ಕಬ್ಬು ಕಟಾವು,ಸಾಗಾಣಿಕೆ ಖರ್ಚು ಸರ್ಕಾರ ಭರಿಸಲು ಆಗ್ರಹ

ಕಲಬುರಗಿ,ಜು.೧: ಸಕ್ಕರೆ ನಿರ್ದೇಶನಾಲಯ ನಿಗದಿಪಡಿಸಿರುವು ಕಬ್ಬು ಕಟಾವು ಖರ್ಚು ೧೧೪ ರೂ ಸಾಗಣಿಕೆ ಖರ್ಚು ೧೨ ರೂ ಸರ್ಕಾರವೇ ಭರಿಸಬೇಕೆಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಎಸ್ ಹೂಗಾರ್ ಆಗ್ರಹಿಸಿದ್ದಾರೆ.
ರೈತ ಸಂಕಷ್ಟದಲ್ಲಿ ಇದ್ದ ಕಾರಣ ರೈತನಿಗೆ ಹೆಚ್ಚುವರಿ ಕಬ್ಬು ಕಟಾವು ಕೂಲಿ ಕೊಡಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಸಕ್ಕರೆ ಕಾರ್ಖಾನೆ ಮತ್ತು ರೈತರ ಸಭೆ ಕರೆದು ದ್ವಿಪಕ್ಷ ಒಪ್ಪಂದ ಜಾರಿಗೆ ತರಬೇಕು.ಹಿಂದೆ ಸರ್ಕಾರ ಘೋಷಿಸಿರುವ ಸಕ್ಕರೆ ಕಾರ್ಖಾನೆಗಳ ಮುಂಭಾಗದಲ್ಲಿ ಸರ್ಕಾರದಿಂದ ತೂಕದ ಯಂತ್ರ ಅಳವಡಿಸಬೇಕು.ಸಕ್ಕರೆ ಕಾರ್ಖಾನೆಗಳು ಇಳುವರಿಯಲ್ಲಿ ಮೋಸ ಮಾಡುವುದನ್ನು ತಡೆಗಟ್ಟಲು ಸರ್ಕಾರದಿಂದ ಸಕ್ಕರೆ ಇಳುವರಿ ಪರಿಶೀಲನೆ ಮಾಡುವ ಲ್ಯಾಬ್ ಟೆಕ್ನಾಲಜಿ ಸ್ಥಾಪಿಸಬೇಕು.ಕಾರ್ಖಾನೆಪ್ರಾರಂಭವಾಗುವುದಕ್ಕಿAತ ಮುಂಚೆ ಸರ್ಕಾರ ಮತ್ತು ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್ ಆರ್ ಪಿ ಅವೈಜ್ಞಾನಿಕ ಬೆಲೆಯನ್ನು ಹೊರತುಪಡಿಸಿ ರೈತರಿಗೆ ಕಟಾವು ಮತ್ತು ಸಾಗಣಿಕೆ ಹೊರತುಪಡಿಸಿ ಕನಿಷ್ಠ ಪ್ರತಿ ಟನ್ನಿಗೆ ೪೫೦೦ ಕಬ್ಬಿನ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.