ಗೃಹಮಂತ್ರಿಗಳ ಬದಲಾವಣೆಗೆ ದೇವಿಂದ್ರ ದೇಸಾಯಿ ಕಲ್ಲೂರ ಆಗ್ರಹ

ಕಲಬುರಗಿ,ಜೂ.6: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಟ್ಟು ಹೋಗುತ್ತಿದೆ. ಆದರೆ ಸರ್ಕಾರ ಯಾವುದೇ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗದೇ ಇರುವುದು ಖಂಡನಿಯ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಘಟನೆಯಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಜನರ ರಕ್ಷಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ನೈತಿಕ ಹೊಣೆ ಹೊತ್ತು, ಗೃಹಮಂತ್ರಿ ಡಾ. ಜಿ. ಪರಮೇಶ್ವರ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿಯ ಓಬಿಸಿ ಮೋರ್ಚಾ ನಗರಾಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಅವರು ಒತ್ತಾಯಿಸಿದ್ದಾರೆ.
ಆರ್‍ಸಿಬಿ ಐಪಿಲ್ ಕಪ್ ಗೆದ್ದ ತಕ್ಷಣ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಎಲ್ಲೆಡೆ ಸಂಭ್ರಮಾಚರಣೆ ಮಾಡಲಾಯಿತು. ಇದು ಕನ್ನಡಿಗರಲ್ಲಿ ಆರ್‍ಸಿಬಿ ತಂಡಕ್ಕೆ ಇರುವ ಅಭಿಮಾನವನ್ನು ಕಾಣಿತು. ಚಿನ್ನಸ್ವಾಮಿ ಕ್ರೀಡಾಂಗಣದ ದುರ್ಘಟನೆ
ತಡೆಯಲು ಪೆÇಲೀಸರು ಚಿಂತನೆ ,ಮುಂದಾಲೋಚನೆ ಮಾಡಬೇಕಾಗಿತ್ತು. ಅಭಿಮಾನಿಗಳ ಹರ್ಷ ಕಂಡರೆ ಯಾವ ಹಂತಕ್ಕೆ ಪರಿಸ್ಥಿತಿಯನ್ನು ಹೋಗುತ್ತದೆ ಎನ್ನುವುದಕ್ಕೆ ಬೆಂಗಳೂರು ನಗರದಲ್ಲಿ ಚಾಕು ಇರಿತ, ಹೃದಯಘಾತದಂತ ಘಟನೆಗಳು ಮಂಗಳವಾರ ರಾತ್ರಿಯೇ ನಡೆದು ಹೋಗಿದ್ದು, ಇಲ್ಲಿ ಪೆÇಲೀಸರು ಜನರ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎನ್ನುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಕರ್ನಾಟಕ ಕ್ರಿಕೆಟ್ ಸಂಸ್ಥೆಯು ತರಾತುರಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ತಪ್ಪು ಆಗಿದೆ. ಅಲ್ಲದೇ ಅಭಿಮಾನಿಗಳನ್ನು ನಿಯಂತ್ರಿಸಲು ಸೂಕ್ತ ಪೆÇಲೀಸ ಬಂದೋಬಸ್ತ ವ್ಯವಸ್ಥೆ ಮಾಡದೇ ಇರುವುದು ಗೃಹಮಂತ್ರಿಗಳು ನೇರ ಹೋಣೆಯಾಗಿದ್ದಾರೆ. ಇನ್ನೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಸಚಿವರು ಶಾಸಕರು, ತಮ್ಮ ಕುಟುಂಬದ ಸದಸ್ಯರನ್ನು ಆರ್‍ಸಿಬಿ ತಂಡಕ್ಕೆ ಪರಿಚಯಿಸಿ ಸಂತೋಷ ಪಡುವುದರಲ್ಲಿಯೇ ಇದ್ದರು. ಆದರೆ ಸಾಮಾನ್ಯ ಜನರ ರಕ್ಷಣೆ ಮಾಡುವುದರಲ್ಲಿ ವಿಫಲವಾಗಿದ್ದಾರೆ ಎನ್ನವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಾಮನ್ಯ ಮಾಹಿತಿಯಂತೆ ಪೆÇಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ತಮ್ಮ ಕರ್ತವ್ಯ ಮರೆತು ಆರ್‍ಸಿಬಿ ತಂಡದೊಂದಿಗೆ ಫೆÇೀಟೋ ತೆಗೆಸಿಕೊಳ್ಳುವುದಕ್ಕೆ ಮತ್ತು ಆಟಗಾರರನ್ನು ಕಣ್ತುಂಬಿಸಿಕೊಳ್ಳುವುದಕ್ಕೆ ಹೆಣಗಾಡಿದ್ದಾರೆ ಎಂಬ ಮಾಹಿತಿಗಳು ಪೆÇಲೀಸ್ ಇಲಾಖೆಯಲ್ಲಿ ಹಾರಿದಾಡುತ್ತಿವೆ.
ಅಮಾಯರಕ 11 ಜನರ ಬಲಿಗೆ ಹೊಣೆಯಾರು?
ಸುಮಾರ 18 ವರ್ಷಗಳ ಕಾಲ ಐಪಿಎಲ್ ಕ್ರಿಕೆಟ್ ಕಪ್ ಗೆಲ್ಲಲಿಲ್ಲ.
ಪ್ರತಿಬಾರಿಯು ಅಭಿಮಾನಿಗಳಿಂದ ಈ ಸಲ ಕಪ್ ನಮ್ದೇ ಎನ್ನುವ
ಉದ್ಘಾರ ಕೇಳಿ ಬರುತ್ತಿತ್ತು. ಇದು ಅಭಿಮಾನಿಗಳಿಗೆ ಆಟಗಾರರನ್ನು ನೋಡುವ ತವಕ ಹೆಚ್ಚಿಸಿತು ಎನ್ನಬೇಕು. ಇದರಿಂದಾಗಿ ಅತೀ ಹೆಚ್ಚು ಯುವಕರು, ಯುವತಿಯರು ಚಿನ್ನಸ್ವಾಮಿ ಕ್ರಿಡಾಂಗಣಕ್ಕೆ ಧಾವಿಸಿದರು. ಗೆಲವಿನ ದಿನದಂತೆ ಆದ ಘಟನೆಗಳನ್ನು ಅರಿತು. ಗೃಹಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಪೆÇಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಎಚ್ಚತ್ತು ಕೊಳ್ಳದೇ ಇರುವುದು ಈ ಘಟನೆಗೆ ಕಾರಣವಾಗಿದೆ. ಕೂಡಲೇ ಸಿಎಂ. ಸಿದ್ದರಾಮಯ್ಯ ಗೃಹಮಂತ್ರಿಗಳ ಬದಲಾಣೆಮಾಡಬೇಕು. ಡಾ. ಜಿ. ಪರಮೇಶ್ವರ ಅವರೇ ನೈತಿಕ ಹೊಣೆ ಹೊತ್ತು. ರಾಜೀನಾಮೆ ನೀಡಬೇಕು ಎಂದು ಬಿಜೆಪಿಯ ಓಬಿಸಿ ಮೋರ್ಚಾದ ನಗರಾಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಒತ್ತಾಯಿಸಿದ್ದಾರೆ.