
ತಾಳಿಕೋಟೆ : ನ.೨೩: ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಹಾಗೂ ಕೆ ಎಸ್ ಡಿ ಎಲ್ ಅಧ್ಯಕ್ಷರಾದ ಅಪ್ಪಾಜಿ ನಾಡಗೌಡರ ಪ್ರಯತ್ನದಿಂದ ಸದ್ಯ ಕೆಎಸ್‌ಡಿಎಲ್ ನಿಗಮವು ಪ್ರತಿವರ್ಷ ೪೦೦ ಕೋಟಿಗೂ ಅಧಿಕ ಲಾಭಾಂಶದೊAದಿಗೆ ಮುನ್ನಡೆದಿದೆ ಈ ನಮ್ಮ ರಾಜ್ಯದ ಮೈಸೂರ್ ಸ್ಯಾಂಡಲ್ ಸೋಪ ಜೊತೆಗಿನ ವಿವಿಧ ಉತ್ಪನ್ನಗಳು ದೇಶದ ಪ್ರತಿ ಮೂಲೆ ಮೂಲೆಯಲ್ಲಿ ಗುರುತಿಸುವದರೊಂದಿಗೆ ಬಳಿಕೆಯಲ್ಲಿ ಬರಬೇಕೆಂಬ ಕನಸ್ಸಿಗೆ ಶಾಸಕ ನಾಡಗೌಡರ ಪುತ್ರಿ ಪಲ್ಲವಿ ನಾಡಗೌಡ ಅವರು ತಮ್ಮ ಫೌಂಡೇಶನ್ ದ ಮೂಲಕ ಸೋಪ್‌ನ್ನು ಖರೀದಿಸಿ ಪ್ರತಿ ಮನೆ ಮನೆಗೆ ಉಚಿತವಾಗಿ ವಿತರಿಸುವಂತಹ ಕಾರ್ಯಕ್ಕೆ ಮುಂದಾಗಿದ್ದಾರೆ ಅವರ ಸಮಾಜ ಮುಖಿ ಕಾರ್ಯ ಮೆಚ್ಚುವಂತಹದ್ದು ಎಂದು ಪುರಸಭಾ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಅವರು ಹೇಳಿದರು.
ಶನಿವಾರ ಪಟ್ಟಣದ ಭೂವಿ ವಡ್ಡರ ಓಣಿಯಲ್ಲಿ ದೇವಿಕಾ ಸುಬ್ಬರಾವ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಮೈಸೂರ್ ಸ್ಯಾಂಡಲ್ ಸೋಪ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು ದೇವಿಕಾ ಸುಬ್ಬರಾವ್ ಪೌಂಡೇಶನ್‌ದ ಮೂಲಕ ಶ್ರೀಮತಿ ಫಲ್ಲವಿ ನಾಡಗೌಡ ಅವರು ಹಲವಾರು ಸಮಾಜಮುಖಿ ಕಾರ್ಯಗಳೊಂದಿಗೆ ಬಡಬಗ್ಗರಿಗೆ ಅನುಕೂಲ ಕಲ್ಪಿಸುವಂತಹ ಕಾರ್ಯ ಮಾಡುತ್ತಾ ಬಂದಿದ್ದಾರೆ ಇದೀಗ ಲಕ್ಷಾಂತರ ಮೈಸೂರ್ ಸ್ಯಾಂಡಲ್ ಸೋಪನ್ನು ಖರೀದಿಸಿ ಕ್ಷೇತ್ರದ ಪ್ರತಿ ಮನೆಗೂ ಉಚಿತವಾಗಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ನಮ್ಮ ರಾಜ್ಯದ ಸಾಬೂನುಗಳ ಉಪಯೋಗವನ್ನೇ ಎಲ್ಲರೂ ಮಾಡಬೇಕು ಇದರಿಂದ ನಮ್ಮ ರಾಜ್ಯದಲ್ಲಿಯೇ ಹಣವನ್ನು ತೊಡಗಿಸಿಕೊಂಡAತಾಗಲಿದೆ ಮೈಸೂರ್ ಸ್ಯಾಂಡಲ್ ಸೋಪು ಉತ್ತಮವಾದ ಸೋಪಾಗಿದ್ದು ಪ್ರತಿ ಮನೆ ಮನೆಯಲ್ಲಿ ಬಳಕೆಯಲ್ಲಿ ಬರಬೇಕೆಂಬ ಉದ್ದೇಶ ಪೌಂಡೇಶನ್ ಅಧ್ಯಕ್ಷರಾದ ಫಲ್ಲವಿ ನಾಡಗೌಡರದ್ದಾಗಿದೆ ಇಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ ನಾಡಗೌಡರ ಕುಟುಂಬದ ಕಾರ್ಯ ಮೇಚ್ಚುವಂತಹದ್ದಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ನೀಲಮ್ಮ ಪಾಟೀಲ ಅವರು ಮಾತನಾಡಿ ಅಪ್ಪಾಜಿ ನಾಡಗೌಡರು ಕೆ ಎಸ್ ಡಿ ಎಲ್ ಅಧ್ಯಕ್ಷರಾಗುವ ಮೊದಲು ನಷ್ಟದಲ್ಲಿದ್ದ ಸರ್ಕಾರದ ಈ ಕೆಎಸ್‌ಡಿಎಲ್ ಉದ್ಯಮ ಇಂದು ಅವರ ಅಧ್ಯಕ್ಷತೆಯಲ್ಲಿ ೪೫೦ ಕೋಟಿ ಲಾಭ ವನ್ನು ಮಾಡಿದೆ. ಇದನ್ನು ಇನ್ನಷ್ಟು ಪ್ರಗತಿಯಡೆಗೆ ತೆಗೆದುಕೊಂಡೊಯಬೇಕೆನ್ನುವ ಉದ್ದೇಶ ದೇವಿಕಾ ಸುಬ್ಬರಾವ್ ಪೌಂಡೇಶನ್‌ದ ಉದ್ದೇಶವಾಗಿದೆ ಈ ಉದ್ಯವು ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ಎಂಬ ಉದ್ದೇಶದೊಂದಿಗೆ ಲಕ್ಷಾಂತರ ಮೈಸೂರ್ ಸ್ಯಾಂಡಲ್ ಸಾಬೂನಿಗಳನ್ನು ಖರೀದಿಸುವದರೊಂದಿಗೆ ಉಚಿತವಾಗಿ ವಿತರಿಸುವಂತಹ ಕಾರ್ಯಕ್ರಮವು ಉತ್ತಮವಾಗಿದೆ ಎಂದ ಅವರು ಪಲ್ಲವಿ ನಾಡಗೌಡರ ನೇತೃತ್ವದ ದೇವಿಕಾ ಸುಬ್ಬರಾವ್ ಫೌಂಡೇಶನ್ ವತಿಯಿಂದ ಮುದ್ದೇಬಿಹಾಳ ಮತಕ್ಷೇತ್ರ ವ್ಯಾಪ್ತಿಯ ಪ್ರತಿ ಮನೆಗೂ ಉಚಿತವಾಗಿ ಮೈಸೂರು ಸ್ಯಾಂಡಲ್ ಸಾಬೂನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಪಟ್ಟಣದ ಪ್ರತಿ ಮನೆಗೂ ತಲುಪಿ ಇದನ್ನು ವಿತರಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.
ಈ ಸಮಯದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಸಂಗನಗೌಡ ಅಸ್ಕಿ, ಸಿದ್ದನಗೌಡ ಪಾಟೀಲ (ನಾವದಗಿ), ಜುಬೇದಾಬೇಗಂ ಜಮಾದಾರ, ಗೌರಮ್ಮ ಕುಂಬಾರ, ಅಕ್ಕಮಹಾದೇವಿ ಕಟ್ಟಿಮನಿ, ಬಸವರಾಜ ಕುಂಬಾರ, ಸದಾಶಿವ ರೆಡ್ಡಿ (ಇಬ್ರಾಹಿಂಪುರ), ಅಪುö್ಪಗೌಡ ಮಾಡಗಿ, ಹುಸೇನ ಜಮಾದಾರ, ಮಹೆಬೂಬ ಕೆಂಭಾವಿ, ಪರಶುರಾಮ ತಂಗಡಗಿ, ಬಸವರಾಜ ಮಾಲಿಪಾಟೀಲ, ಗೋಪಾಲ ಕಟ್ಟಿಮನಿ, ಮೊದಲಾದವರು ಉಪಸ್ಥಿತರಿದ್ದರು.

























