ಹಿಂಗಾರು ಬೆಳೆ ಸಮಿಕ್ಷೆ ಮಾಡಿ, ಪಹಣಿಯಲ್ಲಿ ನೊಂದಣಿ ಮಾಡುವಂತೆ ಆಗ್ರಹ : ರಾಜು ನಾಯಕ

ಜೇವರ್ಗಿ :ಜ.2: ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಬೆಳೆಯು ಅತಿಯಾದ ಮಳೆಯಿಂದಾಗಿ ಅತಿವೃಷ್ಠಿಯಿಂದ ಸಂಪೂರ್ಣ ನಾಶವಾಗಿದ್ದು, ಅದರಂತೆ ಈಗ ರೈತರು ಹಿಂಗಾರು ಬೆಳೆಯನ್ನು ತಮ್ಮ ತಮ್ಮ ಜಮೀನಿನಲ್ಲಿ ಬೆಳೆಯುತ್ತಿದ್ದಾರೆ. ಆ ಬೆಳೆಗಳ ವಿವರವನ್ನು ಸಮೀಕ್ಷೆಮಾಡಿ ಪಹಣಿಯಲ್ಲಿ ನೊಂದಣಿ ಮಾಡುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಇದರಿಂದ ರೈತರಿಗೆ ಸರಕಾರದ ಸೌಲಭ್ಯ ಪಡೆದುಕೊಳ್ಳಲು ತುಂಬಾ ತೊಂದರೆಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಕಲ್ಯಾಣ ಕರ್ನಾಟಕ ವಿಭಾಗ ಸಂಚಾಲಕರಾದ ರಾಜಶೇಖರ ವಾಯ್ ಚವಡಿ (ರಾಜು ನಾಯಕ) ಆಗ್ರಹಿಸಿದ್ದಾರೆ.

ಈ ಕುರಿತು ಸಹಾಯಕ ನಿರ್ದೆಶಕರು ಕೃಷಿ ಇಲಾಖೆ ಜೇವರ್ಗಿರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಕೂಡಲೇ ಹಿಂಗಾರು ಬೆಳೆಯ ಸಮಿಕ್ಷೆಯನ್ನು ಮಾಡಿ ಪಹಣಿಯಲ್ಲಿ ನೊಂದಣಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ, ಆದಷ್ಟು ಬೇಗ ಸಮಿಕ್ಷೆ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ರೈತ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷರಾದ ಸಂತೋಷಗೌಡ ಜಿ ಮಾಲಿ ಪಾಟೀಲ ಹಂಗರಗಾ ಬಿ, ಜಿಲ್ಲಾ ಉಪಾಧ್ಯಕ್ಷರಾದ ರಮೇಶ ಹವಲ್ದಾರ, ಜಿಲ್ಲಾ ಸಂ ಸಂಚಾಲಕರಾದ ವಿಶ್ವನಾಥ ದೊರೆ, ಜೇವರ್ಗಿ ತಾಲೂಕ ಖಜಾಂಚಿ ಮಲ್ಲಣ್ಣಗೌಡ ಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.