
ಸಂಜೆ ವಾಣಿ ವಾರ್ತೆ
ಜಮಖಂಡಿ:ನ.೧೨:ಮುಧೋಳದಲ್ಲಿ ಕಬ್ಬು ಬೆಳೆಗಾರರ ಹೋರಾಟ ಉಗ್ರ ಸ್ವರೂಪ ತಾಳಿದೆ. ಪ್ರತಿ ಟನ್ ಕಬ್ಬಿಗೆ ೩೫೦೦ ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬ ಆಗ್ರಹಕ್ಕೆ ಸರ್ಕಾರ ಮಣಿದು ೩೩೦೦ ರೂ. ಘೋಷಿಸಿದರೂ, ಮುಧೋಳ ರೈತರು ಪಟ್ಟು ಬಿಡದೇ ಪ್ರತಿಭಟನೆ ಮುಂದುವರಿಸಿದ್ದಾರೆ. ತಾಲೂಕು ಆಡಳಿತ ಭವನದೊಳಗೆ ನುಗ್ಗಿ ಕಛೇರಿಗಳಿಗೆ ಬೀಗ ಜಡಿದ ರೈತರು ಸರ್ಕಾರಿ ವ್ಯಕ್ತಪಡಿಸಿದ್ದಾರೆ. ಸಾವಿರಾರು ರೈತರು ಆಡಳಿತ ಭವನ ಎದುರು ಸೇರಿ ೩೫೦೦ ಬೇಕೇ ಬೇಕು ಎಂಬ ಘೋಷಣೆ ವ್ಯಾಪಕವಾಗಿ ಕೂಗಿದ್ದಾರೆ
ನಿರಂತರ ಹೋರಾಟದ ಫಲವಾಗಿ ಕಬ್ಬು ಬೆಳೆಗೆ ಸಿಎಂ ಬೆಲೆ ಘೋಷಣೆ ಮಾಡಿದ್ದಾರೆ. ರಾಜ್ಯಾದ್ಯಂತ ರೈತರು ಸಂಭ್ರಮಿಸಿದರೂ ಬಾಗಲಕೋಟೆಯ ರೈತರು ಮಾತ್ರ ಸಿಎಂ ಅದೇಶವನ್ನು ಒಪ್ಪುತ್ತಿಲ್ಲ. ರೈತರ ಮನವೊಲಿಸಲು ನಡೆದ ಸಂಧಾನ ಸಭೆಯೂ , ಹೋರಾಟ ತೀವ್ರಗೊಂಡಿದೆ. ಕಬ್ಬು ಬೆಳೆಗಾರರ ಹೋರಾಟದಿಂದ ಸರ್ಕಾರದ ಆದೇಶವನ್ನು ಕಾರ್ಖಾನೆ ಮಾಲೀಕರು ಒಪ್ಪಿದರೂ ರೈತರು ಮಾತ್ರ ಒಪ್ಪಲಿಲ್ಲ.
ರೈತರ ಹೋರಾಟದ ಕಿಚ್ಚು ಹೆಚ್ಚಾದಾಗ ಕೂಡಲೇ ಮುಧೋಳ ಸಿಎಂ ಘೋಷಿಸಿದ ಬೆಲೆ ಒಪ್ಪಿಕೊಳ್ಳಿ ಎಂದು ರೈತರ ಮನವೊಲಿಸಲು ಪ್ರಯತ್ನಿಸಿದರು. ಆದರೆ ರೈತರು, ಟನ್ ಕಬ್ಬಿಗೆ ೩,೫೦೦ ರೂಪಾಯಿ ಬೇಕೆ ಬೇಕು ಹಾಗೂ ಹೆಚ್ಚುವರಿ ೫೦೦ ರೂ. ನೀಡಬೇಕೆಂದು ಪಟ್ಟು ಹಿಡಿದಿದ್ದರಿಂದ , ರಸ್ತೆಯಲ್ಲಿಯೇ ಧರಣಿ ಮಾಡಿದ್ದಾರೆ. ಅದರೊದಿಗೆ ಮುಧೋಳದಲ್ಲಿ ಹೆದ್ದಾರಿ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
























