
ತಾಳಿಕೋಟೆ:ನ.೧೨: ವಿಜಯನಗರ ಸಾಮ್ರಾಜ್ಯ ಗತವೈಭವದಿಂದ ಮೆರೆಯುವ ಕಾಲಕ್ಕೆ ತಿಮ್ಮಪ್ಪವೆಂಬ ಹೆಸರನ್ನು ಹೊಂದಿದ ಭಕ್ತ ಕನಕದಾಸರು ರಾಜವೈಭವದಲ್ಲಿ ಶಸ್ತಾçಸ್ತçಗಳನ್ನು ಚಲಾಯಿಸುತ್ತಾ ಸಾಗಿದಾಗ ಗುರುಗಳಾದ ವಾದಿರಾಯರ ಸಂಪರ್ಕ ಹೊಂದಿದ ಮೇಲೆ ಅವರ ಆಜ್ಞೆ ಅನುಸಾರ ನೀನು ದೇವರ ದಾಸನಾಗು ನಿನ್ನ ಹೆಸರು ಕನಕದಾಸವೆಂಬುದಾಗಿದೆ ಕಾರಣ ಸಮಾಜದಲ್ಲಿಯ ಅಂಕುಡೊAಕನ್ನು ತಿದ್ದುತ್ತಾ ಸಾಗಬೇಕೆಂಬ ಗುರುಗಳ ಆಜ್ಞೆಅನುಸಾರವಾಗಿ ನಡೆದ ತಿಮ್ಮಪ್ಪನವರು ಭಕ್ತಕನಕದಾಸರಾಗಿ ಮುಂದುವರೆಯಲು ಕಾರಣವಾಯಿತೆಂದು ಬೆಂಗಳೂರಿನ ಸಂಘಪ್ರಚಾರಕರು ಹಾಗೂ ಪ್ರಸ್ತುತ ಸಾಮಾಜಿಕ ಸಾಮರಸ್ಯ ವೇದಿಕೆಯ ಕರ್ನಾಟಕದ ಉತ್ತರ ಪ್ರಾಂತ್ಯದ ಸಂಯೋಜಕರಾದ ಸು.ಕೃಷ್ಣಮೂರ್ತಿ ಅವರು ನುಡಿದರು.
ಮಂಗಳವಾರರAದು ಸ್ಥಳೀಯ ಸಾಮಾಜಿಕ ಸಾಮರಸ್ಯ ವೇದಿಕೆಯ ವತಿಯಿಂದ ಏರ್ಪಡಿಸಲಾದ ಭಕ್ತಕನಕದಾಸರ ಜಯಂತ್ಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕನಕದಾಸರ ಹಾಗೂ ಭಾರತ ಮಾತೆಯ ಭಾವಚಿತ್ಕೆ÷್ಕ ಪುಷ್ಪಹಾರ ಹಾಕಿ ಗೌರವಿಸಿ ಮಾತನಾಡುತ್ತಿದ್ದ ಅವರು ಗುರುಗಳ ಆಜ್ಞೆ ಪಾಲಿಸುತ್ತಾ ಸಾಗಿದ ಭಕ್ತಕನಕದಾಸರು ಈ ಹಿಂದೆ ಒಬ್ಬ ಯೋಧರಾಗಿದ್ದರೂ ದಾಸಪದ,ಸಾಹಿತ್ಯ,ದೇವರ ಆರಾಧನೆ,ಸಮಾಜದಲ್ಲಿನ ಅಂಕುಡೊAಕುಗಳನ್ನು ತಿದ್ದುತ್ತಾ ಸಾಗಿ ಹಿಂದೂ ಧರ್ಮದ ಸಂರಕ್ಷಣೆ ವಿಜಯನಗರ ಸಾಮ್ರಾಜ್ಯದಿಂದಲೇ ಪ್ರಾರಂಭವಾಗಿತ್ತೆAದರು. ಭಕ್ತಕನಕದಾಸರು ಅನೇಕ ತೀರ್ಥಕ್ಷೇತ್ರ ಸಂಚರಿಸುತ್ತಾ ಉಡುಪಿಗೆ ಬರುತ್ತಾರೆ ಅಲ್ಲಿ ಶ್ರೀಕೃಷ್ಣ ಪರಮಾತ್ಮನಿಗೆ ಭಕ್ತಿಭಾವದಿಂದ ನಡೆದುಕೊಳ್ಳುತ್ತಾ ಆ ದೇವನ ದರ್ಶನವನ್ನು ಕೂಡ ಪಡೆಯುತ್ತಾರೆಂದು ಹೇಳಿದ ಕೃಷ್ಣಮೂರ್ತಿ ಅವರು ಸಮಾಜ ಸುಧಾರಣೆಯಲ್ಲಿ ಮೇಲುಕೀಳು ಎಂಬುದು ಹೋಗಬೇಕು,ಪ್ರಾಣಿಬಲೆ ಕೊಡಬಾರದು,ಮಧ್ಯವ್ಯಸನ,ಜೂಜಾಟ,ಕ್ಲಸ್ಟರ ಪದ್ಧತಿ ಕುರಿತು ಕನಕದಾಸರು ವಿರೋಧಿಸುತ್ತಾ ಸಾಗುತ್ತಾರಲ್ಲದೆ ಅಸ್ಪೃಷತರಿಗೆ ಮೇಲಕ್ಕೆತ್ತುವ ಕೆಲಸ ಮಾಡುತ್ತಾ ಅವರ ಸ್ಥಾನಮಾನಕ್ಕೆ ತೆರಳಿ ಸಮಾಜ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸಿ ದೇವರು ಒಬ್ಬನೆ ಇದ್ದಾನೆಂದು ಅರ್ಥೈಸುತ್ತಾ ಕನಕದಾಸರು ರಾಜವೈಭವ, ಕ್ಷಾತ್ರ ತೇಜಸ್ಸು ವೈಭವ ಅವರಲ್ಲಿದ್ದುದ್ದೆಲ್ಲವನ್ನು ಬಿಟ್ಟು ಭಕ್ತರನ್ನು ಸನ್ಮಾರ್ಗಕ್ಕೆ ಒಯ್ಯುವ ಕಾರ್ಯಕ್ಕೆ ಮುಂದಾಗಿದ್ದರೆAದರು.
ಇದೇ ಸಮಯದಲ್ಲಿ ತಾಳಿಕೋಟೆ ತಾಲೂಕಿನ ಸಾಮಾಜಿಕ ಸಾಮರಸ್ಯ ವೇದಿಕೆಯ ನೂತನ ಪದಾಧಿಕಾರಿಗಳನ್ನಾಗಿ ಸಂಗಮೇಶ ಪಾಲ್ಕಿ, ವೇ.ಸಂತೋಷ ಜೋಷಿ, ಸುಭಾಸ ಬೊಮ್ಮನಹಳ್ಳಿ, ಶರಣು ಭಿಳೇಬಾವಿ ಅವರಹೆಸರನ್ನು ಬಹಿರಂಗ ಪಡಿಸಿದ ಸು.ಕೃಷ್ಣಮೂರ್ತಿ ಅವರು ಸತ್ಯ,ಧರ್ಮ,ಪ್ರೇಮ,ಶಾಂತಿಯ ವಿಷಯದಲ್ಲಿ ವೇದಿಕೇಯ ಕಾರ್ಯಚಟುವಟಿಕೆಗಳಲ್ಲಿ ಮುಂದುವರಿಯಬೇಕೆAದು ಸಲಹೆ ನೀಡಿದರು.
ಪ್ರಕಾಶ ಕಟ್ಟಿಮನಿ ಅವರು ಪ್ರಾಸ್ತಾವಿಕ ಮಾತನಾಡಿ ಸಾಮಾಜಿಕ ಸಾಮರಸ್ಯ ವೇದಿಕೆಯ ಹಾಗೂ ರಾಷ್ಟಿçÃಯ ಸ್ವಯಂಸೇವಕ ಸಂಘದ ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿದರು.
ವೇದಿಕೆಯ ಮೇಲೆ ಬಾಲಭರತಿ ವಿದ್ಯಾಸಂಸ್ಥೆಯ ಅಧ್ಯಕ್ಷರು ಹಾಗೂ ವಿಜಯಪುರ ವಿಭಾಗದ ಸಂಘಚಾಲಕರಾದ ಚಿದಂಬರ ಕರಮರಕರ, ಹಾಲುಮತ ಸಮಾಜದ ಹಿರಿಯರು ಹಾಗೂ ನಿವೃತ್ತ ಶಿಕ್ಷಕರಾದ ಎಸ್.ಟಿ.ಬೊಮ್ಮನಹಳ್ಳಿ ಅವರು ಉಪಸ್ಥಿತರಿದ್ದರು.
ಈ ಸಮಯದಲ್ಲಿ ಆರ್.ಎಸ್.ಎಸ್‌ನ ಸ್ವಯಂ ಸೇವಕರು ಹಾಗೂ ಹಿಂದೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಶಿಕ್ಷಕ ಅಮಲ್ಯಾಳ ಅವರು ಪ್ರಾರ್ಥಿಸಿದರು. ಶರಣು ಬಿಳೇಬಾವಿ ಸ್ವಾಗತಿಸಿದರು. ಸಂಗಮೇಶ ಪಾಲ್ಕಿ ನಿರೂಪಿಸಿ ವಂದಿಸಿದರು.






















