ಮೆಕ್ಕೆಜೋಳ ಖರೀದಿ ೧೦೦ ಕ್ವಿಂಟಲ್‌ಗೆ ಹೆಚ್ಚಿಸಲು ಆಗ್ರಹ


ಲಕ್ಷೆ÷್ಮÃಶ್ವರ,ಡಿ.೪:
ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಮೆಕ್ಕೆಜೋಳ ಬೆಳೆದ ರೈತರನ್ನು ದಿನಕ್ಕೊಂದು ಆದೇಶ ಮಾಡುತ್ತ ದಿಕ್ಕು ತಪ್ಪಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ಪಲ್ಲೇದ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಸವರಾಜ ಇಟಗಿ ಟಿ ಎ ಎ ಪಿ ಸಿ ಎಂ ಎಸ್ ಅಧ್ಯಕ್ಷ ಸೋಮಣ್ಣ ಉಪನಾಳ ಅವರು ಸರಕಾರ ಈಗಿರುವ ೨೦ ಕ್ವಿಂಟಲ್ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿರುವ ಮೆಕ್ಕೆಜೋಳದ ಮೀತಿಯನ್ನು ೧೦೦ ಕ್ವಿಂಟಲಗೆ ಹೆಚ್ಚಿಸಬೇಕು ಹಾಗೂ ಖರೀದಿಯ ಮಾನದಂಡಗಳನ್ನು ಸಡಿಲಿಸಿ ಯಾವುದೇ ಗುಣಮಟ್ಟ ಪರಿಶೀಲಿಸದೆ ರೈತರಿಗೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು ರಾಜ್ಯದಲ್ಲಿ ಟಿಎಟಿಸಿಎಂಎಸ್ ಮತ್ತು ಕೆಎಮ ಎಫ್ ದ ಮುಖಾಂತರ ಖರೀದಿ ಮಾಡುತ್ತಿದ್ದು ರೈತರಿಗೆ ಅನುಕೂಲ ಆಗುವಂತೆ ಪ್ರತಿ ದಿವಸ ಯಾವ ರೈತರ ಮೆಕ್ಕೆಜೋಳ ಖರೀದಿ ಮಾಡಲಾಗುತ್ತದೆ ಎನ್ನುವುದನ್ನು ಟೊಕ್ಕನ ನೀಡಿ ಮೆಸೇಜ್ ಮೂಲಕ ಸಂಬAಧಪಟ್ಟ ಅಧಿಕಾರಿಗಳು ರೈತರಿಗೆ ತಿಳಿಸಬೇಕೆಂದು ಹೇಳಿದರು.


ಅವರು ಇದೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಡಿಬಿಟಿ ಮೂಲಕ ರೈತರ ಖಾತೆಗಳಿಗೆ ಹಣ ಜಮೆ ಮಾಡುವುದರಿಂದ ಬ್ಯಾಂಕನವರು ಸಾಲದ ಖಾತೆಗಳಿಗೆ ಜಮೆ ಮಾಡುವ ಸಾಧ್ಯತೆ ಇರುವುದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ ಆದರಿಂದ ಜಿಲ್ಲೆಯ ಬ್ಯಾಂಕುಗಳ ಮುಖ್ಯಸ್ಥರ ಸಭೆ ಕರೆದು ಸ್ಪಷ್ಟ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಿಂಗಪ್ಪ ಬನ್ನಿ,ಚನ್ನವೀರಪ್ಪ ಹೂಗಾರ, ಅನೀಲ ಮುಳಗುಂದ,ಗAಗಾಧರ ಮೆಣಸಿನಕಾಯಿ, ಪ್ರವೀಣ ಬೋಮಲೆ,ಬಸವರಾಜ ಕಲ್ಲೂರ,ಅಶೋಕ. ಸೂರಣಗಿ ಸಂತೋಷ ಜಾವೂರ,ಸೇರಿದಂತೆ ಅನೇಕರು ಇದ್ದರು.