
ಬಾದಾಮಿ,ಡಿ.೧೫: ಇಲ್ಲಿನ ಮಂತ್ರಾಲಯ ಪಾದಯಾತ್ರೆ ಸಂಘದ ವತಿಯಿಂದ ನಗರದ ಸುಮಾರು ೩೫ ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯ ಮೂಲಕ ಮಂತ್ರಾಲಯಕ್ಕೆ ಶನಿವಾರದಂದು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಪಾದಯಾತ್ರೆಯನ್ನು ಪ್ರಾರಂಭಿಸಿದರು.
ಪಾದಯಾತ್ರಾ ಸಂಘದ ಅಧ್ಯಕ್ಷ ಕೇಶವ ಜೋಶಿ ಮಾತನಾಡಿ ೪೭ ವರ್ಷಗಳಿಂದ ಪಾದಯಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ಶ್ರೀ ಗುರು ರಾಯರ ದರ್ಶನ ಭಾಗ್ಯಕ್ಕಾಗಿ ಹಾಗೂ ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆಯನ್ನು ಮಾಡುತ್ತಾ ಬಂದಿದ್ದೇವೆ ಎಂದರು.
ಡಿ. ೧೯ ಶುಕ್ರವಾರದಂದು ನಾವೂ ಪಾದಯಾತ್ರೆ ಮೂಲಕ ಮಂತ್ರಾಲಯ ತಲುಪಲಿದ್ದೇವೆ ಎಂದು ರಾಘವೇಂದ್ರಾಚಾರ್ಯ ಮಣ್ಣೂರ ಹೇಳಿದರು.
ಪಾದಯಾತ್ರೆಯಲ್ಲಿ ಪವನ ವೈಧ್ಯ, ನಾರಾಯಣ ತೊರವಿ, ಸಂಜೀವ ಕುಲಕರ್ಣಿ, ಗುರುರಾಜ ದೇಶಪಾಂಡೆ, ರಾಜಣ್ಣ ಖ್ಯಾಡ, ಶ್ರೀಕಾಂತ ಸತ್ತಿಗೇರಿ, ಕುಸುಮಾ ಜೋಶಿ, ಶೈಲಾ ಹಾಗೂ ಇತರರು ಇದ್ದರು.

























