ದೇಶಕಂಡ ಅಪರೂಪ ಸಂತ

ಸೈದಾಪುರ:ಜ.೧೪:ಅಪಾರ ಜ್ಞಾನ ಹಾಗೂ ವಾಕ್ ಚಾತುರ್ಯದಿಂದ ಭಾರತ ಮಾತ್ರವಲ್ಲದೆ ವಿಶ್ವದ ಗಮನ ಸೆಳೆದಿದ್ದ ಅಪರೂಪದ ಸಂತ ಸ್ವಾಮಿ ವಿವೇಕಾನಂದರು ಎಂದು ದೈಹಿಕ ಶಿಕ್ಷಕ ಮಾಳಪ್ಪ ಅವರು ತಿಳಿಸಿದರು.
ಸಮೀಪದ ಬದ್ದೇಪಲ್ಲಿ ಗ್ರಾಮದ ನೋಬಲ್ ಪಬ್ಲಿಕ್‌ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವದ ನಿಮಿತ್ತ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಇಂದಿನ ಮಕ್ಕಳೇ ಭವಿಷ್ಯತ್ತಿನ ರಾಷ್ಟ್ರದ ನಿರ್ಮಾತೃಗಳು ಹೀಗಾಗಿ ಸಂತ ಮಹಾತ್ಮರ ಜೀವನಾದರ್ಶಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಅವರ ವಿಚಾರಧಾರೆಗಳಿಂದ ಪ್ರಭಾವಿತರಾದ ಪ್ರತಿಯೊಬ್ಬರು ದೇಶ ಮತ್ತು ಸಮಾಜದ ಪ್ರಗತಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಸ್ವಾಮಿಜೀ ಅವರ ವೇಷಭೂಷಣದಲ್ಲಿ ಕುಮಾರಿ ಧೃವಿತಾ ಸುಬ್ರಮಣಿ ಅವರು ವಿಶೇಷ ಗಮನ ಸೆಳೆದರು. ಈ ವೇಳೆ ಶಿಕ್ಷಕರಾದ ಕವಿತಾ, ಅಬಿನ್ ಥಾಮಸ್, ಸಾವಿತ್ರಿ, ಮಮತಾ, ನೇತ್ರಾ, ಸುಪ್ರಿಯಾ, ಸುರೇಖಾ, ಜಯಶ್ರೀ, ರಂಜಿತಾ, ಸೇರಿದಂತೆ ಮುಂತಾದವರಿದ್ದರು.