ಕಲಬುರಗಿ,ಸೆ.19: ಜಿಲ್ಲೆಯು ತುಂಬಾ ಹಿಂದುಳಿದ ಪ್ರದೇಶವಾಗಿದ್ದು,ಇದಕ್ಕೆ ಈಗಾಗಲೇ 371 (ಜೆ) ಅಡಿಯಲ್ಲಿ ಮಾನ್ಯತೆ ನೀಡಿದ್ದು, ಆದರೆ ಅಭಿವೃದ್ಧಿ ಕಾರ್ಯ ಮಾತ್ರ ಶೂನ್ಯವಾಗುತ್ತಿವೆ.ಜಿಲ್ಲೆಯ ಪ್ರಮುಖ ನಗರ, ಹಳ್ಳಿಗಳಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಸಂಚಾರಕ್ಕಾಗಿ ತುಂಬಾ ಪರದಾಡುತ್ತಿದ್ದಾರೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ಆನಂದ ತೆಗನೂರ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಭಾರಿ ಮಳೆ ಬಂದರೆ ರೈತರು ಜಮೀನುಗಳಿ ಹೋಗಿ ಬರುವುದಕ್ಕೆ ರಸ್ತೆ ಸಂಪರ್ಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೆ ಪ್ರಮುಖ ನಗರಗಳಲ್ಲಿ ಸಹ ಪ್ರತಿಯೊಂದು ಒಣಿಯ ಬೀದಿಗಳಲ್ಲಿ ಒಂದಿಲ್ಲೊಂದು ನೆಪ ಮಾಡಿ ರಸ್ತೆಗಳು ಅಗೆದು ಹಾಗೇನೆ ಬಿಟ್ಟು ದೊಡ್ಡ ದೊಡ್ಡ ತಗ್ಗು ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ದಿನೇ ದಿನೇ ಬೆಳೆಯುತ್ತಿರುವ ಕಲುಬರಗಿ ನಗರದಲ್ಲಿ ವಾಹನಗಳ ಓಡಾಟ ಸಾರ್ವಜನಿಕ ಓಡಾಟ ಹೆಚ್ಚಾಗಿ, ಜನಸಂದಣಿ ಹೆಚ್ಚಾಗಿ ಆಗುತ್ತಿದ್ದು, ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ. ಆದರೆ ನಮ್ಮ ಜಿಲ್ಲೆಯ ಅಧಿಕಾರಿಗಳು ಮಾತ್ರ ಇತ್ತ ಕಡೆ ಯಾವುದೇ ಗಮನ ಹರಿಸುತ್ತಿಲ್ಲ, ಅಭಿವೃದ್ಧಿ ಕಾರ್ಯ ಕುಂಠಿತವಾಗುತ್ತಿದೆ. ಇದಕ್ಕೆ ಜಿಲ್ಲೆಯ ಅಧಿಕಾರಿಗಳು, ಜಿಲ್ಲಾಢಳಿತ ಪ್ರಮುಖ ಕಾರಣವಾಗಿದೆ. ಕಾರಣ ಈ ಭಾಗದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸಿ ಕೂಡಲೇ ಈ ಕಾರ್ಯಗಳು ನೇರವೇರಿಸಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.





















