Home ಜಿಲ್ಲೆ ಒಳಮೀಸಲಾತಿ ಅನ್ಯಾಯ ಸರಿಪಡಿಸಲು ಒತ್ತಾಯ

ಒಳಮೀಸಲಾತಿ ಅನ್ಯಾಯ ಸರಿಪಡಿಸಲು ಒತ್ತಾಯ

ಬೀದರ, ಫೆ. ೨೫: ಒಳಮೀಸಲಾತಿಯಿಂದ ಬಲಗೈ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಕ್ಷಣ ಸರಿಪಡಿಸುವಂತೆ ಆಗ್ರಹಿಸಿ ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿಯವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒತ್ತಾಯ ಪತ್ರ ಸಲ್ಲಿಸಿದರು.
ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ರಾಜ್ಯಪಾಲರು, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ. ಮಹಾದೇವಪ್ಪ, ಗೃಹ ಸಚಿವರಾದ ಡಾ. ಜಿ. ಪರಮೇಶ್ವರ, ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗಿದೆ.
ಇದೇ ವೇಳೆ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ. ಮೂರ್ತಿ ಎಲ್ ಅವರಿಗೆ ಬೀದರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕವಾಗಿ ಪತ್ರ ನೀಡಲಾಗಿದೆ.
ಒಂದು ವಾರದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಸಮುದಾಯದ ವತಿಯಿಂದ ಸಭೆ ನಡೆಸಿ ಬೀದರ ಬಂದ್‌ಗೆ ಕರೆ ನೀಡಲಾಗುವುದು ಎಂದು ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಮಹೇಶ ಗೋರನಾಳಕರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರದೀಪ್ ನಾಟೆಕರ್, ಪ್ರಕಾಶ ರಾವಣ್, ಭೀಮರಾವ ಮಾಲಗತ್ತಿ, ರಾಹುಲ್ ಡಾಂಗೆ, ಪವನ ಮಿಠಾರೆ, ಸಂಜುಕುಮಾರ ಸಾಗರ, ವಿನೋದ ಬಂದಗೆ, ಸೂರ್ಯಕಾಂತ ಸಾಧೂರೆ, ಅರುಣ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಲಗೈ ಸಮುದಾಯದ ಹೋರಾಟಗಾರರಾದ ಮಾರುತಿ ಬೌದ್ಧೆ, ಅನೀಲಕುಮಾರ ಬೆಲ್ದಾರ, ಡಾ. ಕಾಶಿನಾಥ ಚೆಲ್ವಾ, ವಿಠಲದಾಸ ಪ್ಯಾಗೆ, ಶ್ರೀಪತರಾವ ದಿನೆ, ಶಿವಕುಮಾರ ನೀಲಿಕಟ್ಟಿ, ದಶರಥ ಗುರು, ಸಂದೀಪ್ ಕಾಂಟೆ, ಸುನೀಲ ಸಂಗಮ್ ಸೇರಿದಂತೆ ಸಮುದಾಯದ ನೂರಾರು ಹೋರಾಟಗಾರರು ಭಾಗವಹಿಸಿದ್ದರು.ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರದೀಪ ನಾಟೆಕರ್,ಪ್ರಕಾಶ ರಾವಣ್,ಭೀಮರಾವ ಮಾಲಗತ್ತಿ, ರಾಹುಲ್ ಡಾಂಗೆ, ಪವನ ಮಿಠಾರೆ, ಸಂಜುಕುಮಾರ ಸಾಗರ, ವಿನೋದ ಬಂದಗೆ,ಸೂರ್ಯಕಾAತ ಸಾಧೂರೆಅರುಣ ಪಟೇಲ್,
ಬಲಗೈ ಸಮುದಾಯದ ಹೋರಾಟಗಾರರಾದ, ಮಾರುತಿ ಬೌಧ್ದೆ, ಅನೀಲಕುಮಾರ ಬೆಲ್ದಾರ, ಡಾ.ಕಾಶಿನಾಥ ಚೆಲ್ವಾ, ವಿಠಲದಾಸ ಪ್ಯಾಗೆ, ಶ್ರೀಪತರಾವ ದಿನೆ, ಶಿವಕುಮಾರ ನೀಲಿಕಟ್ಟಿ, ದಶರಥ ಗುರು, ಸಂದೀಪ್ ಕಾಂಟೆ, ಸುನೀಲ ಸಂಗಮ್,ಪ್ರಮುಖರಾದ ಕೆ.ಪುಂಡಲಿಕರಾವ, ಅರವಿಂದಕುಮಾರ ಅರಳಿ, ಶಂಕರ ದೊಡ್ಡಿ, ವಿಜಯಕುಮಾರ ಗಾಯಕವಾಡ, ಶಂಬುಲಿAಗ ಕುದರೆ, ಪ್ರದೀಪ್ ಜಂಜಿರೆ, ದೇವೆಂದ್ರ ಸೋನಿ, ಭರತ ಕಾಂಬಳೆ, ಸಂಜುಕುಮಾರ ಲಾಧಾ, ತುಕಾರಾಮ ಹಸನ್ಮುಖಿ, ಶಿವಮೂರ್ತಿ ಸುಬಾನೆ, ಅಶೋಕ ಮಾಳಗೆ, ಉದಯ ನಾಯಕ, ಪುಟ್ಟರಾಜ ದೀನೆ, ಸುಭಾಷ ಲಾಧಾ, ಝರೇಪ್ಪಾ ಬೆಲ್ದಾರ, ಗೋಪಾಲ ಸಾಗರ, ಮೋಹನ ಡಾಂಗೆ, ಬಸವರಾಜ ಅಲಿಯಂಬರ, ರಾಹುಲ್ ಹಾಲೆಪೂರ್ಗಿಕರ್, ಮಲ್ಲಿಕಾರ್ಜುನ ಮೊಳಕೇರೆ, ಬಾಬು ಆಣದೂರ, ಅರ್ಜುನ ಸಾಗರ, ಶರಣು ಫುಲೆ, ಧನರಾಜ ಜ್ಯೋತಿ, ಸುನೀಲ ಮೀತ್ರಾ, ಲೋಕೆಶ ಕಾಂಬಳೆ, ಸಮುದಾಯದ ನೂರಾರು ಜನ ಹೋರಾಟಗಾರರು ಉಪಸ್ಥಿತರಿದ್ದರು