
ಬೀದರ: ಮೇ.೨೧:ಕೆಲಸಕ್ಕಿಂತ ಆರೋಗ್ಯವೇ ಮುಖ್ಯ ದಂತ ಆರೋಗ್ಯದ ಪ್ರಮುಖ ಅಂಗವಾಗಿದೆ ಎಂದು ಮರಖಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ಜಾಬಾ ಅವರು ತಿಳಿಸಿದರು
ಅವರು ಮರಖಲ್ ಗ್ರಾಮ ಪಂಚಾಯತ ಅರಿವು ಸೇವಾ ಸಂಸ್ಥೆ ಹಾಗೂ ಎಸ್ ಬಿ ಪಾಟೀಲ್ ದಂತ ಮಹಾವಿದ್ಯಾಲಯದ ಸಂಯುಕ್ತಾ ಆಶ್ರಯದಲ್ಲಿ ನಡೆದ ಉಚಿತ ದಂತ ತಪಾಸಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು,
ಬೀದರ್ ತಾಲೂಕ ಪಂಚಾಯತ್ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಸುದೇಶ ಅವರು ಮಾತನಾಡಿ ಇಂದಿನ ದಿನಗಳಲ್ಲಿ ನಾವು ಆರೋಗ್ಯಕ್ಕಿಂತ ಕೆಲಸದ ಕಡೆ ಹೆಚ್ಚಿನ ಗಮನ ಕೊಡಲಾಗುತ್ತಿದೆ ಪ್ರತಿಯೊಬ್ಬರು ಮೇಲಿಂದ ಮೇಲೆ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕೆಂದ ಅವರು ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಗುರಿ ಬಗ್ಗೆ ವಿವರಿಸಿದರು
ಎಸ್ ಬಿ ಪಾಟೀಲ್ ದಂತ ಮಹಾ ವಿದ್ಯಾಲಯದ ಪ್ರಾಧ್ಯಾಪಕ ರಾಧ ಡಾ ಸಿದ್ದನಗೌಡ ಅವರು ಮಾತನಾಡಿ ಉಚಿತ ಶಿಬಿರದಲ್ಲಿ ತಪಾಸಣೆ ಮಾಡಲಾಗುವುದು ಹಲ್ಲಿನ ಹೆಚ್ಚಿನ ಚಿಕಿತ್ಸೆಗಾಗಿ ನಮ್ಮಲ್ಲಿ ಬರಬೇಕು ಹಲ್ಲು ಸದಾ ಜೋಪಾನ ವಾಗಿ ಇಟ್ಟುಕೊಳ್ಳಬೇಕು ಎಂದ ಅವರು ಹಲ್ಲು ಯಾವ ರೀತಿ ಉಜ್ಜಬೇಕೆಂದು ಸಲಹೆ ನೀಡಿದರು,
ಸೇವಾ ಅರಿವು ಸೇವಾ ಸಂಸ್ಥೆ ಅಧ್ಯಕ್ಷ ಪ್ರಶಾಂತ್ ವಿಶ್ವಕರ್ಮ ಅವರು ಸದಾ ದಂತ ಸ್ವಚ್ಛತೆ ಇಟ್ಟುಕೊಂಡರೆ ಯಾವುದೇ ರೋಗಗಳು ಬರುವುದಿಲ್ಲಾ, ಅದೇ ರೀತಿ ದಿನ ನಿತ್ಯೆ ದಂತ ಕಡೆ ಗಮನಕೊಡಬೇಕೆಂದು ಅವರು ತಿಳಿಸಿದ್ದರು.
ಮರಖಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಈಶ್ವರಮ್ಮಾ ಬಸವರಾಜ್ ಓಂಕಾರೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಮರಖಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೈಜಿನಾಥ್ ಶಂಕರರಾವ್ ಕಾಂಬಳೆ ಬೀದರ್ ಕೋಟೆ ವಾರಪತ್ರಿಕೆ ಸಂಪಾದಕರಾದ ಅನಿಲ್ ಕುಮಾರ್‌ಕಮಠಾಣೆ,ವರದಿಗಾರರಾದ ಸೋಮನಾಥ್, ಬಿರಾದಾರ್ ಉದ್ಯೋಗ ಖಾತ್ರಿ ಯೋಜನೆಯ ತಾಂತ್ರಿಕ ಸಹಾಯಕರಾದ ಸುದರ್ಶನ್ ಮರಖಲ್ ಗ್ರಾಮ ಪಂಚಾಯತ್ ಸದಸ್ಯರು ಸಿಬ್ಬಂದಿಗಳು ಹಾಗೂ ಎಸ್ ಬಿ ಪಾಟೀಲ್ ದಂತ ಮಹಾವಿದ್ಯಾಲಯದ ವಿದ್ಯಾರ್ಥಿನೀಯರು/ವಿದ್ಯಾರ್ಥಿಗಳು ಉಪಸ್ಥಿತರಿದ್ದರು