ಅಭಿವೃದ್ಧಿ ಶೂನ್ಯ ಗ್ರಾಮಗಳ ಕಡಗಣನೆ

ದೇವನಹಳ್ಳಿ ಬೆಂ ಗ್ರಾ ಮೇ ೩೧- ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದ ಗ್ಯಾರಂಟಿಗಳ ಅಬ್ಬರವೇ ಹೆಚ್ಚಾಗಿದೆ ವಿನಃ ಗ್ರಾಮಗಳ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಬೀದಿದೀಪ, ಸರ್ಕಾರಿ ಕಟ್ಟಡಗಳ ಅಭಿವೃದ್ಧಿ ಮರೀಚಿಕೆಯಾಗಿ ಅಭಿವೃದ್ಧಿ ಶೂನ್ಯ. ಇದರ ಪರಿಣಾಮವನ್ನು ಅರಿತ ಜನರು ಇಂದು ಬದಲಾವಣೆ ಬಯಸಿ ಬಿಜೆಪಿ ಪಕ್ಷದೆಡೆಗೆ ಒಲವು ತೋರಿಸುತ್ತಿದ್ದಾರೆ. ಗ್ರಾಮಗಳ ಸಂಪೂರ್ಣ ಅಭಿವೃದ್ಧಿ ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಆದ್ದರಿಂದ ಮುಂದಿನ ಚುನಾವಣೆಗಳಲ್ಲಿ ಗೆಲವು ಸಾಧಿಸುವುದರ ಮೂಲಕ ಅವರ ನಂಬಿಕೆಯನ್ನು ಧೃಡಸಂಕಲ್ಪದೊಂದಿಗೆ ನೆರವೇರಿಸೋಣ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎನ್.ಎಲ್.ಅಂಬರೀಶ್ ಗೌಡ ಹೇಳಿದರು.


ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಮಂಗಲ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿಯ ತಾಲೂಕು ಮಂಡಲದ ಅಧ್ಯಕ್ಷರಾದ ಎನ್ .ಎಲ್ ಅಂಬರೀಶ್ ಗೌಡ ,ಮುಖಂಡರಾದ ಬಿಕೆ. ನಾರಾಯಣಸ್ವಾಮಿ ಮತ್ತು ಗೋಪಿ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ೫೦ ಕ್ಕೂ ಹೆಚ್ಚು ಜನರು ಸೇರ್ಪಡೆಯಾದ ಕಾರ್ಯಕ್ರಮ ಅದ್ದೂರಿಯಾಗಿ ನೆಡೆಯಿತು.


ಭಾರತ ದೇಶದ ಮೇಲಿನ ದಾಳಿಯನ್ನು ಅಚ್ಚುಕಟ್ಟಾಗಿ ಭೇದಿಸಿ ದೇಶವನ್ನು ರಕ್ಷಣೆ ಮಾಡುವಲ್ಲಿ ಉತ್ತಮ ನಾಯಕತ್ವದ ಆಡಳಿತ ನೀಡುತ್ತಿರುವ ಪಕ್ಷವೆಂದರೆ ಬಿಜೆಪಿ. ಹಾಗಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಪ್ರತಿಯೊಬ್ಬರು ದೇಶಪ್ರೇಮ, ರಕ್ಷಣೆ ಮತ್ತು ಗೌರವವನ್ನು ಕಾಪಾಡುವತ್ತ ನಮ್ಮ ನಡೆ ಇರಬೇಕು, ಎಲ್ಲರಿಗೂ ಸರಿಸಮಾನವಾದ ಅವಕಾಶವಿದೆ ಎಂಬುದನ್ನು ಮರೆಯದೇ ಪಕ್ಷ ವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದರು.


ಮುಖಂಡರಾದ ಬಿಕೆ .ನಾರಾಯಣ ಸ್ವಾಮಿ ಮಾತನಾಡಿ ಪಕ್ಷಕ್ಕೆ ಸೇರ್ಪಡೆ ಯಾದ ಪ್ರತಿಯೊಬ್ಬರಿಗೂ ಪಕ್ಷದ ನಿಷ್ಠೆ, ಶಿಸ್ತು, ಸಿದ್ಧಾಂತ, ಸಂಯಮ ಹೊಂದಿರಬೇಕು. ಮುಂದಿನ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯ ಕಣವನ್ನು ಎದುರಿಸಲು ಎಲ್ಲಾ ಗ್ರಾಮಗಳಲ್ಲಿ ಬೂತ್ ಮಟ್ಟದಲ್ಲಿ ಕಮಿಟಿ ರಚನೆಯಾಗಬೇಕು ಮತ್ತು ಪಕ್ಷದ ವರಿಷ್ಠರ ಆದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಿ ಭಿನ್ನಾಭಿಪ್ರಾಯ, ಗೊಂದಲಗಳಿದ್ದರೆ ಪಕ್ಷದ ಮಟ್ಟದಲ್ಲಿ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.ನಂಜೇಗೌಡ, ತಮ್ಮೇಗೌಡ, ಇಂಡ್ರಸನ ಹಳ್ಳಿ ಗೋಪಿ, ಶ್ಯಾನಪ್ಪನಹಳ್ಳಿ ರವಿ, ಅನಿಲ್, ಮುನಿರಾಜ್, ಕಮಲೇಶ್, ನಾಗಮಣಿ, ನಾಗಮಂಗಲ ಗ್ರಾಮದ ಹಿರಿಯರು ಯುವಕರು ಉಪಸ್ಥಿತರಿದ್ದರು.