ಮೊಹರಂ ದೇವರುಗಳ ಸಮ್ಮುಖದಲ್ಲಿ ಸಂಭ್ರಮದಿಂದ ಅಗ್ನಿ ಹಾಯ್ದ ಭಕ್ತಾದಿಗಳು

ಯಾದಗಿರಿ:ಜು.6: ತಾಲ್ಲೂಕಿನ ತಳಕ ಗ್ರಾಮದ ಮಹೆಬೂಬ ಸುಭಾನಿ ಮಸೀದಿ ಆವರಣದಲ್ಲಿ ಮೊಹರಮ್ ಅಂಗವಾಗಿ ಲಾಲ್ ಸಾಹೇಬ್ ಕಾಸಿಂ ಸಾಹೇಬ್ ಇಮಾಮ್ ಸಾಬ್ ದೇವರುಗಳ ಅಗ್ನಿ ಕುಂಡವನ್ನು ಶುಕ್ರವಾರ ಬೆಳಗಿನ ಜಾವ ಹಾಯಲಾಯಿತು.

ನೆರೆಯ ಸುತ್ತಮುತ್ತಲ ಗ್ರಾಮಗಳಾದ ಹೆಡಗಿಮುದ್ರಾ, ಅಚ್ಚೊಲಾ, ಬನ್ನೆಟಿ, ಅರಕೇರಿ ಬಿ., ಠಾಣಗುಂದಿ ಸೇರಿದಂತೆ ಮಹಾನಗರಗಳಿಗೆ ಗುಳೆ ಹೋಗಿದ್ದ ಅಪಾರ ಭಕ್ತಾದಿಗಳು ಪಾಲ್ಗೊಂಡರು.

ನೆರೆದಿದ್ದ ಭಕ್ತರಿಗೆ ಈರಣ್ಣ ಮುತ್ಯಾ ಅಹ್ಮದ್ ಅಲಿ ಮುತ್ಯಾ ತಿಮ್ಮಪ್ಪ ಪೂಜಾರಿ ಇಮಾಮ್ ಪೂಜಾರಿ ಅವರುಗಳು ಊರಿನ ಸದ್ಭಕ್ತರಿಗೇ ಆಶೀರ್ವಾದ ನೀಡಿದರು.
ಇದೇ ಸಂದರ್ಭದಲ್ಲಿ ಊರಿನ ಹಿರಿಯರು ಯುವಕರು ಸೇರಿದಂತೆ ಎಲ್ಲ ಭಕ್ತಾದಿಗಳು ಕುಣಿದು ಕುಪ್ಪಳಿಸಿ ಸಂಭ್ರಮದಿಂದ ಆಚರಿಸಿದರು.