ಗುವಿವಿ ಜಾಗಕ್ಕೆ ವಿವಿಧ ಇಲಾಖೆ, ಸಂಘ-ಸAಸ್ಥೆಗಳ ಬೇಡಿಕೆ: ಎಐಡಿಎಸ್‌ಓ ಖಂಡನೆ

ಕಲಬುರಗಿ,ಫೆ.೨೫-ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ “ಜ್ಞಾನಗಂಗೆ” ಗುಲ್ಬರ್ಗಾ ವಿಶ್ವವಿದ್ಯಾಲಯವು, ಇಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ೮೫೫ ಎಕ್ರೆ ಜಾಗದಲ್ಲಿ ಪ್ರಾರಂಭಗೊAಡು ಈ ಭಾಗದ ಪ್ರಮುಖ ಉನ್ನತ ಶಿಕ್ಷಣದ ಕೇಂದ್ರವಾಗಿತ್ತು. ಈ ವಿಶ್ವವಿದ್ಯಾಲಯವು ಕಳೆದ ಕೆಲವು ವರ್ಷಗಳಿಂದ ಖಾಯಂ ಪ್ರಾಧ್ಯಾಪಕರು, ಶೈಕ್ಷಣಿಕ ವಾತಾವರಣದ ಕೊರತೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ನರಳುತ್ತಿದೆ. ಈ ವಿಶ್ವವಿದ್ಯಾಲಯವನ್ನು ಉನ್ನತೀಕರಿಸಿ, ಶೈಕ್ಷಣಿಕ ವಾತಾವರಣ ಕಾಪಾಡುವಲ್ಲಿ ವಿಶ್ವವಿದ್ಯಾಲಯವು ಕ್ರಮಗಳನ್ನು ಕೆಗೊಳ್ಳಬೇಕು. ಆದರೆ ವಿಪರ್ಯಾಸವೆಂದರೆ ಹಲವಾರು ವರ್ಷಗಳಿಂದ ವಿವಿಯ ಆಡಳಿತ ವರ್ಗ ತನ್ನ ಜಾಗವನ್ನು ವಿವಿಧ ಸಂಘ ಸಂಸ್ಥೆಗಳಿಗೆ ಮಾರಾಟ ಮಾಡುತ್ತಲೇ ಬರುತ್ತಿದೆ. ಪತ್ರಿಕೆಗಳಲ್ಲಿ ವರದಿಯಾದಂತೆ ನೂರಾರು ಎಕರೆ ಜಾಗವನ್ನು ವಿವಿಧ ಇಲಾಖೆಗಳು ಹಾಗೂ ಸಂಘ-ಸAಸ್ಥೆಗಳು ತಮಗೆ ಕೊಡಬೇಕೆಂಬ ಪ್ರಸ್ತಾವನೆಯನ್ನು ಸಲ್ಲಿಸಿವೆ. ಈ ರೀತಿ ಈ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಮೀಸಲಿರುವಂತ ವಿವಿಯ ಜಾಗವನ್ನು ಬೇರೆ ಇಲಾಖೆಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಮಾರಾಟ ಮಾಡುವುದನ್ನು ಅಥವಾ ದಾನ ನೀಡುವುದನ್ನು ಎಐಡಿಎಸ್‌ಓ ಉಗ್ರವಾಗಿ ಖಂಡಿಸುತ್ತದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ತಿಳಿಸಿದ್ದಾರೆ.
ಈ ಕೂಡಲೇ ಖಾಲಿ ಇರುವ ಬೋಧಕ ಬೋಧಕೇತರ ಸಿಬ್ಬಂದಿಗಳನ್ನು ಭರ್ತಿ ಮಾಡಬೇಕು, ವಿದ್ಯಾರ್ಥಿಗಳ ಅಂಕಪಟ್ಟಿ ನಿಡಿ ಶೈಕ್ಷಣಿಕ ಗೊಂದಲಗಳನ್ನು ಬಗೇಹರಿಸಬೇಕು, ಶೈಕ್ಷಣಿಕ ವಾತಾವರಣ ಕಾಪಾಡುವ ಮೂಲಕ, ಈ ಭಾಗದ ವಿದ್ಯಾರ್ಥಿಗಳ ಆಧಾರವಾಗಿರುವ ವಿವಿಯನ್ನು ಸಂರಕ್ಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.