
ಚಿತ್ತಾಪುರ;ಫೆ.೨೮: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲರೋಜ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾದ ಸುಳ್ಳು ಪೋಕ್ಸೋ ಪ್ರಕರಣ ಹಿಂದಕ್ಕೆ ಪಡೆದು ರದ್ದುಪಡಿಸಬೇಕು. ಸುಳ್ಳು ಪ್ರಕರಣ ದಾಖಲಿಸಿದ ಮತ್ತು ಅದಕ್ಕೆ ಪ್ರೋತ್ಸಾಹಿಸಿರುವ ಅಧಿಕಾರಿಗಳ, ಬಾಲಕಿಯ ಮತ್ತು ಬಾಲಕಿಯ ಕುಟುಂಬದ ಮಾನ ಹರಾಜು ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೇಗಲೇರಿ ಅವರ ನೇತೃತ್ವದಲ್ಲಿ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ನಂತರ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲರೋಜ ಗ್ರಾಮದಲ್ಲಿನ ಮಲ್ಲಿಕಾರ್ಜುನ ಮುತ್ಯಾ ಅವರು ಭಕ್ತರ ಪಾಲಿನ ಆರಾಧ್ಯರಾಗಿದ್ದಾರೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಅವರ ಮಠಕ್ಕೆ ಹೋಗಿ ದರ್ಶನ ಪಡೆದು ತಮ್ಮ ಕಷ್ಟ, ನೋವು, ದುಃಖ ತೋಡಿಕೊಂಡು ಪರಿಹಾರ ಕಂಡುಕೊಳ್ಳುತ್ತಾರೆ. ಮಲ್ಲಿಕಾರ್ಜುನ ಮುತ್ಯಾ ಅವರ ಜನಪ್ರಿಯತೆ ಹೆಚ್ಚಾಗಿದೆ. ಪರಿಸ್ಥಿತಿ ಹೀಗಿರುವಾಗ ಮಠಕ್ಕೆ ಬಂದಿದ್ದ ಬಾಲಕಿಯೊಬ್ಬಳನ್ನು ಮಲ್ಲಿಕಾರ್ಜುನ ಮುತ್ಯಾ ಅವರು ಒಬ್ಬ ತಂದೆ ತನ್ನ ಮಕ್ಕಳಿಗೆ ತೋರುವ ಮಕ್ಕಳ ಮೇಲಿನ ಸಹಜ ಪ್ರೀತಿ ತೋರಿಸಿದ್ದಾರೆ ಎಂದರು. ಬಾಲಕಿಯ ತಾಯಿ, ತಂದೆ, ಚಿಕ್ಕಪ್ಪ ಆ ಸಂದರ್ಭದಲ್ಲಿ ಇದ್ದು ತಮ್ಮ ಬಾಲಿಕಿಗೆ ಮುತ್ಯಾ ಅವರು ತೋರಿದ ಪ್ರೀತಿ ಕಂಡು ಸಂಭ್ರಮಿಸಿ ಸಂತೋಷಪಟ್ಟಿದ್ದಾರೆ. ವಿಡಿಯೋ ಸಹ ಮಾಡಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡಿದ್ದಾರೆ. ವಿಡಿಯೋ ನೋಡಿದ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ವಿಡಿಯೋದ ಸತ್ಯಾಸತ್ಯತೆಯನ್ನು ಅರಿತುಕೊಳ್ಳದೆ, ಪರಿಶೀಲನೆಗೆ ಸೂಚಿಸದೆ ಶ್ರೀಗಳ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿರುವುದು ಕಾನೂನು ಬಾಹಿರ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹರಡಿದ ವಿಡಿಯೋ ಮತ್ತು ವದಂತಿ ಆಧರಿಸಿ ಮತ್ತು ಸುಳ್ಳು ವರದಿ ನಂಬಿಕೊAಡು ಯಾದಗಿರಿ ಜಿಲ್ಲಾಡಳಿತ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ನಿಲುವು ತಾಳಿದ್ದು ಅಧಿಕಾರ ದುರುಪಯೋಗ ಮತ್ತು ಬಾಲಕಿಯ, ಬಾಲಕಿಯ ಕುಟುಂಬದ ಮಾನ, ಮರ್ಯಾದೆ, ಘನತೆ, ಗೌರವಕ್ಕೆ ಧಕ್ಕೆ ತಂದು ಸಾರ್ವಜನಿಕವಾಗಿ ಕಳಂಕ ಅಂಟಿಸಿದAತ್ತಾಗಿದಲ್ಲದೆ ಮಾನಹಾನಿ ಮಾಡಿದೆ ಹೀಗಾಗಿ ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಪೋಕ್ಸೋ ಕಾಯ್ದೆಯನ್ನು ಆಡಳಿತವು ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿಕೊಂಡು, ಅರ್ಥೈಸಿಕೊಂಡು, ಪೋಕ್ಸೋ ಕಾಯ್ದೆ ನಿಯಮ ಉಲ್ಲಂಘಸಿ ಮುತ್ಯಾ ಅವರ ಹೆಸರಿಗೆ ಕಳಂಕ ತರುವ ಅಕ್ಷಮ್ಯ ಅಪರಾಧವೆಸಗಿದೆ. ಅದನ್ನು ಸಮಾಜವು ಬಲವಾಗಿ ವಿರೋಧಿಸುತ್ತದೆ ಎಂದರು.
