ಸರ್ಕಾರದ ವಿವಿಧ ಮಾಸಾಶನ ಸೌಲಭ್ಯ ಪಡೆಯಲು ಆದಾಯ ಮಿತಿ ೨೫ ಸಾವಿರಕ್ಕೆ ನಿಗದಿಪಡಿಸುವಂತೆ ಒತ್ತಾಯ

ಚಿತ್ತಾಪುರ;ಅ.೨೬: ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆಯಡಿ ಕುಟುಂಬ ನೆರವು ಪರಿಹಾರ ಧನ ಪಡೆಯಲು ಹಾಗೂ ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ವೇತನ ಸೌಲಭ್ಯ ಪಡೆಯಲು ೨೫ ಸಾವಿರ ರೂ. ಒಳಗಡೆ ಆದಾಯ ಪ್ರಮಾಣ ಪತ್ರ ನೀಡುವ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿ ತಾಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದ್ದೋದ್ದೇಶ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಮಹ್ಮದ ಇಬ್ರಾಹಿಂ ಅವರು ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಸಾಮಾಜಿಕವಾಗಿ ಕಡುಬಡತನದಲ್ಲಿರುವ ಜನರು ಆದಾಯ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದಾಗ ರೂ.೮೦,೦೦೦ ಆದಾಯ ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತಿದೆ. ಸರ್ಕಾರ ರಾಷ್ಟ್ರೀಯ ಭದ್ರತಾ ಯೋಜನೆ ಕುಟುಂಬ ನೆರವು ಸೌಲಭ್ಯ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲರ ವೇತನ ಸೌಲಭ್ಯ ಪಡೆಯಲು ಆದಾಯದ ಮಿತಿ ಕೇವಲ ೨೫೦೦೦ ಮಾಡಲಾಗಿದೆ. ಕೇವಲ ೨೦೦೦೦ ರೂ. ಇದ್ದಾಗ ಮಾತ್ರ ಅರ್ಜಿಗಳು ಸ್ವೀಕೃತಿಯಾಗುತ್ತಿವೆ. ೮೦.೦೦೦ ರೂ. ಆದಾಯ ಪ್ರಮಾಣ ಪತ್ರ ಅರ್ಜಿಯೊಂದಿಗೆ ಸಲ್ಲಿಸಿದಾಗ ತಂತ್ರಾAಶದಲ್ಲಿ ಸ್ವೀಕರಿಸುತ್ತಿಲ್ಲ. ಹೀಗಾಗಿ ಜನರು ವಿವಿಧ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಂಬAಧಿತ ಸಿಬ್ಬಂಧಿಗೆ ವಿಚಾರಿಸಿದಾಗ ಸರ್ಕಾರದಿಂದಲೇ ಆದಾಯ ನಿಗಧಿ ಮಾಡಲಾಗಿದೆ. ನಾವು ಕಡಿಮೆ ಆದಾಯ ನಮೂದಿಸಿ ಕೊಡುವಂತಿಲ್ಲ ಎಂದು ನೆಪ ಹೇಳುತ್ತಿದ್ದಾರೆ. ಹೀಗಾಗಿ ಅನೇಕ ಜನ ಬಡವರು ವಿವಿಧ ಮಾಸಿಕ ಮಾಶಸನ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದರೂ ಆದಾಯ ಪ್ರಮಾಣ ಪತ್ರದಿಂದಾಗಿ ಅರ್ಜಿಗಳು ತಿರಸ್ಕಾರಗೊಳ್ಳುತ್ತಿವೆ. ಉದಾ: ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆಯಡಿ ನೆರವು ಪರಿಹಾರ ಧನ ಪಡೆಯಲು ರುದ್ರಮ್ಮ ಗಂಡ ದಿ.ಗುಂಡಪ್ಪಾ ಅವರು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಜುಲೈ ೧೪ ರಂದು ನೀಡಿರುವ ಆದಾಯ ಪ್ರಮಾಣ ಪತ್ರದಲ್ಲಿ ೮೦೦೦೦ ಆದಾಯ ತೋರಿಸಲಾಗಿದೆ. (ಖಆ೧೨೧೮೩೨೬೦೩೯೬೭೬) ಮತ್ತೋಮ್ಮೆ ಅರ್ಜಿ ಸಲ್ಲಿಸಿದಾಗ ಜುಲೈ ೨೮ ರಂದು ನೀಡಿರುವ ಆದಾಯ ಪ್ರಮಾಣ ಪತ್ರದಲ್ಲಿ ರೂ.೬೫೦೦೦ ಆದಾಯ ಆದಾಯ ನಮೊದಿಸಲಾಗಿದೆ. (ಖಆ೧೨೧೮೩೨೬೦೪೦೦೫೯) ಹೀಗಾಗಿ ಮಹಿಳೆಯು ಯೋಜನೆ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಆರ್ಥಿಕವಾಗಿ ದುರ್ಬಲ ಮತ್ತು ಜೀವನ ಸಾಗಿಸಲು ಕಷ್ಟ ಅನುಭವಿಸುತ್ತಿರುವ ಬಡವರು, ವಯೋವೃದ್ಧರು, ಅಂಗವಿಕಲರು ಸೇರಿದಂತೆ ಅನೇಕರಿಗೆ ಮಾಸಾಶನ ಸೌಲಭ್ಯವು ತಿಂಗಳ ಜೀವನಕ್ಕೆ ಸಂಜೀವಿನಿಯAತಿದೆ. ರೂ.೮೦೦೦೦ ನಮೂದು ಮಾಡಿರುವ ಆದಾಯ ಪ್ರಮಾಣ ಪತ್ರದಿಂದ ಜನರು ಸರ್ಕಾರದ ಮಾಶಸನ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಮನವರಿಕೆ ಮಾಡಿದ್ದಾರೆ.
ಸದರಿ ವಿಷಯವನ್ನು ಗಂಭೀರ ಮತ್ತು ತುರ್ತು ಎಂದು ಪರಿಗಣಿಸಿ ಜನರು ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆಯಡಿ ಪರಿಹಾರ ಧನ ಪಡೆಯಲು ಹಾಗೂ ವಿವಿಧ ಮಶಾಸನ ಸೌಲಭ್ಯ ಪಡೆಯಲು ಅನುಕೂಲ ಆಗುವಂತೆ ಆದಾಯ ರೂ.೨೦೦೦೦ ಎಂದು ನಮೂದಿಸಿ ಆದಾಯ ಪ್ರಮಾಣ ಪತ್ರ ನೀಡುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.