ಸಚಿವಪ್ರಿಯಾಂಕ್‍ಖರ್ಗೆಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸಲು ಆಗ್ರಹ

ಕಲಬುರಗಿ,ಅ.16: ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿಯನ್ನು ಕೂಡಲೇ ಬಂದಿಸುವಂತೆ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗರಾಜ್ಯ ಉಪಾಧ್ಯಕ್ಷ ಕಿಶೋರ್ ಗಾಯಕವಾಡ ಆಗ್ರಹಿಸಿದ್ದಾರೆ.
ಸರ್ಕಾರಿ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳ ಆವರಣದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ ಅವರು, ಇತ್ತೀಚಿಗೆ ಮುಖ್ಯಮಂತ್ರಿಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ನಿಲುವಿನ ಬಗ್ಗೆ ಆಕ್ಷೇಪ ಮತ್ತು ಭಿನ್ನಾಭಿಪ್ರಾಯ ಇದ್ದವರು ಸಚಿವರು ಕೇಳಲಾದ ಪ್ರಶ್ನೆಗಳಿಗೆ ಸಾರ್ವಜನಿಕ ಚರ್ಚೆಯನ್ನು ಇಲ್ಲವೇ ಸಂವಾದ ಇಟ್ಟುಕೊಳ್ಳಲಿ. ಆದರೆ ಸಂವಾದ ಮತ್ತು ಚರ್ಚೆಯನ್ನು ಮಾಡಲಿಕ್ಕೆ ಇಚ್ಚಿಸದೆ, ಸಚಿವರನ್ನೇ ಬೆದರಿಸುವ ಹೀನ ಕೃತ್ಯಕ್ಕೆ ಇಳಿದಿರುವದು ಆರ್ ಎಸ್ ಎಸ್
ತಲುಪಿರುವ ದುಸ್ಥಿತಿಯ ಸಂಕೇತವಾಗಿ ಕಾಣುತ್ತದೆ ಎಂದು ಅವರು ತಿಳಿಸಿದ್ದಾರೆ.
ಆರ್ ಎಸ್ ಎಸ್‍ಸಂಸ್ಥೆಯು ನಿಜವಾಗಿಯೂ ರಾಷ್ಟ್ರಪ್ರೇಮ ಸಂಘಟನೆ ಆಗಿದ್ದರೆ ದೇಶದ ಜನರ ಮುಂದೆ ತನ್ನ ನೋಂದಣಿ ಪತ್ರ ಮುಂದಿಡಲು ಮತ್ತು ಸಂಘಟನೆ ಮತ್ತು ಅದರ ಪ್ರಮುಖರು ದೇಶ ಮತ್ತು ರಾಜ್ಯದಲ್ಲಿನ ಪ್ರಖ್ಯಾತ ಉದ್ಯಮಿಗಳು ಮತ್ತು ಪ್ರಭಾವಿಗಳಿಂದ ಪಡೆದಿರುವ ದೇಣಿಗೆ ಮತ್ತು ದಾನದ ಮೂಲಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.