ಮಹಲರೋಜ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಿಸಿರುವ ಸುಳ್ಳು ಪೋಕ್ಸೋ ಪ್ರಕರಣ ಸರ್ಕಾರ ತಕ್ಷಣ ಹಿಂದಕ್ಕೆ ಪಡೆದು ರದ್ದುಪಡಿಸಬೇಕು. ಪೋಕ್ಸೋ ಕಾಯ್ದೆ ನಿಯಮಗಳಿಗೆ ವಿರುದ್ಧವಾಗಿ ಪೊಲೀಸ್ ಠಾಣೆಗೆ ದೂರು ನೀಡಿರುವ ಸಿಡಿಪಿಒ ಅವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಿ ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಬೇಕು. ಪೋಕ್ಸೋ ಕಾಯ್ದೆಯ ಸೆಕ್ಷನ್ ೩, ೫, ೭, ೧೧ ರಂತೆ ಯಾವುದೇ ಘಟನೆ ನಡೆಯದಿದ್ದರೂ ಕೇವಲ ಸಿಡಿಪಿಒ ಅವರ ವರದಿ ಆಧರಿಸಿ, ಯಾವುದೇ ಪರಿಶೀಲನೆ, ತಪಾಸಾಣೆ ಮಾಡದೆ ಸೆಕ್ಷನ್ ೧೨ ರಡಿ ಎಫ್.ಐ.ಆರ್ ದಾಖಲಿಸಿಕೊಂಡು ಸೆಕ್ಷನ್ ೨೪, ೨೫, ೨೭ ಅನ್ನು ಪಾಲಿಸದೆ ದಿವ್ಯ ನಿರ್ಲಕ್ಷ್ಯ ತೋರಿರುವ ಗೋಗಿ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರವು ಪ್ರಕರಣವನ್ನು ಸಾಮಾಜಿಕ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿ ಪ್ರಕರಣಕ್ಕೆ ಸಂಬAಧಿದAತೆ ಪೋಕ್ಸೋ ಕಾಯ್ದೆ ಮೀರಿ ಅಧಿಕಾರ ಚಲಾಯಿಸಿದ ಯಾದಗಿರಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕ್ರಮಕ್ಕೆ ಛಿಮಾರಿ ಹಾಕಬೇಕು ಮತ್ತು ಎಲ್ಲಾ ಅಧಿಕಾರಿಗಳ ವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು. ಮಹಾಲರೋಜ ಮುತ್ಯಾ ಅವರನ್ನು ಸುಳ್ಳು ಪೋಕ್ಸೋ ಪ್ರಕರಣದಲಿ ಸಿಲುಕುವಂತೆ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನು ತಕ್ಷಣ ಹುದ್ದೆಯಿಂದ ತೆಗೆದು ಹಾಕಬೇಕು. ಬೇಷರತ್ ಕ್ಷಮೆ ಕೋರುವಂತೆ ಸರ್ಕಾರ ಸೂಚಿಸಬೇಕು. ಪೋಕ್ಸೋ ಕಾಯ್ದೆ ಸೆಕ್ಷನ್ ೨೩ ಉಲ್ಲಂಘನೆ ಮಾಡಿ ಬಾಲಕಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿ ಸಾರ್ವಜನಿಕವಾಗಿ ಮಾನ, ಮರ್ಯಾದೆ, ಘನತೆ, ಗೌರವ ಹಾಳು ಮಾಡಿದ, ಅನಾವಶ್ಯಕ ವಿಶ್ಲೇಷಣೆ ಮಾಡಿದ ಮಾಧ್ಯಮಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅಂತಹವರ ವಿರುದ್ಧ ಸುಳ್ಳು ಸುದ್ದಿ ಹರಡಿದ ಆರೋಪದಡಿ ಪ್ರಕರಣ ದಾಖಲಿಸಬೇಕು. ಒಂದು ವೇಳೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತುಕೊಳ್ಳದೆ ಕಡೆಗಣಿಸಿದರೆ ಯಾದಗಿರಿ ಚಲೋ ಚಳುವಳಿ ಹಮ್ಮಿಕೊಂಡು ಉಗ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದರು.
ನAತರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೋಲಿ ಸಮಾಜದ ಗೌರವಾಧ್ಯಕ್ಷ ರಾಮಲಿಂಗ ಬಾನಾರ್, ಕರಣಕುಮಾರ್ ಅಲ್ಲೂರ್, ಹಣಮಂತ ಸಂಕನೂರ್, ಮಲ್ಲಿಕಾರ್ಜುನ ಎಮ್ಮೇನೂರ್, ಭೀಮು ಹೊತಿನಮಡಿ, ರಾಜು ಹೋಳಿಕಟ್ಟಿ, ಮಲ್ಲಿಕಾರ್ಜುನ ಅಲ್ಲೂರಕರ್, ಸುರೇಶ ಬೆನಕನಳ್ಳಿ, ದೇವಿಂದ್ರ ಅಣಕಲ್, ಪ್ರಭು ಹಲಕಟ್ಟಿ, ಭಾಗಣ್ಣ ಹಲಕಟ್ಟಿ, ಮಹಿಪಾಲ್, ದಶರಥ ದೊಡ್ಮನಿ, ಗೂಳಿ ಡಿಗ್ಗಿ, ರಾಜು ಹುಲಿ, ಭೀಮು ಸೇರಿದಂತೆ ಅನೇಕ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.



























