದಿದೆ.
ಜಾತ್ರೆಯೂ ಇದೆ 6ರಂದು ಮಾಡಿಯಾಳ ಗ್ರಾಮದಿಂದ ಪ್ರಾರಂಭವಾಗಿ ಮಾಡಿಯಾಳ ಗ್ರಾಮದಲ್ಲಿಯೆ ಮಾರ್ಚ 20ರಂದು ಸಮಾರೋಪವಾಗಲಿದೆ. ಸುಮಾರು ಹದಿನೈದು ದಿನಗಳ ಕಾಲ ನಡೆಯುವ ಅಲ್ಲಮಪ್ರಭುವಿನ ಜಾತ್ರೆಗೆ ಶ್ರೀ ಸೋಮಶೇಖರ ಮುತ್ತ್ಯಾ ವಡಿಯರ ಅವರು ಭಕ್ತರೊಂದಿಗೆ ಐದು ದಿನಗಳ ಕಾಲ ಪಾದಯಾತ್ರೆ ಮಾಡಿ ಬೀದರ ಜಿಲ್ಲೆಯ ಅಷ್ಟೂರು ಅಲ್ಲಮಪ್ರಭವಿನ ಜಾತ್ರೆಗೆ ಚಾಲನೆ ನೀಡಿ ಅಲ್ಲಿಯೆ ದಿನಾಂಕ 14ವರೆಗೆ ವಾಸ್ತವ್ಯ ಮಾಡುವರು. 15ರಂದು ರವಿವಾರ ಬೆಳಿಗ್ಗೆ 9ಗಂಟೆಗೆ ಪಾದಯಾತ್ರೆಯ ಮೂಲಕ ಹೊರಟು ಮಾಡಿಯಾಳ ಗ್ರಾಮಕ್ಕೆ 18ರಂದು ಯುಗಾದಿ ಹಬ್ಬದೆಂದು ಸಂಜೆ ಹಿಂದಿರುಗವರು.
ಅಷ್ಟೂರು ಗ್ರಾಮಸ್ಥರಿಂದ ಪ್ರತಿ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ಭಜನೆ, ಕೀರ್ತನೆ, ಹಾಸ್ಯ ರಸಮಂಜರಿ ಮತ್ತು ಧಾರ್ಮಿಕ ಸಭೆ ಆಯೋಜಿಸಿ ಭಕ್ತರಿಗೆ ಮನರಂಜನೆ ಒದಗಿಸುವವರು. ಅಲ್ಲದೆ ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಿಕೊಡುವುದರ ಮೂಲಕ ಯಾವುದೇ ಕೊರತೆಯಾಗದಂತೆ ಗ್ರಾಮಸ್ಥರು ನೋಡಿಕೊಳ್ಳುವರು.
ಆಳಂದ ತಾಲೂಕಿನ ಮಾಡಿಯಾಳ, ಹೆಬಳಿ, ಜೀರಹಳ್ಳಿ, ನಿಂಬರ್ಗಾ, ಆಳಂದ, ನರೋಣಾ, ಜಾವಳಿ ಡಿ, ಲಾಡಚಿಂಚೋಳಿ ಗ್ರಾಮಗಳ ಹಲವಾರು ಭಕ್ತರು ಪಾದ ಯಾತ್ರೆಯಲ್ಲಿ ಮೂಲಕ ಪಾಲ್ಗೊಳುವರು. ಮಾಡಿಯಾಳ ಗ್ರಾಮದಿಂದ ಅಷ್ಟೂರು ಗ್ರಾಮಕ್ಕೆ ದಿನಾಂಕ 10-3-2026 ರಂದು ನೇರ ಬಸ್‍ಗಳ ವ್ಯವಸ್ಥೆ ಕೂಡ ಜಾತ್ರಾ ಸಮಿತಿಯಿಂದ ಮಾಡಲಾಗುತ್ತಿದೆ.




















