
ಬಸವಕಲ್ಯಾಣ,ಜು೫: ತಾಲೂಕಿನ ಮಂಠಾಳ ಗ್ರಾಮದಲ್ಲಿ ನಡೆಯುತ್ತಿರುವ ಅನಧಿಕೃತ ಮದ್ಯ ಮಾರಾಟ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಯುವ ಕ್ರಾಂತಿ ಸಂಘಟನೆ ಒತ್ತಾಯಿಸಿದೆ.
ಸಂಘಟನೆಯ ಸ್ಥಳೀಯ ಘಟಕದ ಪ್ರಮುಖರು ಹಾಗೂ ಪದಾಧಿಕಾರಿಗಳ ನಿಯೋಗದಿಂದ ನಗರದ ಅಬಕಾರಿ ಇಲಾಖೆ ಕಚೇರಿಗೆ ತೆರಳಿ, ಬೇಡಿಕೆ ಸಂಬAಧ ಅಬಕಾರಿ ಇಲಾಖೆ ಉಪ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ಸ್ಥಳದಲಿದ್ದ ಅಬಕಾರಿ ಇಲಾಖೆ ನಿರೀಕ್ಷಕರಿಗೆ ಸಲ್ಲಿಸಲಾಯಿತು.ತಾಲೂಕಿನ ಹೊಬಳಿ ಕೇಂದ್ರಗಳಲ್ಲಿ ಒಂದಾಗಿರುವ ಮಂಠಾಳ ಗ್ರಾಮದ ಕಿರಾಣಿ ಅಂಗಡಿ, ಹೋಟೆಲ್‌ಗಳು ಸೇರಿದಂತೆ ನಾನಾ ಅಂಗಡಿಗಳಲ್ಲಿ ಪರವಾನಿಗೆ ಇಲ್ಲದೆ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದ್ದು, ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಹೀಗಾಗಿ ಅಕ್ರಮ ಮದ್ಯ ಮಾರಾಟಗಾರರಿಗೆ ಯಾವುದೇ ಭಯ ವಿಲ್ಲದಂತಾಗಿದೆ ಎಂದು ಆರೋಪಿಸಲಾಗಿದೆ.ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಸಂದೀಪ್ ಪಾಟೀಲ್, ಪ್ರಮುಖರಾದ ವೀರೇಶ್ ಗುಡ್ಡಾ, ಮಹೇಶ್ ಜಾಧವ್, ಅಂಕುಶ್ ಧರೆ, ಮಹೇಶ್ ಬಿರಾದಾರ, ಆದೇಶ್ ಸುಣಗಾರ್ ಸೇರಿದಂತೆ ಪ್ರಮುಖರು ಇದ್ದರು.


































