ಆಹಾರ ಭದ್ರತೆಗಾಗಿ ತಾಲೂಕಿನಾದ್ಯಂತ ವಿಕಸಿತ ಕೃಷಿ ಸಂಕಲ್ಪ ಆಬಿಯಾನ : ಚಂದ್ರಕಾAತ ಪವಾರ

ಇಂಡಿ :ಜೂ.೪: ಆಧುನಿಕ ಕೃಷಿ ಪದ್ದತಿಗಳ ಮೂಲಕ ಸಮೃದ್ದ ರೈತರನ್ನು ಒಳಗೊಂಡ ಅಡಿಪಾಯವನ್ನು ನಿರ್ಮಿಸುವ ಸಂಕಲ್ಪದೊAದಿಗೆ ಕೇಂದ್ರ ಸರಕಾರ ತಾಲೂಕಿನಾದಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದೆ ಎಂದು ಕೃಷಿ ಉಪ ನಿರ್ದೇಶಕ ಚಂದ್ರಕಾAತ ಪವಾರ ಹೇಳಿದರು.
ತಾಲೂಕಿನ ಹಿಂಗಣಿ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಆವರಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ಇಂಡಿ ಮತ್ತು ಕೃಷಿ ಇಲಾಖೆಯಿಂದ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರ್ಥಿಕತೆಯ ಬೆನ್ನಲಬಾಗಿ ಉಳಿದಿರುವ ಕೃಷಿಯು ತಾಲೂಕಿನ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಜೀವನೋಪಾಯವನ್ನು ಒದಗಿಸುವುದಲ್ಲದೆ ಆಹಾರ ಭದ್ರತೆಗೂ ತಳಹದಿಯಾಗಿದೆ. ಭಾರತವನ್ನು ವಿಶ್ವ ಆಹಾರ ಬುಟ್ಟಿ ಯನ್ನಾಗಿಸುವ ದೃಷ್ಟಿಕೋನದೊಂದಿಗೆ ಕೈ ಗೊಂಡಿರುವ ಈ ಅಭಿಯಾನವು ಸುಸ್ಥಿರ ಕೃಷಿ ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಅಂತರ ರಾಷ್ಟಿçÃಯ ಆಹಾರ ಸಹಕಾರವನ್ನು ಬಲಪಡಿಸಲು ಪ್ರಯತ್ನಿಸುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ ತಾಲೂಕಿನ ಐದು ಲಕ್ಷ ಜನರಿಗೆ ಆಹಾರ ಭದ್ರತೆಯನ್ನು ಖಚಿತಪಡಿಸುವುದು ಕೃಷಿ ಇಲಾಖೆ ಉದ್ದೇಶವಾಗಿದೆ. ಜೊತೆಗೆ ಪೌಷ್ಟಿಕ ಆಹಾರದ ಲಭ್ಯತೆಯನ್ನು ಖಾತರಿಪಡಿಸುವುದು ರೈತರ ಆದಾಯವನ್ನು ಸುಧಾರಿಸುವ ಮತ್ತು ಭವಿಷ್ಯದ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವದು ಈ ಆಭಿಯಾನದಲ್ಲಿ ಸೇರಿದೆ. ಈ ಅಂದೋಲನ ಖಾರಿಫ್ ಮತ್ತು ರಾಬಿ ಬೆಳೆಗಳಿಗೆ ಬಿತ್ತನೆ ಆರಂಭಕ್ಕೆ ಮುಂಚೆ ಪ್ರತಿವರ್ಷ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಭಾರತೀಯ ತೋಟಗಾರಿಕೆ ಸಂಸ್ಥೆ ಬೆಂಗಳೂರಿನ ಮಂಜುನಾಥ ಎಲ್ ಮಾತನಾಡಿ ಈ ಅಭಿಯಾನ ಗುರಿಗಳು ಉತ್ಪಾದನೆಯನ್ನು ಹೆಚ್ಚಿಸುವದು ಉತ್ಪಾದನೆ ವೆಚ್ಚವನ್ನು ಕಡಿಮೆ ಮಾಡುವದು ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಖಚಿತಪಡಿಸುವದು ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ನಷ್ಟವನ್ನು ಸರಿದೂಗಿಸುವದು ಮೌಲ್ಯವರ್ಧನೆ ಮತ್ತು ಆಹಾರ ಸಂಸ್ಕರಣೆಯೊAದಿಗೆ ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸುವದು ಮತ್ತು ನೈಸರ್ಗಿಕ ಮತ್ತು ಸಾವಯುವ ಕೃಷಿಯನ್ನು ಪ್ರೋತ್ಸಾಹಿಸುವದು ಇದೆ ಎಂದರು.
ಡಾ. ಪ್ರಸಾದ, ಡಾ. ಪ್ರಕಾಶ, ಡಾ. ವೀಣಾ, ಡಾ. ಬಾಲಾಜಿ ಕೃಷಿ ಸಂಕಲ್ಪ ಅಭಿಯಾನ ಕುರಿತು ರೈತರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜಶೇಖರ, ನಜೀರಸಾಬ, ಅಂಬಣ್ಣ ಕೇಲಿ, ಜಗದೀಶ ಮಹಾದೇವ ಪೂಜಾರ, ಲೀಲಾವತಿ ಗಾಯಕವಾಡ, ಜ್ಯೋತಿ ಬೇನೂರ, ಶ್ರೀದೇವಿ ಕಟ್ಟಿಮನಿ ಮತ್ತಿತರಿದ್ದರು.