ನಿಂಬರಗಾ ಸರಣಿ ಕಳ್ಳತನ ಪ್ರಕರಣ ತಡೆಗೆ ಆಗ್ರಹ

ಆಳಂದ:ಫೆ.೨೬: ತಾಲೂಕಿನ ಹೋಬಳಿ ಕೇಂದ್ರ ನಿಂಬರಗಾದಲ್ಲಿ ಪೊಲೀಸ್ ಠಾಣೆ ಇದ್ದರು ಸಹ ವರ್ಷದಿಂದ ಸರಣಿ ಕಳ್ಳತನ ನಡೆಯುತ್ತಿವೆ. ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮಿರಾ ಅಳವಡಿಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಸರ್ವ ಸಮಾಜ ಕಲ್ಯಾಣ ಸಮಿತಿ ಅಧ್ಯಕ್ಷ ವಿಠ್ಠಲ ಕೋಣೆಕರ್ ನೇತೃತ್ವದಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ಗ್ರಾಮದ ಪೊಲೀಸ್ ಠಾಣೆಯ ಪಿಎಸ್‌ಐ ಇಂದುಮತಿ ಹಾಗೂ ಗ್ರಾಪಂ ಪಿಡಿಒ ರವಿ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದ ಕೋಣೆಕರ್ ಅವರು ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿ, ಬಸ್ ನಿಲ್ದಾಣ ಆವರಣ, ಸರ್ಕಾರಿ ಶಾಲಾ ಕಾಲೇಜು ಆವರಣ ಹಾಗೂ ಸೇರಿ ಪ್ರಮುಖ ದೇವಸ್ಥಾನ ಗ್ರಾಮ ರಸ್ತೆಗಳಲ್ಲಿ ಸಿಸಿ ಕ್ಯಾಮಿರಾ ಅಳವಡಿಸಿ ಸುರಕ್ಷಿತೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ನಿಂಬರಗಾ ಶರಣಬಸವೇಶ್ವರ ದೇವಸ್ಥಾನದಲ್ಲಿ ಈ ಹಿಂದೆ ಮೂರ್ತಿ ಕಳ್ಳತನವಾಗಿದೆ. ಆದರೂ ಇನ್ನೂ ಪತ್ತೆಯಾಗಿಲ್ಲ, ಮನೆಗಳ ಹಾಗೂ ದ್ವಿಚಕ್ರವಾಹನಗಳ ರಾಜಾರೋಷವಾಗಿ ಕಳ್ಳತನವಾಗಿ ಜನರು ಭಯ ಭೀತಿಯಲ್ಲಿದ್ದಾರೆ.
ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು,ಅಪರಚಿತ ವಾಹನಗಳುಹಾಗೂ ದ್ವಿಚಕ್ರವಾಹನಗಳ ಕೂಡಲೇ ಪತ್ತೆಗೆ ಸಾಧ್ಯವಾಗದಂತ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ವಾರದ ಹಿಂದೆ ನಿಂಬರಗಾ ಹಿತ್ತಲಶಿರೂರ ರಸ್ತೆಯಲ್ಲಿ ಗ್ರಾಮದ ರೈತರ್ನೋನಿಗೆ ಅಪರಿಚಿತ ಟೆಂಪೋ ಡಿಕ್ಕಿ ಹೊಡೆದ ಗಾಯಾಳುಗೆ ಆಸ್ಪತ್ರೆಗೆ ಸಾಗಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದುವರೆಗೂ ಇಂಥ ವಾಹನಗಳ ಪತ್ತೆಯಾಗಿಲ್ಲ. ಸಿಸಿ ಕ್ಯಾಮಿರಾ ಇದ್ದರೆ ಕೃತೆಗಳ ಪತ್ತೆ ಹಚ್ಚಲು ಅನುಕೂಲವಾಗುತ್ತದೆ.
ಸಮಿತಿ ಅಧ್ಯಕ್ಷ ವಿಠ್ಠಲ ಕೋಣೆಕರ್, ಪ್ರಧಾನ ಕಾರ್ಯದರ್ಶಿ ಚಂದ್ರಕಾAತ ಎಸ್. ದುಗುಂಡ, ವಿಲಾಸ ಬಿರೋಜಿ, ವಿಠ್ಠಲ ಕಟ್ಟಿಮನಿ, ಯಶ್ವಂತ ಕಾಂಬಳೆ, ರಾಮು ದೇವಕರ್, ಶರಣಬಸಪ್ಪ ದುಗೊಂಡ ಸೇರಿದಂತೆ ಅನೇಕರು ಇದ್ದರು.
ಮನವಿ ಸ್ವೀಕರಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ರವಿ ಅವರು ಸಿಸಿಕ್ಯಾಮಿರಾ ಬೇಡಿಕೆಯ ಕುರಿತಾದ ಬೇಡಿಕೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪಿಎಸ್‌ಐ ಇಂದುಮತಿ ಅವರು ಸಿಸಿ ಅಳವಡಿಸುವಂತೆ ಅಧಿಕಾರಿಗಳಿಗೆ ಕೇಳಿಕೊಳ್ಳಲಾಗುವುದು ಅಲ್ಲದೆ, ಕಳ್ಳತನ ಪ್ರಕರಣದ ಪತ್ತೆಗೆ ಹಾಗೂ ಅಪಘಾತ ತನಿಖೆ ಮುಂದುವರೆದಿದೆ ಕಾಲಾವಕಾಶ ಬೇಕಿದೆ ಎಂದು ಹೇಳಿದರು.