ಎಸ್ಟಿ ಪ್ರಮಾಣಪತ್ರಕ್ಕೆ ಆಗ್ರಹಿಸಿ ೨೯ಕ್ಕೆ ತಳವಾರ ಸಮುದಾಯ ಕಲಬುರಗಿ ಚಲೋ

ಆಳಂದ: ಡಿ.೯:ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್ಟಿ) ವರ್ಗಕ್ಕೆ ಸೇರ್ಪಡೆಗೊಳ್ಳಿಸಿ ಪ್ರಮಾಣಪತ್ರಗಳನ್ನು ತ್ವರಿತವಾಗಿ ವಿತರಿಸಬೇಕೆಂದು ಆಗ್ರಹಿಸಿ ಡಿ. ೨೯ರಂದು ಕಲಬುರಗಿಯಲ್ಲಿ ನಡೆಯುವ ಬೃಹತ್ ಪ್ರತಿಭಟನೆ ನಡೆಸಲು ಕೂಲಿ ಕಬ್ಬಲಿಗ ಜಂಟಿ ಹೋರಾಟ ಸಮಿತಿಯಿಂದ ಸಮುದಾಯ ಬಾಂಧವರನ್ನು ಕಲಬುರಗಿ ಚಲೋ ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಶರಣ ಚೌಡಯ್ಯ ಭವನದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಕೂಲಿ ಕಬ್ಬಲಿಗ ಜಂಟಿ ಹೋರಾಟ ಸಮಿತಿ ಆಯೋಜಿತ ಪೂರ್ವಭಾವಿ ಸಭೆಯಲ್ಲಿ ಪಕ್ಷಾತೀತ ಪ್ರತಿಭಟನೆಗೆ ಯುವಕ-ಮಹಿಳೆಯರಿಂದ ಬೃಹತ್ ಭಾಗವಹಿಸುವಂತೆ ಜಿಲ್ಲಾ ಹಾಗೂ ತಾಲೂಕು ಮುಖಂಡರು ಒಕ್ಕೂರಲಿನಿಂದ ಸಮುದಾಯ ಬಾಂಧವರಿಗೆ ಕರೆ ನೀಡಿದರು.
ಸಭೆಯಲ್ಲಿ ಅಫಜಲಪೂರದ ಹಾಗೂ ಜಿಲ್ಲಾ ಯುವ ಮುಖಂಡ ಶಿವಕುಮಾರ ನಾಟೀಕಾರ, ಕೋಲಿ ಸಮಾಜ ತಾಲೂಕು ಅಧ್ಯಕ್ಷ ಶಿವಲಿಂಗಪ್ಪ ಜಮಾದಾರ, ಭಗವಂತರಾಯ ಬೊನ್ನೂರ, ಜಿಪಂ ಮಾಜಿ ಸದಸ್ಯೆ ಶೋಭಾ ಬಾಣಿ, ಶಿವಲಿಂಗಪ್ಪ ಜಮಾದಾರ, ಶರಣಪ್ಪ ತಳವಾರ, ಸುರೇಶ ಉಡಗಿ, ಸಿದ್ದು ಬಾನರ್, ದತ್ತು ನಾಯಕೊಡಿ, ನಾಮದೇವ ಶಕಾಪುರೆ, ರವೀಂದ್ರ ಜಮಾದಾರ, ತಾಪಂ ಮಾಜಿ ಸದಸ್ಯ ಅಶೋಕ ಜಮಾದಾರ ಕೋತನಹಿಪ್ಪರಗಾ, ಸೀತಾರಾಮ ಜಮಾದಾರ,ಕಲ್ಲಾಪ್ಪ ಭೂಸನೂರ, ಅಂಬರಾಯ ಚಿತಲಿ, ಕಲ್ಯಾಣಿ ಭೂಸನೂರ, ಅಮೂಲ ಖಜೂರಿ, ಅನೀಲ ತಡಕಲ್, ಆಸೀಫ್ ಜಮಾದಾರ ಸೇರಿದಂತೆ ವಿವಿಧ ಗ್ರಾಮಗಳಿಂದ ಸಮುದಾಯ ಮುಖಂಡರು ಉಪಸ್ಥಿತರಿದ್ದು ಕಲಬುರಗಿ ಚಲೋ ಸಿದ್ಧತೆಗೆ ಸೂಚನೆ ನೀಡಿದರು.