
ಶ್ರೀನಿವಾಸಪುರ, ಅ. ೭: ಸಾರ್ವಜನಿಕರ ಹಿತಾಸಕ್ತಿ ಮತ್ತು ಸರ್ಕಾರಿ ಆಸ್ತಿಗಳ ರಕ್ಷಣೆಗೆ ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ದಿಢೀರ್ ಕಾರ್ಯಕ್ರಮ ನಡೆಸಿದ ಮೂಲಕ ಜನಪರ ಆಡಳಿತದ ನೈಜ ಕಾಳಜಿಯನ್ನು ಪ್ರದರ್ಶಿಸಿದ್ದಾರೆ.
ಅವರು ಕಚೇರಿಯಲ್ಲೇ ಕುಳಿತು ಕಡತ ವಿಲೇವಾರಿ ಮಾಡದೆ ಶ್ರೀನಿವಾಸಪುರ ತಾಲ್ಲೂಕು ಕಸಬಾ ಹೋಬಳಿಯ ಬಂಗವಾದಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ದೂರಿನ ಮೇರೆಗೆ ಸ್ಥಳ ಪರಿಶೀಲನೆ ಮಾಡಿದರು.
ಸರ್ಕಾರಿ ಗೋಮಾಳ, ಬಂಡಿ ದಾರಿ ಹಾಗೂ ಕಾಲು ದಾರಿಗಳನ್ನು ಮುಚ್ಚಿ ತೊಂದರೆ ನೀಡುತ್ತಿದ್ದವರ ವಿರುದ್ಧ ಅವರನ್ನು ಅಸಮಾಧಾನಗೊಂಡು,ನಿಮ್ಮ ಪಾಳೇಗಾರಿಕೆ ಬಿಡಬೇಕು, ಈ ರೀತಿ ದಬ್ಬಾಳಿಕೆ ಮಾಡ್ತೀರಿ. ನೀವು ಈ ರೀತಿ ನಡ್ಕೊಂಡ್ರಲ್ಲಾ, ಅದಕ್ಕೆ ನೀತಿ-ರೀತಿ ಇದೆಯಾ? ಎಂದು ಕಟುವಾಗಿ ತರಾಟೆಗೆ ತೆಗೆದುಕೊಂಡರು.
ಅಲ್ಲದೇ,ನಾವ್ಯಾರೂ ೨೦೦ ವರ್ಷ, ೩೦೦ ವರ್ಷ ಬದುಕಲ್ಲ. ಒಂದು ಸಂಸ್ಕೃತಿ, ತಾಳ್ಮೆ, ಸಹನೆಯನ್ನು ಎಲ್ಲರೂ ಬಿಟ್ಟುಹೋಗಿದ್ದಾರೆ. ನಾನೇನೋ ಇಲ್ಲಿ ದಾರಿ ಬಂದ್ ಮಾಡ್ಬಿಟ್ಟಿದ್ದೀನಿ ಎನ್ನುವ ಅಹಂಕಾರ ಬೇಡ, ಡಾಕ್ಯುಮೆಂಟ್‌ಗಳು ಬಹಳ ಇಂಪಾಟೆಂಟ್ ಎಂದು ಬುದ್ಧಿವಾದ ಹೇಳಿದರು. ಜೊತೆಗೆ, ಸರ್ಕಾರಿ ಜಮೀನಿನಲ್ಲಿ ಒಂದು ಇಂಚು ಕೂಡ ಒತ್ತುವರಿಯಾಗಿ ಇರಬಾರದು ಎಂದು ಸರ್ಕಾರಿ ಆಸ್ತಿ ಉಳಿಸಲು ಬದ್ಧತೆಯನ್ನು ದೃಢಪಡಿಸಿದರು.






















